ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಅತೀಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ ನಲ್ಲಿ ಹತ್ಯೆ

ಲಕ್ನೋ: ಮಾಜಿ ಸಂಸದ, ಕುಖ್ಯಾತ ಗ್ಯಾಂಗ್‌ಸ್ಟರ್‌ ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಗ್ಯಾಂಗ್‌ಸ್ಟರ್‌ ಅತಿಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ ನಲ್ಲಿ ಹತ್ಯೆ ಅತೀಕ್‌ ಅಹ್ಮದ್‌ (Atiq Ahmed) ಮತ್ತು ಸಹೋದರ ಅಶ್ರಫ್‌ ಅಹ್ಮದ್‌ ಗ್ಯಾಂಗ್‌ವಾರ್‌ ಗೆ ಬಲಿಯಾಗಿದ್ದಾರೆ.
ಇಬ್ಬರನ್ನು ಶನಿವಾರ ಪ್ರಯಾಗ್‌ರಾಜ್‌ ಆಸ್ಪತ್ರೆಗೆ ಮೆಡಿಕಲ್‌ ಚೆಕಪ್‌ಗಾಗಿ ಕರೆದುಕೊಂಡು ಹೋಗುವಾಗ ಅತೀಕ್‌ ಅಹಮ್ಮದ್‌ ಮಾಧ್ಯಮಗಳ ಮುಂದೆ ಮಾತನಾಡಲು ಮುಂದಾದಾಗ ಎಲ್ಲಿಂದಲೋ ಬಂದ ಅನಾಮಿಕ ವ್ಯಕ್ತಿಗಳು ಪಿಸ್ತೂಲ್‌ನಿಂದ ಶೂಟ್‌ ಮಾಡಿ ಹತ್ಯೆ ಮಾಡಿದ್ದಾರೆ.
ಮೂಲಗಳ ಪ್ರಕಾರ ಕೊಲೆಯನ್ನು ಮೂವರು ನಡೆಸಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಂತಕರು ಪತ್ರಕರ್ತರ ವೇಷದಲ್ಲಿ ಬಂದಿದ್ದರು ಮತ್ತು ಡಮ್ಮಿ ಕ್ಯಾಮೆರಾ ಮತ್ತು ಮೈಕ್ ಅನ್ನು ಸಹ ತಮ್ಮೊಂದಿಗೆ ತಂದಿದ್ದರು ಎಂದು ತಿಳಿದು ಬಂದಿದೆ. ಏತನ್ಮಧ್ಯೆ, ಘಟನೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉನ್ನತ ಪೊಲೀಸ್ ಅಧಿಕಾರಿಗಳನ್ನು ಸಭೆಗೆ ಕರೆದಿದ್ದಾರೆ.

ಫೋರೆನ್ಸಿಕ್ ತಂಡ ಸ್ಥಳಕ್ಕೆ ಧಾವಿಸಿದ್ದು, ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಲು ಆರಂಭಿಸಿದ್ದಾರೆ. 27 ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನಾ ಸ್ಥಳವನ್ನು ತಲುಪಲು ಶೂಟರ್‌ಗಳು ಬಳಸಿದ ಬೈಕ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಮತ್ತು ರಾಜ್ಯದಾದ್ಯಂತ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್‌ 13 ರಂದು ಗುರುವಾರ ಅತಿಕ್‌ ಅಹ್ಮದ್‌ ಪುತ್ರ ಅಸಾದ್‌ ಮತ್ತು ಆತನ ಸಹಚರ ಗುಲಾಂನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರಿನಲ್ಲಿ ಹತ್ಯೆ ಮಾಡಿದ್ದರು.

https://twitter.com/i/status/1647293600202633216

ಉಮೇಶ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಅಸಾದ್‌ ಮತ್ತು ಗುಲಾಂ ಅವರ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಈ ಇಬ್ಬರನ್ನು ಝಾನ್ಸಿಯಲ್ಲಿ ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಲಾಗಿದೆ.
2005ರ ಬಹುಜನ ಸಮಾಜ ಪಾರ್ಟಿಯ (Bahujan Samaj Party) ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ ಪಾಲ್ ಅವರನ್ನು ಫೆಬ್ರವರಿ 24 ರಂದು ಅತೀಕ್ ಅಹಮ್ಮದ್ ಗ್ಯಾಂಗ್ ಸದಸ್ಯರು ಗುಂಡಿಟ್ಟು ಹತ್ಯೆ ಮಾಡಿದ್ದರು. ಹತ್ಯೆಯಾದ ಇಬ್ಬರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement