ಪರಾರಿಯಾದ 36 ದಿನಗಳ ನಂತರ ಪೊಲೀಸರ ಮುಂದೆ ಶರಣಾದ ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ; ಬಂಧನ

ನವದೆಹಲಿ: ಮಾರ್ಚ್ 18 ರಿಂದ ಪರಾರಿಯಾಗಿದ್ದ ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ಇಂದು, ಭಾನುವಾರ ಮೊಗಾದಲ್ಲಿ ಪಂಜಾಬ್ ಪೊಲೀಸರ ಮುಂದೆ ಶರಣಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧನವನ್ನು ದೃಢೀಕರಿಸಿದ ಪಂಜಾಬ್ ಪೊಲೀಸರು ಶಾಂತಿಯನ್ನು ಕಾಪಾಡುವಂತೆ ಮತ್ತು ಸುಳ್ಳು ಸುದ್ದಿಗಳನ್ನು ಹರಡದಂತೆ ಜನರಿಗೆ ಕೇಳಿಕೊಂಡಿದ್ದಾರೆ. “ಅಮೃತಪಾಲ್ ಸಿಂಗ್‌ ನನ್ನು ಪಂಜಾಬ್‌ನ ಮೋಗಾದಲ್ಲಿ ಬಂಧಿಸಲಾಗಿದೆ. ಹೆಚ್ಚಿನ ವಿವರಗಳನ್ನು ಪಂಜಾಬ್ ಪೊಲೀಸರು ಹಂಚಿಕೊಳ್ಳುತ್ತಾರೆ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ನಾಗರಿಕರನ್ನು ಕೇಳಿಕೊಳ್ಳಲಾಗಿದೆ. ಯಾವುದೇ ನಕಲಿ ಸುದ್ದಿಗಳನ್ನು ಹಂಚಿಕೊಳ್ಳಬೇಡಿ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ತನ್ನ ಪತ್ನಿ ಕಿರಣ್‌ದೀಪ್ ಕೌರ್ ಲಂಡನ್‌ಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಅಮೃತಸರ ವಿಮಾನ ನಿಲ್ದಾಣದಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆದ ಮೂರು ದಿನಗಳ ನಂತರ ಅಮೃತಪಾಲ್ ಸಿಂಗ್ ಶರಣಾಗಿದ್ದಾನೆ. ಕಸ್ಟಮ್ಸ್ ಇಲಾಖೆಯಿಂದ ವಿಚಾರಣೆಗೆ ಒಳಗಾದ ಕಿರಣದೀಪ್ ಕೌರ್ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಅದೇ ಕಾನೂನು ಪ್ರಕ್ರಿಯೆಯಡಿಯಲ್ಲಿ ವಶಕ್ಕೆ ಪಡೆಯಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಕುಟುಂಬ ಮತ್ತು ಪರಿಚಯಸ್ಥರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈತ ಪರಾರಿಯಾಗಿ 36 ದಿನಗಳಿಂದ ತಲೆಮರೆಸಿಕೊಂಡಿದ್ದ. ಅಮೃತಪಾಲ ಸಿಂಗ್‌ ಮೋಗಾ ಜಿಲ್ಲೆಯ ರೋಡೆ ಗ್ರಾಮದ ಗುರುದ್ವಾರದಲ್ಲಿ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಅಮೃತಪಾಲ್ ಸಿಂಗ್‌ ನನ್ನು ಅಸ್ಸಾಂನ ದಿಬ್ರುಗಢಕ್ಕೆ ವರ್ಗಾಯಿಸಲಾಗುತ್ತಿದೆ, ಅಲ್ಲಿ ಆತನ ಎಂಟು ಸಹಾಯಕರನ್ನು ಈಗಾಗಲೇ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಬಂಧಿಸಿ ಇಡಲಾಗಿದೆ, ಇದು ಯಾವುದೇ ಆರೋಪವಿಲ್ಲದೆ ಒಂದು ವರ್ಷದವರೆಗೆ ಬಂಧನಕ್ಕೆ ಅವಕಾಶ ನೀಡುತ್ತದೆ.
ಈತ ಪಾಕಿಸ್ತಾನದ ಏಜೆಂಟ್ ಎಂದು ಹೇಳುವ ಪಂಜಾಬ್‌ ಸರ್ಕಾರ, ಕಳೆದ ಕೆಲವು ವರ್ಷಗಳಿಂದ ಪಂಜಾಬ್‌ನಲ್ಲಿ ಸಕ್ರಿಯರಾಗಿದ್ದ ಮತ್ತು ಶಸ್ತ್ರಸಜ್ಜಿತ ಬೆಂಗಾವಲು ಇಟ್ಟುಕೊಳ್ಳುತ್ತಿದ್ದ. ಈತ ತಾನು ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅನುಯಾಯಿ ಎಂದು ಹೇಳಿಕೊಳ್ಳುತ್ತಾನೆ ಮತ್ತು ಆತನ ಬೆಂಬಲಿಗರು ಈತನನ್ನು “ಭಿಂದ್ರನ್‌ವಾಲೆ 2.0” ಎಂದು ಕರೆಯುತ್ತಾರೆ.

ಪಂಜಾಬ್ ಪೊಲೀಸರು ಅಮೃತಪಾಲ್ ಸಿಂಗ್ ಮತ್ತು ಆತನ ‘ವಾರಿಸ್ ಪಂಜಾಬ್ ದೇ’ ಸದಸ್ಯರ ಮೇಲೆ ಮಾರ್ಚ್ 18 ರಂದು ಕಾರ್ಯಾಚರಣೆ ನಡೆಸಿದ್ದರು. ಆತನ ಬೆಂಬಲಿಗರು ಅಜ್ನಾಲಾದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಒಂದು ತಿಂಗಳ ನಂತರ ಇದು ನಡೆದಿತ್ತು.
ಆತನ ಮತ್ತು ಆತನ ಸಹಚರರ ಮೇಲೆ ವರ್ಗಗಳ ನಡುವೆ ದ್ವೇಷ ಹರಡುವುದು, ಕೊಲೆ ಯತ್ನ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವಕರಿಂದ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಮೃತಪಾಲ್ ಸಿಂಗ್ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮೂಲಕ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದ ಮತ್ತು ಪಂಜಾಬ್ ಅನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದ ಎಂದು ಗುಪ್ತಚರ ಸಂಸ್ಥೆಗಳು ಹೇಳುತ್ತವೆ. ಅಮೃತಪಾಲ್ ಸಿಂಗ್ ಯುವಕರನ್ನು “ಬಂದೂಕು ಸಂಸ್ಕೃತಿ” ಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ಐಪಿಎಲ್‌ (IPL)2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು..? ಈ ವೀಡಿಯೊಗಳನ್ನು ನೋಡಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement