ವೀಡಿಯೊ….: ಪ್ರವಾಸಿಗರ ವಾಹನದ ಮೇಲೆ ದಾಳಿಗೆ ಮುಂದಾದ ಹೆಬ್ಬುಲಿ : ಮುಂದೇನಾಯ್ತು ನೋಡಿ

ಸಫಾರಿಗೆ ಹೋದಾಗ ಕೆಲವೊಂದು ಬಾರಿ ಪ್ರಾಣಿಗಳು ಪ್ರವಾಸಿಗರ ಮೇಲೆ ದಾಳಿ ಮಾಡುತ್ತವೆ. ಇಂತಹದ್ದೇ ಘಟನೆಯೊಂದರಲ್ಲಿ ಪ್ರವಾಸಿಗರ ಗುಂಪು  ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನದಲ್ಲಿ ಮುಂದೆ ಸಾಗುತ್ತಿದ್ದಾಗ ಅಲ್ಲಿಯೇ ಗಿಡಕಂಟಿಗಳ ಮೆಯಲ್ಲಿದ್ದ ಬೃಹತ್‌ ಹುಲಿಯೊಂದು ಕೋಪದಿಂದ ದಾಳಿ ಮಾಡಲು ವಾಹನದ ಬಳಿ ಬಂದ ದೃಶ್ಯದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಾಂತ ನಂದಾ ಅವರು ಈ ವೀಡಿಯೊವನ್ನು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ, ವಾಹನದಲ್ಲಿದ್ದ ತೆರಳುತ್ತಿದ್ದ ಪ್ರವಾಸಿಗರು ಪೊದೆಗಳ ಹಿಂದೆ ಅಡಗಿಕೊಂಡಿರುವ ಹುಲಿಯನ್ನು ನೋಡಿದ್ದಾರೆ. ಕೂಡಲೇ ತಮ್ಮ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಪ್ರವಾಸಿಗರನ್ನು ಕಂಡ ಹುಲಿ ಕೋಪದಿಂದ ಮುಂದೆ ಬಂದಿದೆ. ನೋಡ ನೋಡುತ್ತಿದಂತೆ ಹುಲಿಯ ಜೋರಾಗಿ ಘರ್ಜಿಸುತ್ತಾ ವಾಹನದ ಬಳಿ ಬಂದಿದೆ.

ಇದನ್ನು ಕಂಡ ಪ್ರವಾಸಿಗರು ಕಂಗಾಲಾಗಿ ಚೀರಿಕೊಂಡಿದ್ದಾರೆ. ತಕ್ಷಣವೇ ಸಫಾರಿ ವಾಹನದ ಚಾಲಕ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ. ಕಾಡಿನ ಪ್ರಾಣಿಗಳನ್ನು ನೋಡುವ ನಮ್ಮ ಉತ್ಸಾಹವು ಕೆಲವೊಮ್ಮೆ ಅಪಾಯವನ್ನು ಉಂಟು ಮಾಡಬಹುದು ಎಂಬುದಕ್ಕೆ ಈ ವೀಡಿಯೊ ಸಾಕ್ಷಿ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

ಈ ವೀಡಿಯೊವನ್ನು ಈಗಾಗಲೇ 41 ಸಾವಿರ ಜನ ವೀಕ್ಷಿಸಿದ್ದು., ಹಲವಾರು ಬಳಕೆದಾರರು ಈ ವೀಡಿಯೊಕ್ಕೆ ಕಮೆಂಟ್ ಮಾಡಿದ್ದು, ಸರಕಾರ ಈ ನಿಯಮ ಬದಲಾಯಿಸಿ ಜನರು ಸಫಾರಿಗೆ ಹೋಗುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ. ಕೆಲವು ಬಳಕೆದಾರರು ಇಂತಹ ಸಫಾರಿಗಳಿಂದಲೇ ಹಣ ಬರುತ್ತಿದ್ದು ಹುಲಿಗಳ ಸಂಖ್ಯೆ ಜಾಸ್ತಿಯಾಗಲು ಕಾರಣವಾಗಿದೆ ಎಂದು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement