ದ್ವಿತೀಯ ಪಿಯುಸಿ ಫಲಿತಾಂಶ: ಧಾರವಾಡ ಜೆ ಎಸ್ ಎಸ್-ಹುಕ್ಕೇರಿಕರ ಪಿಯು ಕಾಲೇಜ್‌ ಉತ್ತಮ ಸಾಧನೆ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಆರ್.ಎಸ್.ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯವು ಕಳೆದ ಮಾರ್ಚ್-೨೦೨೩ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ.
ಒಟ್ಟು ಹಾಜರಾದ ೮೪೮ ವಿದ್ಯಾರ್ಥಿಗಳಲ್ಲಿ ೭೫೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ೮೯.೧೫% ಫಲಿತಾಂಶ ಬಂದಿದೆ.
ಇದು ೨೦೨೨ರ ಫಲಿತಾಂಶಕ್ಕಿಂತ ೮.೪% ಹೆಚ್ಚಾಗಿದೆ. ಒಟ್ಟು ೨೩೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ (೮೫%ಕ್ಕಿಂತ ಹೆಚ್ಚಿನ ಅಂಕಗಳು) ೪೧೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹಾಜರಾದ ಒಟ್ಟು ೫೧೯ ವಿದ್ಯಾರ್ಥಿಗಳಲ್ಲಿ ೧೩೦ ಡಿಸ್ಟಿಂಕ್ಷನ್, ೨೬೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿಗೆ ೮೫.೯೩% ಫಲಿತಾಂಶ ಬಂದಿದ್ದು, ಕಳೆದ ಸಲಕ್ಕಿಂತ ಸರಾಸರಿ ೧೩.೫೦ % ಹೆಚ್ಚಿನ ಫಲಿತಾಂಶ ಪಡೆದಿದೆ.
ವಾಣಿಜ್ಯ ವಿಭಾಗದಲ್ಲಿ ಹಾಜರಾದ ಒಟ್ಟು ೧೭೭ ವಿದ್ಯಾರ್ಥಿಗಳಲ್ಲಿ ೫೮ ಡಿಸ್ಟಿಂಕ್ಷನ್, ೭೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ೯೩.೨೨% ಫಲಿತಾಂಶ ಬಂದಿದೆ. ಇದು ಕಳೆದ ಸಲಕ್ಕಿಂತ ೨.೦೦ % ಹೆಚ್ಚಾಗಿದೆ.
ಕಲಾ ವಿಭಾಗದಲ್ಲಿ ಹಾಜರಾದ ಒಟ್ಟು ೧೫೦ ವಿದ್ಯಾರ್ಥಿಗಳಲ್ಲಿ ೪೩ ಡಿಷ್ಟಿಂಕ್ಷನ್‌ನಲ್ಲಿ ೭೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ೯೬.೬೭% ಫಲಿತಾಂಶ ಬಂದಿರುತ್ತದೆ.
ವಿಜ್ಞಾನ ವಿಭಾಗದ ಸಾಧನೆ…
ವಿಜ್ಞಾನ ವಿಭಾಗದಲ್ಲಿ ಆಕಾಶ್ ಬಾಬು ಕುಂಬಾರ (೫೮೧) ೯೬.೮೩%, ಶಿವಾನಂದ ಬಾಬು ಹುಲಿಕಟ್ಟಿ (೫೮೦)೯೬.೬೭%, ವಿಜಯಲಕ್ಷ್ಮೀ ಸೋಮಪ್ಪ ಅರಳಿಮಟ್ಟಿ (೫೭೯) ೯೬.೫೦%, ಗೋಕುಲ ಶಶಿಧರನ್ (೫೭೫)೯೫.೮೩%, ವಿಶ್ವಜ್ಞ ಪ್ರಭಾಕರ ಬಡಿಗೇರ (೫೭೪)೯೫.೬೭%, ಅನನ್ಯ ಎಸ್. ಕುಂಬಾರ (೫೭೩) ೯೫.೫೦%, ಸ್ಫೂರ್ತಿ ನಾಗರಾಜ ನೂರಶೆಟ್ಟರ (೫೭೨) ೯೫.೩೩%, ನೇತ್ರಾವತಿ ಕರಮಲ್ಲಿ (೫೭೦) ೯೫.೦೦%, ಸಂತೋಷ ಮಲ್ಲಪ್ಪ ಮಗದುಮ್‌ (೫೬೯) ೯೪.೮೩%, ಅನಿತಕುಮಾರ (೫೬೮) ೯೪.೬೭%, ಸ್ಫೂರ್ತಿ ಯಲ್ಲಪ್ಪ ಕದಂ (೫೬೮) ೯೪.೬೭%, ನವೀನ ಆಲೂರ (೫೬೭) ೯೪.೫೦%, ವಿಶ್ವಪ್ರಸಾದ ಜಗದೀಶ ದಡ್ಡಿ (೫೬೭) ೯೪.೫೦%, ಶಿವಾನಂದ ಪಾಟೀಲ (೫೬೬)೯೪.೩೩%, ಪ್ರೀತಿ ಬಸಪ್ಪ ಕೋಲಕಾರ (೫೬೫) ೯೪.೧೭%, ರಾಜು ಸಂಕೇಶ್ವರಿ (೫೬೫) ೯೪.೧೭%, ಸಾರಿಕಾ ಗುರುರಾಜ ಕಲ್ಲೂರು (೫೬೪) ೯೪.೦೦% ಉತ್ತಮ ಅಂಕಗಳನ್ನು ಪಡೆದಿದಿದ್ದಾರೆ.
ವಾಣಿಜ್ಯ ವಿಭಾಗ..
ವಾಣಿಜ್ಯ ವಿಭಾಗದಲ್ಲಿ ನಭಾ ಕುಲಕರ್ಣಿ (೫೮೩) ೯೭.೧೭%, ಇಂಚರ ಪಿ.ನಾಯಕ (೫೮೨) ೯೭%, ರಿಯಾ ವಿ ವರ್ಣೇಕರ (೫೭೯) ೯೬.೫೦%, ಲಕ್ಷ್ಮೀ ಮಹಾಂತೇಶ ಕಿಲ್ಲೇದಾರ (೫೭೭) ೯೬.೧೭%, ಸುಶಾಂತ. ಆರ್. ಕಾಮತ್ (೫೭೨) ೯೫.೩೩%, ಕುಶಾಲಗೌಡ ಬಿರಾದಾರ (೫೭೧) ೯೫.೧೭%, ಸಹನಾ ಶೇಖರಯ್ಯ ಶಿದ್ರಾಮಯ್ಯನಮಠ (೫೭೦) ೯೫.೦೦%, ಮುಮತಾಜ್ ಹುಲ್ಗೋಳ (೫೬೭) ೯೪.೫೦%, ಖುಷಿ ಬಸವರಾಜ ಕುಪ್ಪಸಗೌಡರ (೫೬೬) ೯೪.೩೩%, ಪ್ರೇರಣಾ ನೀಲಗುಂದ (೫೬೩) ೯೩.೮೩%, ಶ್ರೇಯಾ ಆರ್ ವೆರ್ಣೇಕರ (೫೬೩) ೯೩.೮೩%, ವಿನಯ ಯಂಡಿಗೇರಿ (೫೬೩) ೯೩.೮೩%, ನಿಶಿಕಾ ಎಸ್.ಸೋಲಂಕಿ (೫೬೦) ೯೩.೩೩%, ಗೌರವ್ ಶಾ (೫೫೮) ೯೩%, ಪ್ರಿಯಾಲ್ ವಿಕ್ರಮ್ ರಾಥೋಡ್(೫೫೮) ೯೩%,
ಕಲಾ ವಿಭಾಗ..
ಕಲಾ ವಿಭಾಗದಲ್ಲಿ ಶ್ರೀಗೌರಿ (೫೮೮) ೯೮.೦೦ %, ಆಕಾಶ್ ಆನಂದ್ ಬಂದಿವಾಡರ್ (೫೭೫) ೯೫.೮೩ %, ರಕ್ಷಿತಾ ರಂಗನಾಥ ಗಾಮ (೫೬೭) ೯೪.೫೦ %, ಗುರುಬಸಪ್ಪ ಶ್ರೀಕಾಂತ ಹೊಸಮನಿ (೫೬೫) ೯೪.೧೭ %, ತೇಜಶ್ವಿನಿ ನಾರಾಯಣ ಬಲ್ಬುಲ್ (೫೬೩) ೯೩.೮೩ %, ಅಕ್ಷತಾ ಕಲ್ಲಪ್ಪ ನರಗುಂದ(೫೬೦) ೯೩.೩೩ %, ನೇತ್ರಾ ಜೋಗಿ (೫೫೫)೯೨.೫೦ %, ಮಲ್ಲಯ್ಯ (೫೫೩)೯೨.೧೭ %, ಸಚಿನ್ ಈರಪ್ಪ ಲಮಾಣಿ (೫೫೦)೯೧.೬೭ %, ಚೇತನ್ ಚನ್ನಪ್ಪ ನೀರುಳ್ಳಿ (೫೪೯)೯೧.೫೦ %, ಶಿವಾನಂದ ಶರಬಣ್ಣ ಲಿಂಗದಳ್ಳಿ(೫೪೮)೯೧.೩೩ %, ವಿಜಯಲಕ್ಷ್ಮಿ ಪಾಟೀಲ್ (೫೪೬)೯೧.೦೦ %, ಶಿವರಾಜ್ ಗುರುಸಿದ್ದಯ್ಯ ಹಿರೇಮಠ(೫೪೫) ೯೦.೮೩ %, ಸಹನಾ ಇಟಗಿ(೫೪೪)೯೦.೬೭%, ವಚನಶ್ರೀ ಎಸ್ ಕಪ್ಪರದ್(೫೪೪) ೯೦.೬೭%, ರಮೇಶ್ ಕೆ. ಪಿ(೫೪೩)೯೦.೫೦%, ಉತ್ತಮ ಅಂಕಗಳನ್ನು ಪಡೆದಿದ್ದಾರೆ.
ಎಲ್ಲ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಪ್ರತಿಶತ ಉತ್ತಮ ಅಂಕಗಳನ್ನು ಪಡೆದು ಸಾಧನೆಗೈದ ಕಾಲೇಜ್‌ ವಿದ್ಯಾರ್ಥಿಗಳನ್ನು
ಈ ಸಂಸ್ಥೆಯ ಅಧ್ಯಕ್ಷರಾದ ಪೇಜಾವರ ಶ್ರೀಗಳು, ಕಾರ್ಯಾಧ್ಯಕರಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಪ್ರಾಚಾರ್ಯರಾದ ಭಾರತಿ ಶಾನಭಾಗ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

 

 

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement