ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು: ಉಚಿತ ಹಿಟ್ಟು ವಿತರಣೆ ಸಂದರ್ಭದಲ್ಲಿ ಕಾಲ್ತುಳಿತಕ್ಕೆ 11 ಜನರ ಸಾವು

ನವದೆಹಲಿ: ಆರ್ಥಿಕ ಬಿಟ್ಟಿಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರಿ ವಿತರಣಾ ಕೇಂದ್ರಗಳಿಂದ ಉಚಿತ ಹಿಟ್ಟು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾಗ ನೂಕು-ನುಗ್ಗಾಟದಿಂದಾಗಿ ಕಳೆದ ಕೆಲವು ದಿನಗಳಲ್ಲಿ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ನಾಲ್ಕು ಜಿಲ್ಲೆಗಳಾದ ಸಾಹಿವಾಲ್, ಬಹವಾಲ್‌ಪುರ್, ಮುಜಾಫರ್‌ಗಢ್ ಮತ್ತು ಒಕಾರಾದಲ್ಲಿನ ಉಚಿತ ಹಿಟ್ಟಿನ ಕೇಂದ್ರಗಳಲ್ಲಿ ಕಾಲ್ತುಳಿತದಲ್ಲಿ ಇಬ್ಬರು ವೃದ್ಧ ಮಹಿಳೆಯರು ಮತ್ತು ಒಬ್ಬ ಪುರುಷ ಮಂಗಳವಾರ ಮೃತಪಟ್ಟಿದ್ದಾರೆ, ಇತರ 60 ಮಂದಿ ಗಾಯಗೊಂಡಿದ್ದಾರೆ. ಫಸೈಲಾಬಾದ್, ಜೆಹಾನಿಯನ್ ಮತ್ತು ಮುಲ್ತಾನ್ ಸಹ ಕಾಲ್ತುಳಿತದಿಂದ ಸಾವುಗಳಾಗಿವೆ ಎಂದು ವರದಿ ಹೇಳಿದೆ.
ಹಣದ ಕೊರತೆಯಿರುವ ಸರ್ಕಾರವು ಬಡವರಿಗೆ ವಿಶೇಷವಾಗಿ ಪಂಜಾಬ್ ಪ್ರಾಂತ್ಯದಲ್ಲಿ ಉಚಿತ ಹಿಟ್ಟಿನ ಯೋಜನೆಯನ್ನು ಪರಿಚಯಿಸಿದ ನಂತರ ಹಲವಾರು ಜನರು ಸರ್ಕಾರಿ ವಿತರಣಾ ಕೇಂದ್ರಗಳಿಗೆ ನುಗ್ಗಿದ ನಂತರ ಕಾಲ್ತುಳಿತಗಳು ವರದಿಯಾಗಿವೆ.
ಗಗನಕ್ಕೇರುತ್ತಿರುವ ಹಣದುಬ್ಬರ ಕಡಿಮೆ ಮಾಡಲು ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರ ಹೆಚ್ಚುತ್ತಿರುವ ಜನಪ್ರಿಯತೆ ಎದುರಿಸಲು ಈ ಯೋಜನೆಗಳು ಬಂದಿವೆ.

ವಿತರಣಾ ಕೇಂದ್ರಗಳಲ್ಲಿ ಭಾರಿ ಜನಸಮೂಹ ನೆರೆದಿದ್ದರಿಂದ, ಮುಜಾಫರ್‌ಘರ್ ಮತ್ತು ರಹೀಮ್ ಯಾರ್ ಖಾನ್ ನಗರಗಳಲ್ಲಿ ಟ್ರಕ್‌ಗಳಿಂದ ಉಚಿತ ಹಿಟ್ಟನ್ನು ಲೂಟಿ ಮಾಡುವುದನ್ನು ತಡೆಯಲು ಪೊಲೀಸರು ಭಾರೀ ಶ್ರಮ ಪಡಬೇಕಾಯಿತು.
ಏತನ್ಮಧ್ಯೆ, ಜನಸಂದಣಿ ಮತ್ತು ಜನರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು ಬುಧವಾರ ಬೆಳಿಗ್ಗೆ 6 ಗಂಟೆಗೆ ಉಚಿತ ಹಿಟ್ಟಿನ ಕೇಂದ್ರಗಳನ್ನು ತೆರೆಯುವುದಾಗಿ ಪಂಜಾಬ್ ಉಸ್ತುವಾರಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಪ್ರಕಟಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಶ್ವದಲ್ಲೇ ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಂತೀಯ ಸಚಿವರು ಮತ್ತು ಕಾರ್ಯದರ್ಶಿಗಳು ಮುಂದಿನ ಮೂರು ದಿನಗಳ ಕಾಲ ನಿಯೋಜಿತ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಹಿಟ್ಟು ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲು ನಿರ್ಧರಿಸಲಾಯಿತು.
ಪಂಜಾಬ್‌ನ ವಿವಿಧ ನಗರಗಳಲ್ಲಿನ ಸಾವುಗಳ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಜನರಿಗೆ ಅವರ ಅನುಕೂಲಕ್ಕಾಗಿ ಉತ್ತಮ ಮಾರ್ಗದರ್ಶನ ಮತ್ತು ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಸರ್ಕಾರವು ಉಚಿತ ಹಿಟ್ಟಿನ ಕೇಂದ್ರಗಳಲ್ಲಿ ನೂಕು-ನುಗ್ಗಲಿನಿಂದ ಉಂಟಾದ ಸಾವಿಗೆ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಂಜಾಬ್ ಉಸ್ತುವಾರಿ ಮುಖ್ಯಮಂತ್ರಿ ನಖ್ವಿ ಹೊಣೆಗಾರರು ಆರೋಪಿಸಿದ್ದಾರೆ. ‘ಕಳ್ಳರ ಸರ್ಕಾರ’ದಿಂದ ಜನಜೀವನ ದುಸ್ತರವಾಗಿದ್ದು, ಹಿಟ್ಟು ಸಂಗ್ರಹಿಸಲು ಪರದಾಡುವಂತಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿಶ್ವದಲ್ಲೇ ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement