ಸುಡಾನಿನಲ್ಲಿ ಸಿಕ್ಕಿಹಾಕಿಕೊಂಡಿರುವ ಕರ್ನಾಟಕದವರು: ಸಿದ್ದರಾಮಯ್ಯ ಟ್ವೀಟ್‌ಗೆ ವಿದೇಶಾಂಗ ಸಚಿವ ಜೈಶಂಕರ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ: ಆಂತರಿಕ ಯುದ್ಧದಲ್ಲಿ ನಲುಗಿರುವ ಈಶಾನ್ಯ ಆಫ್ರಿಕಾದ ದೇಶವಾದ ಸುಡಾನ್‌ನಲ್ಲಿ 31 ಭಾರತೀಯರು ಸಿಕ್ಕಿಹಾಕಿಕೊಂಡಿದ್ದಾರೆ. ಈ ಬಗ್ಗೆ ಕರ್ನಾಟಕದ 31 ಬುಡಕಟ್ಟು ಜನಾಂಗದವರ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್‌ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಇಎಎಂ ಜೈಶಂಕರ್, “”ನಿಮ್ಮ ಟ್ವೀಟ್‌ಗೆ ಗಾಬರಿಯಾಯಿತು! ಜೀವಗಳು ಅಪಾಯದಲ್ಲಿದೆ; ರಾಜಕೀಯ ಮಾಡಬೇಡಿ. ಏಪ್ರಿಲ್ 14 ರಂದು ಹೋರಾಟ ಪ್ರಾರಂಭವಾದಾಗಿನಿಂದ, ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಿರಂತರವಾಗಿ ಹೆಚ್ಚಿನ ಜನರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
ಭದ್ರತಾ ಕಾರಣಗಳಿಗಾಗಿ ಅವರ ವಿವರಗಳು ಮತ್ತು ಸ್ಥಳಗಳನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ. ಅವರ ಓಡಾಟವು ನಡೆಯುತ್ತಿರುವ ಅಂತರ್‌ ಯುದ್ಧದಿಂದ ನಿರ್ಬಂಧಿಸಲ್ಪಟ್ಟಿದೆ. ಅವರಿಗೆ ಸಂಬಂಧಿಸಿದ ಯೋಜನೆಗಳು ಅತ್ಯಂತ ಸಂಕೀರ್ಣವಾದ ಭದ್ರತಾ ಸನ್ನಿವೇಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ರಾಯಭಾರ ಕಚೇರಿಯು ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ,” ಎಂದು ಜೈಶಂಕರ್ ಬರೆದಿದ್ದಾರೆ. “ಅವರ ಪರಿಸ್ಥಿತಿಯನ್ನು ರಾಜಕೀಯಗೊಳಿಸುವುದು ಅತ್ಯಂತ ಬೇಜವಾಬ್ದಾರಿಯಾಗಿದೆ. ಯಾವುದೇ ಚುನಾವಣಾ ಗುರಿಯು ವಿದೇಶದಲ್ಲಿರುವ ಭಾರತೀಯರಿಗೆ ಅಪಾಯವನ್ನುಂಟು ಮಾಡುವುದನ್ನು ಸಮರ್ಥಿಸುವುದಿಲ್ಲ. ಜೈಶಂಕರ ಟ್ವೀಟ್ ಹೇಳಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ಮೂಲದ 31 ಬುಡಕಟ್ಟು ಜನರು ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ. “ಹಕ್ಕಿ ಪಿಕ್ಕಿ ಬುಡಕಟ್ಟಿಗೆ ಸೇರಿದ ಕರ್ನಾಟಕದ 31 ಜನರು ಅಂತರ್ಯುದ್ಧದಿಂದ ತೊಂದರೆಗೀಡಾದ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಾನು ಪ್ರಧಾನಿ ಕಾರ್ಯಾಲಯ, ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಮಧ್ಯಪ್ರವೇಶಿಸಿ ಅವರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಅಲ್ಲದೆ, “ಕಳೆದ ಕೆಲವು ದಿನಗಳಿಂದ ಸುಡಾನ್‌ನಲ್ಲಿ ಹಕ್ಕಿ ಪಿಕ್ಕಿಗಳು ಆಹಾರವಿಲ್ಲದೆ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ಮರಳಿ ಕರೆತರಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಚರ್ಚೆಗಳನ್ನು ಶುರು ಮಾಡಬೇಕು ಮತ್ತು ಹಕ್ಕಿ ಪಿಕ್ಕಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಏಜೆನ್ಸಿಗಳನ್ನು ತಲುಪಬೇಕು ಎಂದು ಹೇಳಿದ್ದರು.

ಸುಡಾನ್‌ನಲ್ಲಿ ಭುಗಿಲೆದ್ದ ಸಂಘರ್ಷ ಇದುವರೆಗೆ ಒಬ್ಬ ಭಾರತೀಯ ಪ್ರಜೆ ಸಾವಿಗೀಡಾಗಿದ್ದಾನೆ. ಭಾರತೀಯ ಪ್ರಜೆ ಆಲ್ಬರ್ಟ್ ಆಗಸ್ಟಿನ್ ಅವರು ಗುಂಡು ತಗುಲಿ ಮೃತಪಟ್ಟಿದ್ದಾನೆ ಎಂದು ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ. ಸುಡಾನ್‌ನಲ್ಲಿರುವ ದಾಲ್ ಗ್ರೂಪ್ ಕಂಪನಿಯಲ್ಲಿ ಅಗೆಸ್ಟಿನ್ ಉದ್ಯೋಗಿಯಾಗಿದ್ದರು. ಏತನ್ಮಧ್ಯೆ, ಸುಡಾನ್‌ನಲ್ಲಿರುವ ಭಾರತೀಯರು ಮತ್ತು ಪಿಐಒಗಳಿಗೆ ಮಾಹಿತಿ ನೀಡಲು ಮತ್ತು ಸಹಾಯ ಮಾಡಲು ಭಾರತ ಸರ್ಕಾರ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement