ಅಪರೂಪದ ಬೇಟೆ..: ಮರದಿಂದ ಮರಕ್ಕೆ ಜಿಗಿಯುತ್ತಲೇ ಮಂಗನ ಬೇಟೆಯಾಡಿದ ಚಿರತೆ | ವೀಕ್ಷಿಸಿ

ಚಿರತೆಗಳು ಬೇಟೆಯಾಡಲು, ವೇಗವಾಗಿ ಓಡುವ ವಿಶೇಷ ಸಾಮರ್ಥ್ಯ ಹೊಂದಿರುತ್ತವೆ. ಅವುಗಳು ಮರ ಏರುವುದರಲ್ಲಿಯೂ ಚತುರ ಪ್ರಾಣಿಗಳು. ದೈತ್ಯಾಕಾರದ ಮರ ಏರಿ ಬೇಟೆಯಾಡುವುದನ್ನು ನಾವು ನೋಡಿರುತ್ತೇವೆ. ಸಾಮಾನ್ಯವಾಗಿ ಮಂಗಗಳು, ಸಿಂಗಳೀಕಗಳು ಮರದಿಂದ ಮರಕ್ಕೆ ಜಿಗಿಯುವುದರಲ್ಲಿ ನಿಪುಣ ಪ್ರಾಣಿಗಳು ಹಾಗೂ ಹೆಚ್ಚಾಗಿ ಮರದಲ್ಲಿಯೇ ವಾಸಿಸುತ್ತವೆ. ಆದರೆ ಚಿರತೆ ಮರದಿಂದ, ಮರಕ್ಕೆ ಮಂಗನಂತೆ ಜಿಗಿದು ಬೇಟೆಯಾಡುವುದನ್ನು ನೋಡಿದ್ದೀರಾ..? ಈ ವೀಡಿಯೊ ಕ್ಲಿಪ್‌ನಲ್ಲಿ ಚಿರತೆಯೊಂದು ಮರದಿಂದ ಮರಕ್ಕೆ ಛಂಗನೆ ಹಾರಿ ಮಂಗವನ್ನು ಬೇಟೆಯಾಡುವುದು ಕಂಡುಬರುತ್ತದೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.

ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಾಂತ ನಂದಾ ಅವರು ಈ ವೀಡಿಯೊ ಕ್ಲಿಪ್‌ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವೈರಲ್ ಆದ ವೀಡಿಯೊದಲ್ಲಿ ಕೋತಿಗಳು ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತಾ ಪಾರಾಗುವುದನ್ನು ಕಾಣಬಹುದು. ಚಿರತೆಯೂ ಕೂಡ ಕೋತಿಗಳನ್ನು ಬೆನ್ನಟ್ಟಿಕೊಂಡು ಒಂದು ಮರದಿಂದ ಮತ್ತೊಂದು ಮರಕ್ಕೆ ಮರಕ್ಕೆ ಹಾರುತ್ತಿದೆ. ಕೊನೆಗೂ ಒಂದು ಕೋತಿಯನ್ನು ಬೇಟೆಯಾಡಲು ಯಶಸ್ವಿಯಾಗಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ಚಿರತೆಗಳು ಕೇವಲ ಅವಕಾಶವಾದಿ ಮಾತ್ರವಲ್ಲ, ಅವುಗಳು ಬಹುಮುಖ ಬೇಟೆಗಾರರಾಗಿವೆ ಅಂತಾ ಅರಣ್ಯಾಧಿಕಾರಿ ಸುಸಾಂತ ನಂದಾ ಅವರು ಟ್ವಟಿರಿನಲ್ಲಿ ಬರೆದಿದ್ದಾರೆ. ವೈರಲ್ ಆದ ವಿಡಿಯೋವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಈ 15 ಸೆಕೆಂಡುಗಳ ವೀಡಿಯೊವನ್ನು ಟ್ವೀಟ್ ಮಾಡಿದ ತಕ್ಷಣ, ಕೆಲವೇ ದಿನಗಳಲ್ಲಿ ಇದು ಸುಮಾರು 2 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಬಳಕೆದಾರರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement