ಶಿರಸಿ : ಸ್ವರ್ಣವಲ್ಲೀ ಕೃಷಿ ಪ್ರಶಸ್ತಿ, ಕುಶಲಕರ್ಮಿ, ಕೂಡು ಕುಟುಂಬ ಪ್ರಶಸ್ತಿಗಳು ಪ್ರಕಟ

ಶಿರಸಿ: ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನವು ಪ್ರತೀ ವರ್ಷ ನೀಡುವ ಅತ್ಯುತ್ತಮ ಕೃಷಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದು , ಮೇ 4ರಂದು ಸ್ವರ್ಣವಲ್ಲೀಯಲ್ಲಿ‌ ನಡೆಯಲಿರುವ ಕೃಷಿ ಜಯಂತಿಯ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಾಧಕ ಕೃಷಿಕ ಕೃಷಿ ಕಂಠೀರವ ಪ್ರಶಸ್ತಿಗೆ ವಾನಳ್ಳಿ ಕಣ್ಣಿಮನೆಯ ಗಣಪತಿ ಕೃಷ್ಣ ಭಟ್ಟ ಆಯ್ಕೆಯಾಗಿದ್ದಾರೆ.
ಸಾಧಕ ಕೃಷಿ ಮಹಿಳೆ ಪ್ರಶಸ್ತಿ-ಜೋಯಿಡಾ ಶಿರೋಳದ ಪಾರ್ವತಿ ಮಹಾದೇವ ಗಾವಡಾ,
ಉತ್ತಮ ಕೃಷಿ ಕುಟುಂಬ ಪ್ರಶಸ್ತಿ-ಸಿದ್ದಾಪುರದ ಹೇರೂರು ಹೂಡ್ಲಮನೆಯ ಮಂಜುನಾಥ ದೇವರು ಹೆಗಡೆ
ಉತ್ತಮ ಕುಶಲಕರ್ಮಿ ಪ್ರಶಸ್ತಿ-ಅಂಕೋಲಾದ ಹಿಲ್ಲೂರಿನ ಗೋವಿಂದ ಗಣಪಯ್ಶ ಹೆಗಡೆ ಕರೀಕಲ್
ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಗೆ ಪ್ರಥಮ ಸ್ಥಾನವನ್ನು ವಾಜಗದ್ದೆ ಶೀಗೆಹಳ್ಳಿಯ ದತ್ತಾತ್ರೆಯ ಗಣಪತಿ ಹೆಗಡೆ ಸಹೋದರರು ಪಡೆದಿದ್ದಾರೆ.
ದ್ವಿತೀಯ ಸ್ಥಾನವನ್ನು‌ ಇಬ್ಬರು ಹಂಚಿಕೊಂಡಿದ್ದು, ಸಿದ್ದಾಪುರದ ನಂದ್ಯಾನೆಯ ಮಹಾಬಲೇಶ್ವರ ವೆಂಕಟರಮಣ ಹೆಗಡೆ, ಯಲ್ಲಾಪುರದ ಕೆಂಚನಳ್ಳಿ ಕೆರೆಹೊಸಳ್ಳಿಯ ನಾರಾಯಣ ಗಣಪತಿ ಭಟ್ ಆಯ್ಕೆ ಆಗಿದ್ದಾರೆ.
ಕೃಷಿ ಜಯಂತಿಯ ಸಮಾರೋಪ ಸಮಾರಂಭದಲ್ಲಿ ಶ್ರೀ ಸ್ವರ್ಣವಲ್ಲೀ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಆಯ್ಕೆಗಾಗಿ ಪ್ರತಿಷ್ಠಾನದ ಪರವಾಗಿ ಪ್ರಗತಿಪರ ರೈತರಾದ ಸುಬ್ರಾಯ ಎಲ್.ಹೆಗಡೆ ತ್ಯಾಗಲಿ, ಸಚ್ಚಿದಾನಂದ ಹೆಗಡೆ‌ ಕಲಗದ್ದೆ ಸ್ವತಃ ಭೇಟಿ ಮಾಡಿ ಆಯ್ಕೆ ಮಾಡಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಹಕ್ಕಿಮನೆ ಜಂಟಿಯಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement