ವೀಡಿಯೊ..: ಮೋದಿ ವಿಷಪೂರಿತ ಹಾವಿದ್ದಂತೆ ಎಂದ ಖರ್ಗೆ ; ನಂತ್ರ ಉಲ್ಟಾ ಹೊಡೆದ ಕಾಂಗ್ರೆಸ್‌ ಅಧ್ಯಕ್ಷ

ಗದಗ : ಪ್ರಧಾನಿ ನರೇಂದ್ರ ಮೋದಿ ವಿಷಪೂರಿತ ಹಾವಿದ್ದಂತೆ, ನೆಕ್ಕಿದರೆ ಸತ್ತೇ ಹೋಗುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡುರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
‘ಮೋದಿ ವಿಷಪೂರಿತ ಹಾವಿದ್ದಂತೆ. ಇದು ವಿಷವೋ ಅಲ್ಲವೋ ಎಂದು ನೀವು ಭಾವಿಸಿ ಅದನ್ನು ನೆಕ್ಕಿದರೆ, ನೀವು ಸತ್ತು ಹೋಗ್ತೀರಿ. ನೀವು ಯೋಚಿಸಬಹುದು: ಮೋದಿ ಒಬ್ಬ ಒಳ್ಳೆಯ ಮನುಷ್ಯ. ಅವರು ಪ್ರಧಾನಿ, ಇದು ವಿಷವೇ? ಅವರು ಕೊಟ್ಟಿದ್ದಾರೆ ಎಂದು ಭಾವಿಸಿ ಮೋದಿ ಕೊಟ್ಟಿದನ್ನು ನೀವು ನೆಕ್ಕಿದರೆ ನೀವು ಸಂಪೂರ್ಣವಾಗಿ ಮಲಗುತ್ತೀರಿ ಎಂದು ಖರ್ಗೆ ಹೇಳಿದ್ದಾರೆ.
ಗದಗ ಜಿಲ್ಲೆಯ‌ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಭಾಷಣದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಪರ‌ ಮತಯಾಚನೆ ಮಾಡಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯನ್ನು ವಿಷದ ಸರ್ಪಕ್ಕೆ ಹೋಲಿಸಿದ್ದಾರೆ. ಬಿಜೆಪಿಯವರ ಮನೆಯಲ್ಲಿ ದೇಶಕ್ಕಾಗಿ‌ ಒಂದೂ‌ ನಾಯಿ‌ ಕೂಡ ಸತ್ತಿಲ್ಲ. ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು ಎಂದು ಹೇಳಲಿ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಉಚಿತ ಅಕ್ಕಿ ಕೊಡುವ‌ ಕೆಲಸ ಮಾಡಿದ್ದು ಸೋನಿಯಾ ಗಾಂಧಿ ಅವರು. ನರೇಗಾ ಅನುಷ್ಠಾನ ಮಾಡಿದ್ದು ನಾವು. ರಾಜ್ಯದಲ್ಲಿ ಬಿಜೆಪಿ ಮಾಡಿದ ಸಾಧನೆ ಅಂದ್ರೆ 40% ಕಮಿಷನ್ ಪಡೆದದ್ದು​​. ಇಂತಹವರನ್ನು ಮೋದಿ ತನ್ನ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಒಬ್ಬ ಪ್ರಧಾನಿಯಾಗಿ ಹಳ್ಳಿ, ತಾಲೂಕಿಗೆ ಬಂದು ಓಡಾಡುತ್ತಿದ್ದಾರೆ. ಮೋದಿ‌ ಮುಖ ನೋಡಿ‌ ಮತ ಹಾಕಿ ಎಂದು ಹೇಳುತ್ತಾರೆ ಎಮದು ಆಕ್ರೋಶ ವ್ಯಕ್ತಪಡಿಸಿದರು.
ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆ 15 ಲಕ್ಷ ಹಾಕುತ್ತೇನೆ ಎಂದು ಭರವಸೆ ನೀಡಿದ್ದರು, ಆದರೆ ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ. ಹಗಲಿಗೆ ರಾತ್ರಿ, ರಾತ್ರಿಗೆ ಹಗಲು ಎಂದು ಹೇಳುತ್ತಾರೆ. ಡಬಲ್ ಇಂಜಿನ ಸರ್ಕಾರ ಎರಡು ಕಡೆ ಫೇಲ್ ಆಗಿದೆ. ಡಬಲ್ ಇಂಜೀನ್ ಯಾಕೆ ಯುವಕರಿಗೆ ನೌಕರಿ ಕೊಡ್ತಿಲ್ಲ. ನಮ್ಮ ಸರ್ಕಾರ ಇದ್ದಾಗ ದೊಡ್ಡ ದೊಡ್ಡ ಡ್ಯಾಂ, ದೊಡ್ಡ ದೊಡ್ಡ ನೀರಾವರಿ ಯೋಜನೆ ಮಾಡಿದ್ದೇವೆ. ಒಂಬತ್ತು ವರ್ಷದಲ್ಲಿ‌ ಮೋದಿ ಏನು ಮಾಡಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದರು.

ಯೂ ಟರ್ನ್‌ ಹೊಡೆದ ಖರ್ಗೆ..
ತಮ್ಮ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾದ ನಂತರ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಲ್ಟಾ ಹೊಡೆದಿದ್ದಾರೆ. ತಾನು ಮೋದಿ ವಿಷಪೂರಿತ ಹಾವಿನಂತೆ ಎಂದು ಹೇಳಿಲ್ಲ. ಭಾರತೀಯ ಜನತಾ ಪಕ್ಷ ವಿಷಪೂರಿತ ಹಾವಿನಂತೆ ಎಂದು ಹೇಳಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ನಾನು ಅವರ (ಪ್ರಧಾನಿ ಮೋದಿ) ಬಗ್ಗೆ ಮಾತನಾಡಿಲ್ಲನನ್ನ ಪ್ರಕಾರ ಅವರ ಸಿದ್ಧಾಂತ ವಷಪೂರಿತ ಹಾವಿನಂತಿದೆ, ಅದನ್ನು ನೆಕ್ಕಿ ನೋಡಿದರೆ ಸಾವು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದೇನೆ. ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

ಬಿಜೆಪಿ ಪ್ರತಿಕ್ರಿಯೆ….
ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಇದು “ಹತಾಶೆ” ಹೇಳಿಕೆ ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿಗೆ ಕರ್ನಾಟಕದಲ್ಲಿ ಸೋಲುವ ಭಯ ಎದುರಾಗಿದೆ ಈ ಹೇಳಿಕೆ ತೋರಿಸುತ್ತದೆ ಎಂದು ಹೇಳಿದ್ದಾರೆ.
“ಈಗ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯವರು ಪ್ರಧಾನಿ ಮೋದಿಯನ್ನು ‘ವಿಷಪೂರಿತ ಹಾವು’ ಎಂದು ಕರೆಯುತ್ತಾರೆ, ನಿಂದನೆ ಮಾಡುವುದು ಸೋನಿಯಾ ಗಾಂಧಿಯವರ ‘ಮೌತ್ ಕಾ ಸೌದಾಗರ್’ ಹೇಳಿಕೆಯಿಂದ ಪ್ರಾರಂಭವಾಯಿತು ಮತ್ತು ಅದು ಹೇಗೆ ಕೊನೆಗೊಂಡಿತು ಎಂದು ನಮಗೆ ತಿಳಿದಿದೆ. ಈ ಹತಾಶೆಯು ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ ಎಂದು ತೋರಿಸುತ್ತದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement