ಗಾಲ್ವಾನ್ ಸಂಘರ್ಷದ ನಂತರ ಮೊದಲ ಬಾರಿಗೆ ಗುರುವಾರ ಭಾರತ- ಚೀನಾ ರಕ್ಷಣಾ ಸಚಿವರ ಭೇಟಿ

ನವದೆಹಲಿ: ಮೇ 2020 ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರು ಹಿಂಸಾತ್ಮಕ ಘರ್ಷಣೆ ನಡೆಸಿದ ನಂತರ ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್‌ಫು ಅವರು ಇದೇ ಮೊದಲ ಬಾರಿಗೆ ಗುರುವಾರ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ.
ಇಬ್ಬರು ರಕ್ಷಣಾ ಸಚಿವರ ಸಭೆಯ ನಂತರ ಪೂರ್ವ ಲಡಾಖ್ ಪ್ರದೇಶದಲ್ಲಿನ ಸ್ಟ್ಯಾಂಡ್-ಆಫ್ ನಡುವೆ ಭಾರತ ಮತ್ತು ಚೀನಾದ ಮಿಲಿಟರಿ ಕಮಾಂಡರ್‌ಗಳ ನಡುವೆ ಕನಿಷ್ಠ 19 ಸುತ್ತಿನ ಮಾತುಕತೆಗಳು ನಡೆಯಲಿವೆ. ರಕ್ಷಣಾ ಮಂತ್ರಿಗಳು ಪ್ರಾದೇಶಿಕ ಶಾಂತಿ ಮತ್ತು ಭದ್ರತೆ, ಎಸ್‌ಸಿಒ ಒಳಗೆ ಭಯೋತ್ಪಾದನೆ ನಿಗ್ರಹ ಪ್ರಯತ್ನಗಳು ಮತ್ತು ಪರಿಣಾಮಕಾರಿ ಬಹುಪಕ್ಷೀಯತೆಗೆ ಸಂಬಂಧಿಸಿದ ಇತರ ವಿಷಯಗಳ ನಡುವೆ ಚರ್ಚಿಸುತ್ತಾರೆ” ಎಂದು ಸರ್ಕಾರ ಇಂದು, ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾದ ರಕ್ಷಣಾ ಸಚಿವ ಜನರಲ್ ಲಿ ಅವರ ಭೇಟಿಯು ಪ್ರಾದೇಶಿಕ ಗುಂಪಿನ ಶಾಂಘೈ ಸಹಕಾರ ಸಂಘಟನೆ(SCO)ಯ ಸದಸ್ಯ ರಾಷ್ಟ್ರಗಳ ರಕ್ಷಣಾ ಮಂತ್ರಿಗಳ ಸಭೆಯ ಭಾಗವಾಗಿದೆ. ಶಾಂಘೈ ಸಹಕಾರ ಸಂಘಟನೆ(SCO) ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವಗಳ ಆಧಾರದ ಮೇಲೆ ನೀತಿಗಳನ್ನು ಅನುಸರಿಸುತ್ತದೆ ಮತ್ತು ಅದು ಪ್ರತಿ ರಾಷ್ಟ್ರದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಆದೇಶಿಸುತ್ತದೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ನಿಕಟವರ್ತಿಯೆಂದು ಪರಿಗಣಿಸಲಾಗಿರುವ ಜನರಲ್ ಲೀ ಅವರ ಭಾರತ ಭೇಟಿಯು ವಾಸ್ತವಿಕ ನಿಯಂತ್ರಣ ರೇಖೆ ಅಥವಾ ಎಲ್‌ಎಸಿಯಲ್ಲಿ ಎರಡು ದೇಶಗಳ ನಡುವಿನ ಉದದ್ವಿಗ್ನತೆ ಮಧ್ಯೆ ಮಹತ್ವದ್ದು ಎಂದು ಪರಿಗಣಿಸಲಾಗಿದೆ.ಜನರಲ್ ಲಿ ಮತ್ತು ರಾಜನಾಥ ಸಿಂಗ್ ಅವರು ಉದ್ವಿಗ್ನತೆಯನ್ನು ಪರಿಹರಿಸಲು ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಪ್ರಗತಿ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.
ಜನರಲ್ ಲಿ ಅವರ ಭೇಟಿಗೆ ಮುಂಚಿತವಾಗಿ, ಚೀನಾದ ರಕ್ಷಣಾ ಸಚಿವಾಲಯ, ಭಾನುವಾರ ನಡೆದ ಕಾರ್ಪ್ಸ್ ಕಮಾಂಡರ್ ಮಟ್ಟದ 18ನೇ ಸುತ್ತಿನ ಸಭೆಯಲ್ಲಿ, ಪೂರ್ವ ಲಡಾಖ್‌ನಲ್ಲಿನ ಉದ್ವಿಗ್ನತೆಗೆ ಸಂಬಂಧಿಸಿದಂತೆ ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡುವುದರ ಜೊತೆಗೆ “ಸಂಬಂಧಿತ ಸಮಸ್ಯೆಗಳ” ಇತ್ಯರ್ಥವನ್ನು “ವೇಗಗೊಳಿಸಲು” ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಭಾರತವು ಶಾಂಘೈ ಸಹಕಾರ ಸಂಘಟನೆ(SCO) ಅಧ್ಯಕ್ಷತೆ ವಹಿಸಿದ್ದು, ಈ ಸಂಘಟನೆಯು 2001 ರಲ್ಲಿ ಕಝಾಕಿಸ್ತಾನ್, ಚೀನಾ, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್, ಭಾರತವನ್ನು ಸದಸ್ಯರನ್ನಾಗಿ ಮಾಡಿಕೊಂಡಿರುವ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಎರಡು ವೀಕ್ಷಕ ರಾಷ್ಟ್ರಗಳಾಗಿ ಬೆಲಾರಸ್ ಮತ್ತು ಇರಾನ್ ದೆಹಲಿಯಲ್ಲಿ ಶಾಂಘೈ ಸಹಕಾರ ಸಂಘಟನೆ(SCO) ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲಿವೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement