ಪಾದ್ರಿ ಮಾತು ನಂಬಿ ಸ್ವರ್ಗಕ್ಕೆ ಹೋಗಲು ಹಸಿವಿನಿಂದ ಜೀವಂತ ಸಮಾಧಿಯಾದವರ 47 ಶವಗಳು ಪತ್ತೆ…! ಸಂಖ್ಯೆ ಹೆಚ್ಚಾಗುವ ಸಾಧ್ಯತೆ…!!

ನೈರೋಬಿ (ಕೀನ್ಯಾ) : ಆಫ್ರಿಕಾದ ಕೀನ್ಯಾ (Kenya)ದಲ್ಲಿ ಉಪವಾದಿಂದ ಜೀವಂತ ಸಮಾಧಿಯಾದವರ 47 ಕ್ಕೂ ಅಧಿಕ ಮಂದಿಯ ಶವಗಳು ಈವರೆಗೆ ಪತ್ತೆಯಾಗಿದೆ. ಪಾದ್ರಿ ಮಾತನ್ನು ನಂಬಿ, ಸ್ವರ್ಗಕ್ಕೆ ಹೋಗುವ ಆಸೆಯಲ್ಲಿ 47ಕ್ಕೂ ಅಧಿಕ ಮಂದಿ ಹಸಿವಿನಿಂದ ಬಳಲಿ ಜೀವಂತ ಸಮಾಧಿಯಾಗಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. ನೀವು ಸ್ವರ್ಗಕ್ಕೆ ಹೋಗಬಯಸುತ್ತೀರಿ ಎಂದರೆ ಉಪವಾಸವಿರಬೇಕು, ಬಳಿಕ ಜೀವಂತ ಸಮಾಧಿಯಾಗಬೇಕು ಎಂದು ಪಾದ್ರಿ ಹೇಳಿದ್ದ ಎಂದು ಆರೋಪಿಸಲಾಗಿದೆ.
ಕೀನ್ಯಾದ ಪೊಲೀಸರು ಆರಾಧನೆಯ ಸದಸ್ಯ(members of a cult)ರೆಂದು ನಂಬಲಾದ 26 ಜನರ ಶವಗಳನ್ನು ಭಾನುವಾರ ಪತ್ತೆ ಹಚ್ಚಿದ್ದು, ಕಳೆದ ಮೂರು ದಿನಗಳಲ್ಲಿ ಕಲ್ಟ್‌ಗೆ ಸಂಬಂಧಿಸಿದಂತೆ ಪತ್ತೆಯಾದ ಒಟ್ಟು ಶವಗಳ ಸಂಖ್ಯೆಯನ್ನು 47 ಕ್ಕೆ ಏರಿದೆ.
ನಾವು ಇನ್ನೂ 26 ಶವಗಳನ್ನು ಹೊರತೆಗೆದಿದ್ದೇವೆ ಮತ್ತು ಇದು ಆ ಸ್ಥಳದಿಂದ ಒಟ್ಟು ಶವಗಳ ಸಂಖ್ಯೆಯನ್ನು 47 ಕ್ಕೆ ಹೆಚ್ಚಿಸಿದೆ” ಎಂದು ಪೂರ್ವ ಕೀನ್ಯಾದ ಮಲಿಂಡಿಯಲ್ಲಿನ ಅಪರಾಧ ತನಿಖೆಯ ಮುಖ್ಯಸ್ಥ ಚಾರ್ಲ್ಸ್ ಕಮೌ ಹೇಳಿದ್ದಾರೆ.

ಎಲ್ಲಾ 47 ಜನರು ತಾವು ಹಸಿವಿನಿಂದ ಸತ್ತರೆ ಸ್ವರ್ಗಕ್ಕೆ ಹೋಗುತ್ತಾರೆ ಎಂದು ನಂಬುವ ಕ್ರಿಶ್ಚಿಯನ್ ಪಂಥದ ಅನುಯಾಯಿಗಳು ಎಂದು ಹೇಳಲಾಗಿದೆ. ಕರಾವಳಿ ಪಟ್ಟಣವಾದ ಮಾಲಿಂಡಿ ಬಳಿ ಪೊಲೀಸರು ಶುಕ್ರವಾರ ಶಾಕಹೋಲಾ ಅರಣ್ಯ ಪ್ರದೇಶದಿಂದ ಶವಗಳನ್ನು ಹೊರತೆಗೆಯಲು ಪ್ರಾರಂಭಿಸಿದರು.
ಒಟ್ಟು, 47 ಜನರು ಶಾಕಾಹೋಲಾ ಅರಣ್ಯದಲ್ಲಿ ಮೃತಪಟ್ಟಿದ್ದಾರೆ” ಎಂದು ಡಿಟೆಕ್ಟಿವ್ ಚಾರ್ಲ್ಸ್ ಕಮೌ ಭಾನುವಾರ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಶವಗಳ ಹೊರತೆಗುವ ಕಾರ್ಯ ಇನ್ನೂ ನಡೆಯುತ್ತಿವೆ. ಈ ಸಂಖ್ಯೆ ಹೆಚ್ಚಾಗುವ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಈ ಆರಾಧನಾ ಗುಂಪಿನ 15 ಸದಸ್ಯರನ್ನು ಪೊಲೀಸರು ರಕ್ಷಿಸಿದ್ದರು. ಇವರೆಲ್ಲರೂ ಗುಡ್ ನ್ಯೂಸ್ ಇಂಟರ್‌ನ್ಯಾಶನಲ್ ಚರ್ಚ್‌ನಲ್ಲಿ ಆರಾಧಕರಾಗಿದ್ದು, ಅವರಿಗೆ ಸ್ವರ್ಗಕ್ಕೆ ಹೋಗಬೇಕಾದರೆ ಹಸಿವಿನಿಂದ ಸಾಯಬೇಕು ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ನಾಲ್ವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚರ್ಚ್‌ನ ನಾಯಕ ಪಾಲ್ ಮೆಕೆಂಜಿಯನ್ನು ಏಪ್ರಿಲ್ 15 ರಂದು ಬಂಧಿಸಲಾಯಿತು. ವಿಚಾರಣೆಯ ನಂತರ ಮೆಕೆಂಜಿಯ ಕನಿಷ್ಠ 31 ಅನುಯಾಯಿಗಳು ಸಮಾಧಿಯಾದ ವಿಷಯ ಬೆಳಕಿಗೆ ಬಂತು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೆಕೆಂಜಿ ತಿನ್ನಲು ಅಥವಾ ಕುಡಿಯಲು ನಿರಾಕರಿಸಿದ್ದಾನೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪೂರ್ವ ಕೀನ್ಯಾದಲ್ಲಿ ತನಿಖೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಶವಗಳು ದೊರೆತ 800 ಎಕರೆ ಅರಣ್ಯ ಪ್ರದೇಶವನ್ನು ಸೀಲ್‌ ಮಾಡಿದ್ದಾರೆ ಎಂದು ಆಂತರಿಕ ಸಚಿವ ಕಿತುರೆ ಕಿಂಡಿಕಿ ತಿಳಿಸಿದ್ದಾರೆ.

ಬಿಳಿ ಮೇಲುಡುಪುಗಳನ್ನು ಧರಿಸಿರುವ ಮತ್ತು ಮಾಸ್ಕ್‌ ಧರಿಸಿದ ಶೋಧ ತಂಡಗಳು ಶವಗಳ ಹುಡುಕಾಟಕ್ಕಾಗಿ ಸೈಟಲ್ಲಿ ಅಗೆಯುವುದನ್ನು ಮುಂದುವರೆಸಿದೆ ಎಂದು ಕರಾವಳಿ ಪಟ್ಟಣವಾದ ಮಾಲಿಂಡಿ ಬಳಿ AFP ಛಾಯಾಗ್ರಾಹಕ ತಿಳಿಸಿದ್ದಾರೆ. ಅನೇಕ ದೇಹಗಳನ್ನು ಈಗಾಗಲೇ ಬಿಳಿ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಲಾಗಿತ್ತು ಎಂದು ಅವರು ಹೇಳಿದ್ದಾರೆ.
ಕೇವಲ ಶವಗಳಿಗಾಗಿ ಮಾತ್ರವಲ್ಲದೆ ಈ ತರಹದ ಆರಾಧನೆಯಿಂದ ಬದುಕುಳಿದವರಿಗಾಗಿಯೂ ಶೋಧ ಕಾರ್ಯ ಮುಂದುವರಿದಿದೆ. ಕಳೆದ ವಾರ ಮೊದಲ ಶವ ಪತ್ತೆಯಾದ ನಂತರ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗೃಹ ಸಚಿವ ಕಿತುರೆ ಕಿಂಡಿಕಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್ ಎಂಬ ಕಲ್ಟ್‌ ಬಗ್ಗೆ ಪೂರ್ಣ ಪ್ರಮಾಣದ ತನಿಖೆಯನ್ನು ಆರಂಭಿಸಲಾಗಿದೆ. ಈ ದೇಶದಲ್ಲಿ ಕ್ರೈಸ್ತ ಧರ್ಮೀಯರು ಜೀವ ಹೋಗುವವರೆಗೂ ಉಪವಾಸ ಮಾಡುವಂಥಾ ಹಲವು ಘಟನೆಗಳು ಈ ಹಿಂದೆಯೂ ನಡೆದಿದೆ. ಕೀನ್ಯಾ ದೇಶದಲ್ಲಿ ಚರ್ಚ್‌ಗಳ ಕಾರ್ಯ ಚಟುವಟಿಕೆಗಳ ಮೇಲೆ ನಿಯಂತ್ರಣ ಇಲ್ಲ. ಅದರಲ್ಲೂ ಅತಿಯಾದ ಧಾರ್ಮಿಕ ಆಚರಣೆ, ನಂಬಿಕೆಗಳಿಂದಾಗಿ ಈ ದುರಂತ ಘಟನೆ ಬೆಳಕಿಗೆ ಬಂದಿದೆ. ಈಗ ಕೀನ್ಯಾ ದೇಶದಲ್ಲಿ ಅತಿರೇಕದ ಧಾರ್ಮಿಕ ನಂಬಿಕೆಗಳನ್ನು ನಿಷೇಧಿಸಲು ಸೂಕ್ತ ಕಾನೂನು ರೂಪಿಸಲು ಒತ್ತಾಯ ಕೇಳಿಬಂದಿದೆ.

.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement