ಹಿರಿಯ ನಟ ಶರತ್ ಬಾಬು ಆಸ್ಪತ್ರೆಗೆ ದಾಖಲು

ಬಹುಭಾಷಾ ನಟ ಶರತ್ ಬಾಬು (71) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಈ ಕುರಿತು ತೆಲುಗು ನಟಿ ಕರಾಟೆ ಕಲ್ಯಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಶೇರ್​​ ಮಾಡಿಕೊಂಡಿದ್ದಾರೆ. ಸದ್ಯ ಹಿರಿಯ ನಟ ಶರತ್ ಬಾಬು ಅವರ ಆರೋಗ್ಯದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಶರತ್ ಬಾಬು ಅನಾರೋಗ್ಯ ಸುದ್ದಿ ಕೇಳಿದ ಕೂಡಲೇ ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತಿದ್ದಾರೆ.
. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟ ಶರತ್ ಬಾಬು ಅವರು ಅಭಿನಯಿಸಿದ್ದಾರೆ. ರಣಚಂಡಿ, ಕಂಪನ, ಶಕ್ತಿ, ಅಮೃತವರ್ಷಿಣಿ, ಬೃಂದಾವನ, ಹೃದಯ ಹೃದಯ, ನೀಲಾ, ನಮ್ ಯಜಮಾನ್ರು ಸೇರಿದಂತಾ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement