ಜೈಶಂಕರ ಪೋನ್‌ ಕರೆ ಮಾಡಿದ ನಂತರ ಯುದ್ಧ ಪೀಡಿತ ಸುಡಾನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಸೌದಿ ಅರೇಬಿಯಾ

ನವದೆಹಲಿ: ಹಿಂಸಾಚಾರ ಪೀಡಿತ ದೇಶವಾದ ಸುಡಾನ್‌ನಿಂದ ಭಾರತೀಯರು ಮತ್ತು ಇತರ ರಾಷ್ಟ್ರಗಳ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸೌದಿ ಅರೇಬಿಯಾ ಶನಿವಾರ ಪ್ರಕಟಿಸಿದೆ.
ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ, “ಸುಡಾನ್ ಗಣರಾಜ್ಯದಿಂದ ಸ್ಥಳಾಂತರಿಸಲ್ಪಟ್ಟ ನಾಗರಿಕರ ಸುರಕ್ಷಿತ ಆಗಮನ ಘೋಷಿಸಲು ನಾವು ಸಂತೋಷಪಡುತ್ತೇವೆ. ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳ ಬೆಂಬಲದೊಂದಿಗೆ ರಾಯಲ್ ಸೌದಿ ನೌಕಾ ಪಡೆಗಳು ನಡೆಸಿದ ಸ್ಥಳಾಂತರ ಕಾರ್ಯಾಚರಣೆಯಲ್ಲಿ ಆಗಮಿಸಿದ ರಾಜತಾಂತ್ರಿಕರು ಮತ್ತು ಅಂತಾರಾಷ್ಟ್ರೀಯ ಅಧಿಕಾರಿಗಳು ಸೇರಿದಂತೆ ಸ್ನೇಹಪರ ದೇಶಗಳ ಹಲವಾರು ಪ್ರಜೆಗಳು ಆಗಮಿಸಿದ್ದಾರೆ ಎಂದು ತಿಳಿಸಿದೆ.
ಸ್ಥಳಾಂತರಿಸಿದ 91 ವಿದೇಶಿ ಪ್ರಜೆಗಳಲ್ಲಿ 66 ಜನರು ಭಾರತ ಸೇರಿದಂತೆ ಸ್ನೇಹಪರ ದೇಶಗಳಿಂದ ಬಂದವರು ಎಂದು ಅರಬ್ ರಾಷ್ಟ್ರ ಘೋಷಿಸಿತು. ಭಾರತ ಸೇರಿದಂತೆ ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಟುನೀಶಿಯಾ, ಪಾಕಿಸ್ತಾನ, ಬಲ್ಗೇರಿಯಾ, ಬಾಂಗ್ಲಾದೇಶ, ಫಿಲಿಪೈನ್ಸ್, ಕೆನಡಾ ಮತ್ತು ಬುರ್ಕಿನಾ ಫಾಸೊ ಪ್ರಜೇಗಳು ಸ್ಥಳಾಂತರಿಸಲ್ಪಟ್ಟಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸೌದಿ ಮತ್ತು ಯುಎಇ ವಿದೇಶಾಂಗ ಸಚಿವರೊಂದಿಗೆ ಈ ವಿಷಯವನ್ನು ಚರ್ಚಿಸಿದ ಕೆಲವು ದಿನಗಳ ನಂತರ ಭಾರತೀಯರನ್ನು ಸ್ಥಳಾಂತರಿಸಲಾಗಿದೆ.
ಜೈಶಂಕರ ಅವರು ಏಪ್ರಿಲ್ 19 ರಂದು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ವಿದೇಶಾಂಗ ಸಚಿವರೊಂದಿಗೆ ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿನ ಪರಿಸ್ಥಿತಿಯನ್ನು ಚರ್ಚಿಸಿದ್ದರು.
ಏತನ್ಮಧ್ಯೆ, ವಿಶೇಷವಾಗಿ ಆಫ್ರಿಕನ್ ದೇಶದಲ್ಲಿ ನೆಲೆಸಿರುವ ಭಾರತೀಯರ ಮೇಲಿನ ಕಾಳಜಿಯ ದೃಷ್ಟಿಯಿಂದ ಸುಡಾನ್‌ನಲ್ಲಿನ ಪರಿಸ್ಥಿತಿಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ, .
ಯುಎಇಯ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗಿನ ದೂರವಾಣಿ ಸಂಭಾಷಣೆ ವೇಳೆ, ಸುಡಾನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಜೈಶಂಕರ್ ಹೇಳಿದರು.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

ಸುಡಾನ್‌ನಲ್ಲಿ ಏನಾಗುತ್ತಿದೆ?
ಸುಡಾನ್ ಕಳೆದ ಆರು ದಿನಗಳಿಂದ ಸುಡಾನ್‌ ದೇಶದ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಮಾರಣಾಂತಿಕ ಯುದ್ಧ ನಡೆಯುತ್ತಿದ್ದು ಸುಮಾರು ೪೦೦ ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅವರೊಂದಿಗಿನ ದೂರವಾಣಿ ಮಾತುಕತೆ ಬಗ್ಗೆ ಉಲ್ಲೇಖಿಸಿದ ಜೈಶಂಕರ್, ಎರಡೂ ಕಡೆಯವರು ನಿಕಟ ಸಂಪರ್ಕದಲ್ಲಿರುತ್ತಾರೆ ಎಂದು ಹೇಳಿದ್ದಾರೆ.
ಸೋಮವಾರ, ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯರು ತಮ್ಮ ನಿವಾಸಗಳಿಂದ ಹೊರಗೆ ಹೋಗದಂತೆ ಸಲಹೆಯನ್ನು ನೀಡಿತ್ತು. ಖಾರ್ಟೂಮ್‌ನಲ್ಲಿ ಗುಂಡಿನ ಗಾಯಗಳಿಂದ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಎಂದು ರಾಯಭಾರ ಕಚೇರಿ ಕಳೆದ ಭಾನುವಾರ ತಿಳಿಸಿತ್ತು.
ಸುಡಾನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾಹಿತಿ ಮತ್ತು ಸಹಾಯವನ್ನು ಒದಗಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈಗಾಗಲೇ 24X7 ನಿಯಂತ್ರಣ ಕೊಠಡಿ ಸ್ಥಾಪಿಸಿದೆ.
ಅಕ್ಟೋಬರ್ 2021 ರಲ್ಲಿ ದಂಗೆಯಲ್ಲಿ ಸುಡಾನ್‌ನ ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಇದು ಸಾರ್ವಭೌಮ ಮಂಡಳಿಯ ಮೂಲಕ ದೇಶವನ್ನು ನಡೆಸುತ್ತಿದೆ.
ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವ ಉದ್ದೇಶಿತ ಕಾಲಮಿತಿ ಕುರಿತು ಸೇನೆ ಮತ್ತು ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ವಿವಾದವಿದೆ. ಇದು ಆಂತರಿಕ ಯುದ್ಧಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement