230 ಅಡಿ ಆಳದ ಗುಹೆಯಲ್ಲಿ 500 ದಿನಗಳನ್ನು ಒಬ್ಬಂಟಿಯಾಗಿ ಕಳೆದ ಸ್ಪೇನ್‌ ಮಹಿಳೆ | ವೀಕ್ಷಿಸಿ

ಸ್ಪೇನ್ ಮಹಿಳೆಯೊಬ್ಬಳು ಸುಮಾರು 230 ಅಡಿ ಆಳದ ಗುಹೆಯಲ್ಲಿ 500 ದಿನಗಳ ಕಾಲ ಒಬ್ಬಂಟಿಯಾಗಿ ಕಳೆಯುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.
ಬಿಟ್ರೀಜ್ ಫ್ಲಾಮಿನಿ ಎಂಬ ಸ್ಪೇನ್‌ನ 50 ವರ್ಷದ ಮಹಿಳಾ ಪರ್ವತಾರೋಹಿ ಈ ಸಾಧನೆ ಮಾಡಿದ್ದಾರೆ. ಬಿಟ್ರೀಜ್ ಅವರು ಮ್ಯಾಡ್ರಿಡ್ ಬಳಿಯ ಗ್ರವಾಡಾದ 230 ಅಡಿ ಆಳದ ಗುಹೆಯಲ್ಲಿ 500 ದಿನಗಳ ಕಾಲ ಒಬ್ಬರೇ ತಂಗಿದ್ದರು.ಆಧುನಿಕ ಮಾನವ ಇಷ್ಟೊಂದು ದಿನಗಳ ಕಾಲ ಗುಹೆಯಲ್ಲಿ ಒಬ್ಬರೇ ಇದ್ದು ಯಶಸ್ವಿಯಾಗಿ ಹೊರಬಂದಿರುವುದು ಇದೇ ಮೊದಲು. ಇದೊಂದು ವಿಶ್ವದಾಖಲೆ ಎಂದು ರಾಯಿಟರ್ಸ್ ಪತ್ರಿಕೆ ಶನಿವಾರ (ಏಪ್ರಿಲ್ 15) ವರದಿ ಮಾಡಿದೆ.
ಸ್ಪೇನ್ ಮಹಿಳೆ ಬಿಟ್ರೀಜ್ ಫ್ಲಾಮಿನಿ ಅವರು ಗುಹೆಯಿಂದ ಯಶಸ್ವಿಯಾಗಿ ಹೊರಬಂದಾಗ ಅವರನ್ನು ಇತರೆ ಪರ್ವತಾರೋಹಿಗಳು, ಸ್ನೇಹಿತರು ಹಾಗೂ ವಿಜ್ಞಾನಿಗಳು ಶುಕ್ರವಾರ (ಏಪ್ರಿಲ್ 14) ಗ್ರವಾಡಾದಲ್ಲಿ ಸ್ವಾಗತಿಸಿದರು.
ಬಿಟ್ರೀಜ್ ಅವರು ಗುಹೆಯಲ್ಲಿದ್ದ ಅಷ್ಟೊಂದು ದಿನಗಳ ಕಾಲ ಒಬ್ಬರೇ ಇದ್ದಾಗ ತಮ್ಮೊಡನೆಯೇ ಮಾತನಾಡಿಕೊಳ್ಳುತ್ತಿದ್ದರು. ಅದು ಅವರಿಗೆ ಅನಿವಾರ್ಯವಾಗಿತ್ತು. ಬಿಟ್ರೀಜ್ ಅವರು ಗುಹೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಧ್ಯಯನ ಮಾಡಲು 60ಕ್ಕಿಂತ ಹೆಚ್ಚು ಪುಸ್ತಕಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು.
ತಮ್ಮ ಗುಹೆಯ ವಾಸದ ಕುರಿತು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಹಕಾರಿಯಾಗಲು ಎರಡು ಕ್ಯಾಮರಾಗಳನ್ನು ತಮ್ಮೊಡನೆ ಬಿಟ್ರೀಜ್ ಕೊಂಡೊಯ್ದಿದ್ದರು. ಗುಹೆಯ ವಾಸ ಬಿಟ್ರೀಜ್ ಅವರಿಗೆ ಮೊದಲು ಅಹಿತಕರವಾಗಿತ್ತು. ತಮ್ಮ ಸಂಚಾರಕ್ಕೆ ಅನುಕೂಲವಾಗಲು ತಲೆಯ ಮೇಲೆ ಲೈಟ್ ಧರಿಸಿದ್ದರು. ಬಿಟ್ರೀಜ್ ಅವರು ಹಲವು ಸವಾಲು ಎದುರಿಸಿ ತಮ್ಮ ಗುಹೆಯ ವಾಸ ಪೂರೈಸಿದ್ದಾರೆ. 2021ರ ನವೆಂಬರ್ 20 ರಂದು ಸ್ಪೇನ್‌ ಮಹಿಳೆ ಬಿಟ್ರಿಜ್ ಫ್ಲಾಮಿನಿ ಅವರು ಗುಹೆ ಪ್ರವೇಶ ಮಾಡಿದ್ದರು.ಆಗ ಅವರಿಗೆ 48 ವರ್ಷ ವಯಸ್ಸಾಗಿತ್ತು. ತಮ್ಮ ಎರಡು ಜನ್ಮದಿನಾಚರಣೆಗಳನ್ನು ಅವರು ಗುಹೆಯಲ್ಲೇ ಏಕಾಂಗಿಯಾಗಿ ಆಚರಿಸಿಕೊಂಡಿದ್ದಾರೆ.

ಪುಸ್ತಕ ಬರೆಯಲು ಹಾಗೂ ಗುಹೆಯಲ್ಲಿ ಒಬ್ಬಂಟಿಯಾಗಿದ್ದಾಗ ಮನುಷ್ಯರ ಮನೋವೈಜ್ಞಾನಿಕ ಬದಲಾವಣೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಎಂದು ಅಧ್ಯಯನ ಮಾಡಲು ಸ್ಪೇನ್ ಮಹಿಳೆ ಬಿಟ್ರೀಜ್ ಅವರು ಈ ಸಾಹಸ ಕೈಗೊಂಡಿದ್ದರು. 20 ನವೆಂಬರ್ 2021 ರಿಂದ 14 ಏಪ್ರಿಲ್ 2023 ರವರೆಗೆ, ಅವರು 230 ಅಡಿ ಆಳದ ಗ್ರಾಂಡಾ ಗುಹೆಯಲ್ಲಿ ವಾಸಿಸಿದ್ದಾರೆ. ಅವರು ಗುಹೆಯೊಳಗೆ ಹೋಗುವಾಗ ರಾಣಿ ಎಲಿಜಬೆತ್ II ಅವರು ಜೀವಂತವಾಗಿದ್ದರು, ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿರಲಿಲ್ಲ ಮತ್ತು ಜಗತ್ತು ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿತ್ತು. ಆದರೆ ಇಲ್ಲಿಂದ ಹೊರಬಂದಾಗ ಅವರಿಗೆ ಇಡೀ ಪ್ರಪಂಚವೇ ಬದಲಾಗಿದೆ ಅನ್ನಿಸಿತು.
ಗುಹೆಯ ಹೊರಗಡೆ ಬಿಟ್ರೀಜ್ ಅವರ ತಂಡದ ಸದಸ್ಯರು ತುರ್ತು ಸಹಾಯಕ್ಕೆ ಮಾತ್ರ ನೆರವು ನೀಡುವ ಸೌಲಭ್ಯ ಕಲ್ಪಿಸಲಾಗಿತ್ತು. ಬಿಟ್ರೀಜ್ ಅವರು ತಮ್ಮ ಸಾಹಸದಲ್ಲಿ ಕಳೆದ ಎರಡು ತಿಂಗಳಿಂದ ಅವರು ಸಂಪೂರ್ಣವಾಗಿ ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದ್ದರು ಎಂದು ತಂಡದ ಸದಸ್ಯರು ಹೇಳಿದ್ದಾರೆ.
ಗುಹೆಯಲ್ಲಿ ಇದ್ದ 500 ದಿನಗಳಲ್ಲಿ ಹೊರಜಗತ್ತಿನಲ್ಲಿ ಏನೆಲ್ಲ ನಡೆದಿದೆ ಎಂಬ ಯಾವುದೇ ಮಾಹಿತಿ ನನಗೆ ತಿಳಿದಿಲ್ಲ” ಎಂದು ಬಿಟ್ರೀಜ್ ಅವರು ಗುಹೆಯಿಂದ ಹೊರಗೆ ಬಂದ ನಂತರ ತಮ್ಮ ಅನುಭವ ಹಂಚಿಕೊಂಡಿದ್ದಾರೆ.ವಾಸ್ತವವಾಗಿ ನಾನು ಗುಹೆಯಿಂದ ಹೊರಗೆ ಬರಲು ಯೋಚಿಸಿರಲಿಲ್ಲ. ಆದರೆ ಅಧ್ಯಯನಕ್ಕೆ ಸಹಕರಿಸುವುದು ನನ್ನ ಉದ್ದೇಶವಾಗಿತ್ತು” ಎಂದು ಸ್ಪೇನ್ ಮಹಿಳೆ ಬಿಟ್ರೀಜ್ ಹೇಳಿದ್ದಾರೆ.

ಅಂತಹ ಅಪಾಯವನ್ನು ಏಕೆ ತೆಗೆದುಕೊಂಡರು?
ಈ ವಯಸ್ಸಿನಲ್ಲಿ ಯಾಕೆ ಇಷ್ಟೊಂದು ರಿಸ್ಕ್ ತೆಗೆದುಕೊಂಡಿದ್ದಾಳೆ, ದೂರದ ಗುಹೆಯಲ್ಲಿ ಏಕಾಂಗಿಯಾಗಿ ವಾಸಿಸಲು ಹೊರಟಿದ್ದೇಕೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ವಾಸ್ತವವಾಗಿ, ಅನೇಕ ಮನಶ್ಶಾಸ್ತ್ರಜ್ಞರು, ಸಂಶೋಧಕರು ಮತ್ತು ಸ್ಪೀಲಿಯಾಲಜಿಸ್ಟ್‌ಗಳು (ಗುಹೆಗಳ ಮೇಲೆ ನಡೆಸುವ ಸಂಶೋಧಕನೆ) ಒಟ್ಟಾಗಿ ಸಂಶೋಧನೆಯನ್ನು ನಡೆಸಿದರು, ಅದರ ಮೂಲಕ ಮಾನವ ದೇಹ ಮತ್ತು ಮನಸ್ಸಿನ ಸಾಮರ್ಥ್ಯಗಳನ್ನು ತಿಳಿದುಕೊಳ್ಳುವುದು ಅವರ ಉದ್ದೇಶವಾಗಿತ್ತು. ಈ ಸಂಶೋಧನೆಯಿಂದ, ನಿರ್ಜನ ಸ್ಥಳಗಳಲ್ಲಿ ಏಕಾಂಗಿಯಾಗಿ ವಾಸಿಸುವುದರಿಂದ ಮಾನವ ದೇಹದಲ್ಲಿ ಮತ್ತು ಅದರ ಹಾವಭಾವಗಳಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎಂದು ತಿಳಿದುಬಂದಿದೆ. ಎರಡು ತಿಂಗಳ ನಂತರ ಹೇಗೆ ಸಮಯ ಕಳೆದು ಹೋಯಿತು ಎಂಬುದು ಗೊತ್ತಾಗಲಿಲ್ಲ ಎಂದು ಬಿಟ್ರೀಜ್‌ ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ಒಂದೂವರೆ ವರ್ಷದಲ್ಲಿ ಅವರು ಸುಮಾರು 1000 ಲೀಟರ್ ನೀರು ಕುಡಿದಿದ್ದಾರೆ. 60 ಪುಸ್ತಕಗಳನ್ನು ಓದಿದರು. ಕಳೆದ ಒಂದೂವರೆ ವರ್ಷಗಳಲ್ಲಿ ಮಹಿಳೆ ಸ್ನಾನ ಮಾಡಲಿಲ್ಲ.
ಚಿಲಿ ಬೊಲಿವಿಯಾದ ಗಣಿಗಾರರು 2,257 ಅಡಿಯ ಆಳದ ಗಣಿಯಲ್ಲಿ 66 ದಿನ ಸಿಲುಕಿ ಹೊರ ಬಂದಿದ್ದು ಇದುವರೆಗಿನ ದಾಖಲೆಯಾಗಿತ್ತು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement