50,000 ಕ್ಕಿಂತ ಹೆಚ್ಚು ವಜ್ರದ ಹರಳುಗಳನ್ನು ಸೇರಿಸಿ ಉಂಗುರ ತಯಾರಿಸಿ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಮುಂಬೈನ ಜ್ಯುವೆಲ್ಲರ್ಸ್ | ವೀಕ್ಷಿಸಿ

ಮುಂಬೈ ಮೂಲದ ಆಭರಣ ವ್ಯಾಪಾರಿಯೊಬ್ಬರು 50,000 ಕ್ಕೂ ಹೆಚ್ಚು ವಜ್ರಗಳನ್ನು ಸೇರಿಸಿ ಉಂಗುರ ತಯಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ಪ್ರಕಾರ ಮುಂಬೈನಲ್ಲಿರುವ ಎಚ್.ಕೆ. ಡಿಸೈನ್ಸ್ ಮತ್ತು ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈ ಲಿಮಿಟೆಡ್ ಈ ವರ್ಷ ಮಾರ್ಚ್ 11 ರಂದು ಈ ಸಾಧನೆ ಮಾಡಿದೆ. ಅದ್ಭುತವಾದ ತುಣುಕು ಸಂಪೂರ್ಣವಾಗಿ … Continued

ವೀಡಿಯೊ…: ಐಪಿಎಲ್ ಪಂದ್ಯದ ವೇಳೆ ದೆಹಲಿಯಲ್ಲಿ ಎರಡು ತಂಡಗಳ ಅಭಿಮಾನಿಗಳ ನಡುವೆ ಭಾರೀ ಹೊಡೆದಾಟ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರೇಜ್ ಎಷ್ಟಿದೆಯೆಂದರೆ, ಇದು ಕೆಲವೊಮ್ಮೆ ಅಭಿಮಾನಿಗಳ ನಡುವೆ ವಾಗ್ವಾದಗಳು ಮತ್ತು ಹೊಡೆದಾಟಗಳಿಗೆ ಕಾರಣವಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಎಂದು ಹೇಳಲಾದ ಪಂದ್ಯದಲ್ಲಿ ಅಭಿಮಾನಿಗಳ ನಡುವೆ ಕೊಳಕು ಜಗಳ ನಡೆದಿದೆ. ಸ್ಟೇಡಿಯಂನೊಳಗೆ ಒಟ್ಟು 5-6 ಜನರು ಪರಸ್ಪರ ಬಡಿದಾಟ ಮಾಡಿಕೊಳ್ಳುವುದನ್ನು … Continued

ಅದಾನಿ ವಿರುದ್ಧ ಹಿಂಡೆನ್‌ಬರ್ಗ್‌ ವರದಿ : ತನಿಖೆ ಪೂರ್ಣಗೊಳಿಸಲು ಇನ್ನೂ 6 ತಿಂಗಳು ವಿಸ್ತರಣೆ ಕೋರಿದ ಸೆಬಿ

ನವದೆಹಲಿ: ಅದಾನಿ ಗ್ರೂಪ್ ವಿರುದ್ಧ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೆಚ್ಚಿನ ಸಮಯವನ್ನು ಕೇಳಿದೆ. ಮಾರುಕಟ್ಟೆ ನಿಯಂತ್ರಕರು ಶನಿವಾರ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಮನವಿಯನ್ನು ಸಲ್ಲಿಸಿದರು ಮತ್ತು ಅದರ ತನಿಖೆಯನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಕಾಲಾವಕಾಶವನ್ನು ಕೋರಿದರು. ತನಿಖೆ ಮುಂದುವರಿಸುವಂತೆ ಸುಪ್ರೀಂ … Continued

ಪ್ರಧಾನಿ ಮೋದಿ ‘ರಾಕ್ ಸ್ಟಾರ್’ ಆಗಿದ್ರೆ ಹೇಗೆ ಕಾಣ್ತಾ ಇದ್ರು…?: ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ರಚಿಸಿದ ಈ ಚಿತ್ರ ನೋಡಿ..!

ನವದೆಹಲಿ : ಕೃತಕ ಬುದ್ಧಿಮತ್ತೆಯ (AI) ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಕೋಲಾಹಲ ಸೃಷ್ಟಿಸಿವೆ. ಇಂಟರ್ನೆಟ್‌ನಲ್ಲಿ ಅನೇಕ ಜನ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಹೊಸ ಚಿತ್ರಗಳನ್ನ ಮಾಡುತ್ತಿದ್ದಾರೆ. ಇಂತಹದ್ದೇ ಚಿತ್ರ ರಚನೆಯಲ್ಲಿ ವ್ಯಕ್ತಿಯೊಬ್ಬರು ಕೃತಕ ಬುದ್ಧಿಮತ್ತೆ ಉಪಯೋಗಿಸಿ ವಿಶ್ವದಾದ್ಯಂತದ ಕೆಲವು ರಾಜಕಾರಣಿಗಳ ಚಿತ್ರಗಳನ್ನ ರಚಿಸಿದ್ದಾರೆ, ಈಗಿನ ರಾಜಕಾರಣಿಗಳು ರಾಕ್ ಸ್ಟಾರ್’ಗಳಾಗಿದ್ದರೆ ಹೇಗೆ ಕಾಣುತ್ತಾರೆ.? ಎಂಬ ಥೀಮ್‌ ಮೇಲೆ … Continued

ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಹಿಳೆಯ ಲಗೇಜಿನಿಂದ ಹೊರಬಿದ್ದವು ಕನಿಷ್ಠ 22 ಹಾವುಗಳು | ವೀಕ್ಷಿಸಿ

ನವದೆಹಲಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬ್ರೀಫ್‌ಕೇಸ್‌ನಲ್ಲಿ 22 ಹಾವುಗಳು ಮತ್ತು ಊಸರವಳ್ಳಿ ಪತ್ತೆಯಾಗಿವೆ…! ಕೌಲಾಲಂಪುರದಿಂದ ಆಗಮಿಸಿದ ಮಹಿಳಾ ಪ್ರಯಾಣಿಕಳನ್ನು ಶುಕ್ರವಾರ ಚೆನ್ನೈ ಏರ್‌ಪೋರ್ಟ್ ಕಸ್ಟಮ್ಸ್ ತಡೆದಿತ್ತು. ಆಕೆಯ ಚೆಕ್-ಇನ್ ಸಾಮಾನುಗಳನ್ನು ಪರಿಶೀಲಿಸಿದಾಗ, ವಿವಿಧ ಜಾತಿಯ 22 ಹಾವುಗಳು ಮತ್ತು ಊಸರವಳ್ಳಿಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕಸ್ಟಮ್ಸ್ ಆಕ್ಟ್, 1962 ಮತ್ತು ವನ್ಯಜೀವಿ ಸಂರಕ್ಷಣಾ … Continued

ಬಾಗಲಕೋಟೆ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 5 ಕೋಟಿ ರೂ. ಹಣ ಜಪ್ತಿ

ಬಾಗಲಕೋಟೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಕೋಟಿ ರೂ. ಹಣವನ್ನು ಚುನಾವಣಾಧಿಕಾರಿಗಳು, ಫ್ಲೈಯಿಂಗ್‌ ಸ್ಕ್ವಾಡ್‌ (Flying Squad) ಹಾಗೂ ಲೋಕಾಪುರ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲಕ್ಷಾನಟ್ಟಿ ಚೆಕ್​ಪೋಸ್ಟ್​ನಲ್ಲಿ ಚುನಾವಣಾಧಿಕಾರಿಗಳು ಹಾಗೂ ಲೋಕಾಪುರ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಕಾರಿನಲ್ಲಿ ಐದು ಕೋಟಿ ಪತ್ತೆಯಾಗಿದೆ. ಹುಬ್ಬಳ್ಳಿಯಿಂದ ಮುಧೋಳಕ್ಕೆ ಈ ಹಣವನ್ನ … Continued

ಜೆಇಇ ಮೇನ್ಸ್‌ ಪರೀಕ್ಷೆ: ಜೆ.ಎಸ್.ಎಸ್. ಆರ್.ಎಸ್.ಹುಕ್ಕೇರಿಕರ ಪಿಯು ಕಾಲೇಜ್‌ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಧಾರವಾಡ: ಧಾರವಾಡ ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಸಂಸ್ಥೆಯ ಆರ್.ಎಸ್. ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯದ 2022-2023ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜೆ.ಇ.ಇ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಜೆ.ಇ.ಇ ಪರೀಕ್ಷೆಯಲ್ಲಿ ಹಾಜರಾದ 08 (ಎಂಟು) ವಿದ್ಯಾರ್ಥಿಗಳು ಜೆ.ಇ.ಇ. ಬಿ.ಇ/ಬಿ.ಟೆಕ್ ವಿಭಾಗದ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು, ಅಡ್ವಾನ್ಸಡ್‌ ಪರೀಕ್ಷೆ ಬರೆಯುವ ಅರ್ಹತೆ … Continued

ಬೆಂಗಳೂರಿನಲ್ಲಿ ‘ನಮೋ’ ಭರ್ಜರಿ ರೋಡ್ ಶೋ….ಪ್ರಧಾನಿ ಮೋದಿಗೆ ಹೂಮಳೆಯ ಸ್ವಾಗತ | ವೀಕ್ಷಿಸಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಶನಿವಾರ ಉತ್ತರ ಬೆಂಗಳೂರಿನಲ್ಲಿ ನಡೆದ ಮೆಗಾ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಸಂಜೆ ನರೇಂದ್ರ ಮೋದಿ ಭರ್ಜರಿಯಾಗಿಯೇ ರೋಡ್ ಶೋ ನಡೆಸಿದ್ದಾರೆ. ಸಂಜೆ 6:15ಕ್ಕೆ ಮಾಗಡಿ ರಸ್ತೆ ಜಂಕ್ಷನ್‌ನಿಂದ ಆರಂಭವಾದ ರೋಡ್‌ ಶೋ, ರಿಂಗ್‌ ರೋಡ್‌ ಮೂಲಕ ಸುಮನಹಳ್ಳಿ ಜಂಕ್ಷನ್‌ವರೆಗೂ ಸಾಗಿತು. ಪ್ರಧಾನಿ ಮೋದಿಗೆ ಬಿಜೆಪಿ ಬೆಂಬಲಿಗರು ಹೂ … Continued

ಕರ್ನಾಟಕ ವಿಧಾನಸಭೆ ಚುನಾವಣೆ 2023 : ಮೊದಲು ಮತದಾನ ಮಾಡಿದ ನಟಿ ಲೀಲಾವತಿ…!

ಬೆಂಗಳೂರು: ಹಿರಿಯ ನಟಿ ಲೀಲಾವತಿ ಏಪ್ರಿಲ್ 29ರಂದು ಶನಿವಾರ ಮನೆಯಿಂದಲೇ ಮತದಾನ ಮಾಡಿದ್ದಾರೆ. ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ತಮ್ಮ ಮನೆಯಲ್ಲಿ ಮತದಾನ ಮಾಡಿದ್ದಾರೆ. ಈ ಮೂಲಕ ಮೊದಲ ಮತದಾನ ಮಾಡಿದ ಮೊದಲ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಯಾಲೆಟ್ ಪೇಪರ್ ಮೂಲಕ ಅವರು ಮತದಾನ ಮಾಡಿದರು. ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಹಕ್ಕನ್ನು ಹೊಂದಿರುವ ಅವರು, … Continued

ತಲೆಗೆ ಕಲ್ಲೇಟು ಬಿದ್ದ ಘಟನೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ

ತುಮಕೂರು : ನಿನ್ನೆ ಪ್ರಚಾರದ ವೇಳೆ ಕಲ್ಲೇಟು ಬಿದ್ದು ತಲೆಗೆ ಗಾಯಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು, ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಡಾ.ಜಿ.ಪರಮೇಶ್ವರ ಅವರು, ನಿನ್ನೆ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ವೇಳೆ ನನ್ನನ್ನ ಮೇಲಕ್ಕೆ ಎತ್ತಬೇಡಿ … Continued