ಪ್ರಚಾರ ಸಭೆಯಲ್ಲಿ ಯುವಕನ ಕಪಾಳಕ್ಕೆ ಬಾರಿಸಿದ ಎಂ.ಬಿ. ಪಾಟೀಲ…!

ವಿಜಯಪುರ: ರಾಜ್ಯದಲ್ಲಿ ಮೇ 10ರಂದು ನಡೆಯುವ 2023ರ ವಿಧಾನಸಭೆ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಆದರೆ, ಪ್ರಚಾರದ ವೇಳೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.
ಮಾಜಿ ಸಚಿವ ಮತ್ತು ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಅವರು ಯುವಕನ ಕೆನ್ನೆಗೆ ಬಾರಿಸಿದ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರದ ದೇವಾಪುರ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಎಂ.ಬಿ. ಪಾಟೀಲ ಶನಿವಾರ ತಡರಾತ್ರಿ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಬಬಲೇಶ್ವರ ಕ್ಷೇತ್ರದ ದೇವಾಪುರ ಗ್ರಾಮದ ಯುವಕ ಹಣಮಂತ ತುಪ್ಪದ ಅವರಿಗೆ ಕಪಾಳ ಮೋಕ್ಷ ಮಾಡಿದರು.

ಸಭೆಯಲ್ಲಿ, ಹಣಮಂತ ತುಪ್ಪದ ಅವರು, ಎಲೆಕ್ಷನ್ ಬಂದಾಗ 5 ವರ್ಷದ ನಂತರ ಗ್ರಾಮಕ್ಕೆ ಆಗಮಿಸಿದ್ದೀರಿ, ನಮ್ಮ ಗ್ರಾಮಕ್ಕೆ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ, ಇದರಿಂದಾಗಿ ಕೋಪಗೊಂಡ ಎಂ.ಬಿ. ಪಾಟೀಲ ಸಭೆಯಲ್ಲಿ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಹೇಳಲಾಗಿದೆ. ಎಂ.ಬಿ.ಪಾಟೀಲರ ಈ ವರ್ತನೆಗೆ ಗ್ರಾಮಸ್ಥರು ಆಕ್ಷೇಪಿಸಿದ್ದಾರೆ, ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ವರ್ತಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

ಈ ಕುರಿತ ವೀಡಿಯೊವನ್ನು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಗೂಂಡಾಗಿರಿ ಕಾಂಗ್ರೆಸ್​ ಪಕ್ಷದ ಡಿಎನ್​​ಎಯಲ್ಲಿದೆ. ಕಾಂಗ್ರೆಸ್​​ ಶಾಸಕ ಎಂಪಿ ಪಾಟೀಲ ಅವರು​​, ಕುಂದುಕೊರತೆಗಳನ್ನು ಹಂಚಿಕೊಳ್ಳಲು ಬಂದಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದರೆ ಹಲ್ಲೆ ಮಾಡುವುದು ಕಾಂಗ್ರೆಸ್ ನೀಡುವ ಏಕೈಕ ಭರವಸೆಯಾಗಿದೆ ಎಂದು ಟೀಕಿಸಿದೆ.

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement