ಕರ್ನಾಟಕ ಚುನಾವಣಾ ಪೂರ್ವ ಸಿ ವೋಟರ್‌ ಸಮೀಕ್ಷೆ ಬಹಿರಂಗ ; ಬಹುಮತ ಯಾವುದಕ್ಕೆ..? ಕಾಂಗ್ರೆಸ್ಸೋ-ಬಿಜೆಪಿಯೋ..? ಅತಂತ್ರವೋ..?

ಬೆಂಗಳೂರು :ಕರ್ನಾಟಕ ಚುನಾವಣೆಯ ಮೇ 10ರಂದು ನಡೆಯಲಿದೆ, ಇದೇ ವೇಳೆ ಚುನಾವಣೆ ಪೂರ್ವದ ಸಿ ವೋಟರ್‌ ಸಮೀಕ್ಷೆ ಹೊರಬಿದ್ದಿದ್ದು, ಕಾಂಗ್ರೆಸ್‌ ಹೆಚ್ಚು ಸ್ಥಾನಗಳಿಸಲಿದ್ದು, ಸರಳ ಬಹುಮತ ಪಡೆಯಬಹುದು ಎಂದು ಭವಿಷ್ಯ ನುಡಿದಿದೆ.
ಕಾಂಗ್ರೆಸ್‌ 106-116 ಸ್ಥಾನ, ಬಿಜೆಪಿ 79-89 ಸ್ಥಾನ, ಜೆಡಿಎಸ್‌ 24-34 ಹಾಗೂ ಇತರರು 0-5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್‌ ಬಹುಮತ ಪಡೆಯಬಹುದು ಅಥವಾ ಕೇಲವೇ ಸ್ಥಾನಗಳು ಕಡಿಮೆ ಬೀಳುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ಹೇಳಿದೆ.
ಕಳೆದ ಚುನಾವಣೆ (2018) ಹೋಲಿಸಿದರೆ ಬಿಜೆಪಿ ಸುಮಾರು 20 -25 ಕ್ಷೇತ್ರಗಳನ್ನು, ಜೆಡಿಎಸ್‌ 5 ರಿಂದ 6 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಇದೇವೇಳೆ ಕಾಂಗ್ರೆಸ್‌ 30ರಷ್ಟು ಸ್ಥಾನಗಳನ್ನು ಹೆಚ್ಚು ಪಡೆಯಲಿದೆ. 2018 ರಲ್ಲಿ ಬಿಜೆಪಿ 104, ಕಾಂಗ್ರೆಸ್‌ 80 ಹಾಗೂ ಜೆಡಿಎಸ್‌ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಸಿ ವೋಟರ್ ಮತ್ತು ಟಿವಿ9 ಜತೆಗೂಡಿ 21,895 ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ಈ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಕರ್ನಾಟಕದ 224 ಕ್ಷೇತ್ರಗಳಲ್ಲಿ 448 ಜನರ ತಂಡ ಈ ಸಮೀಕ್ಷೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಪ್ರತಿಯೊಂದು ಕ್ಷೇತ್ರದಲ್ಲಿ ಇಬ್ಬರು ಸಮೀಕ್ಷೆಯ ತಂಡದಲ್ಲಿದ್ದರು ಎಂದು ಸಿ ವೋಟರ್ ಹೇಳಿಕೊಂಡಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ಈ ಹಿಂದಿನ ಸಿ-ವೋಟರ್‌ ಸರ್ವೆಯಲ್ಲಿ ಅದು ಕಾಂಗ್ರೆಸ್ 115-127 ಸ್ಥಾನಗಳನ್ನು ಗೆಲ್ಲಲಿದೆ. 68-80 ಸ್ಥಾನಗಳನ್ನು ಮತ್ತು ಜೆಡಿಎಸ್ 23-35 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದತ್ತು. ಅದಕ್ಕೆ ಹೋಲಿಸಿದರೆ ಚುನಾವಣೆ ಸಮೀಪ ಬಂದಂತೆ ಎರಡನೇ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಸ್ಥಾನಗಳನ್ನು ಸ್ವಲ್ಪಮಟ್ಟಿಗೆ ಕಡಿಮೆ ತೋರಿಸಿದೆ. ಹಾಗೂ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ತಮ್ಮ ಬಲವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿಕೊಳ್ಳಬಹುದು ಎಂದು ತೋರಿಸಿದೆ. ಹೀಗಾಗಿ ಮೇ ಮೊದಲನೇ ವಾರದಲ್ಲಿ ಬಹುತೇಕ ನಿಖರತೆ ಸಿಗಬಹುದು, ಆಗ ಅತಂತ್ರವೋ ಅಥವಾ ಯಾವ ಬಹುಮತ ಸಿಗಬಹುದು ಎಂಬುದು ಇನ್ನೂ ಸ್ಪಷ್ಟವಾಗಬಹುದು.

ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ ಮುಂದೆ… ಆದರೆ ಅತಂತ್ರ...
ಕಳೆದ ಕೆಲ ದಿನಗಳ ಹಿಂದೆ ಪ್ರಕಟಗೊಂಡಿದ್ದ ಜನ್ ಕೀ ಬಾತ್ ಸಮೀಕ್ಷೆ ಈ ವಿಧಾನಸಭಾ ಚುನಾವಣೆಯಲ್ಲೂ ಅತಂತ್ರ ಫಲಿತಾಂಶ ಬರಲಿದ್ದು ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ.
ಜ್ಯದ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಆ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಸ್ಥರು, ಬಿಜೆಪಿ 98-109 ಸ್ಥಾನಗಳಲ್ಲಿ ಜಯ ಗಳಿಸಲಿದೆ, ಕಾಂಗ್ರೆಸ್ ಪಕ್ಷ 89ರಿಂದ 97 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಹಾಗೂ ಜೆಡಿಎಸ್ ಪಕ್ಷ 25ರಿಂದ 29ರಷ್ಟು ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಹೇಳಿದ್ದರು.
ಪಬ್ಲಿಕ್‌ ಟಿವಿ ಸಮೀಕ್ಷೆಯಲ್ಲಿ ಅತಂತ್ರ…
ಸೋಮವಾರ ಪ್ರಕಟವಾದ ಪಬ್ಲಿಕ್‌ ಟಿವಿ ಸಮೀಕ್ಷೆ ಚಾಪ್ಟರ್-2ರ ಪ್ರಕಾರ, ವಿಪಕ್ಷ ಕಾಂಗ್ರೆಸ್‌ 92-102 ಸ್ಥಾನಗಳನ್ನು ಪಡೆಯಬಹುದು, ಬಿಜೆಪಿ ಪಕ್ಷ 83-90 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ 29ರಿಂದ 34 ಸ್ಥಾನಗಳಲ್ಲಿ ಗೆಲ್ಲಲಿದ್ದು, ಪಕ್ಷೇತರರು 2ರಿಂದ 4 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಮೊದಲು ಸಮೀಕ್ಷೆ ಮಾಡಿದ್ದ ಪಬ್ಲಿಕ್‌ ಟಿವಿ, ಕಾಂಗ್ರೆಸ್‌ 98-108 ಸ್ಥಾನಗಳು, ಬಿಜೆಪಿಗೆ 85ರಿಂದ 95 ಸ್ಥಾನಗಳು, ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ 28ರಿಂದ 33 ಸ್ಥಾನಗಳು ಸಿಗಬಹುದು ಎಂದು ಹೇಳಿತ್ತು. ಅಲ್ಲದೇ 2 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎನ್ನಲಾಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement