ಕಳ್ಳಸಾಗಣೆಯಾಗಿದ್ದ 15 ಪುರಾತನ ಶಿಲ್ಪಗಳನ್ನು ಭಾರತಕ್ಕೆ ವಾಪಸ್‌ ನೀಡಲಿರುವ ಅಮೆರಿಕ

ನ್ಯೂಯಾರ್ಕ್: ಅಮೆರಿಕದ ಪ್ರಸಿದ್ಧ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ 15 ವಿಶೇಷ ಶಿಲ್ಪಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ. ಕಳಂಕಿತ ಶಿಲ್ಪ ಮಾರಾಟಗಾರ ಸುಭಾಷ್ ಕಪೂರ್ ಈ ಶಿಲ್ಪಗಳನ್ನು ಭಾರತದಿಂದ ಅಕ್ರಮವಾಗಿ ಒಯ್ದು ಮಾರಾಟ ಮಾಡಿದ್ದಾನೆ ಎಂದು ತಿಳಿದ ನಂತರ ಈಗ ಭಾರತಕ್ಕೆ ಹಿಂದಿರುಗಿಸುತ್ತಿದೆ. ಗುರುವಾರ ಹೇಳಿಕೆಯಲ್ಲಿ, 15 ಶಿಲ್ಪಗಳನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ … Continued

ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಭಾರತೀಯ ಮೂಲದ ಕುಟುಂಬದವರು ಸೇರಿ 8 ಮಂದಿ ಸಾವು : ಪೊಲೀಸರು

ಕೆನಡಾದಿಂದ ಅಕ್ರಮವಾಗಿ ಅಮೆರಿಕಕ್ಕೆ ದಾಟಲು ಯತ್ನಿಸಿ ಮೃತಪಟ್ಟ ಎಂಟು ಜನರ ಶವಗಳನ್ನು ಕೆನಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸತ್ತವರಲ್ಲಿ ಸೇಂಟ್ ಲಾರೆನ್ಸ್ ನದಿಯಲ್ಲಿ ದೋಣಿ ಮೂಲಕ ಕೆನಡಾದಿಂದ ಅಮೆರಿಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಭಾರತೀಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆರಂಭದಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ಆರು ಜನರ ಶವವನ್ನು ನದಿಯಿಂದ ಹೊರ … Continued

ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲು

ನವದೆಹಲಿ: ಗುಜರಾತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಹೊಸ ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಾಗ ರಾಹುಲ್‌ ಗಾಂಧಿ ಮಾಡಿದ ಕಾಮೆಂಟ್‌ಗಳ ಕುರಿತು ಶುಕ್ರವಾರ ಹರಿದ್ವಾರದ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಜನವರಿಯಲ್ಲಿ ಮಾಡಿದ ಭಾಷಣದಲ್ಲಿ, ಗಾಂಧಿಯವರು ರಾಷ್ಟ್ರೀಯ ಸ್ವಯಂಸೇವಕ … Continued

ಬೆಂಗಳೂರು-ಮೈಸೂರು ಎಕ್ಸಪ್ರೆಸ್​ ಹೆದ್ದಾರಿ ಟೋಲ್​ ದರ ಹೆಚ್ಚಳ ಆದೇಶ ಹಿಂಪಡೆದ ಎನ್​ ಹೆಚ್​ಎಐ

ರಾಮನಗರ: ಬೆಂಗಳೂರು-ಮೈಸೂರು ಎಕ್ಸಪ್ರೆಸ್​ ಹೆದ್ದಾರಿ (Bengaluru-Mysore Express way) ಟೋಲ್​ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ಹೆಚ್ಚಳದ ಆದೇಶವನ್ನು ಹಿಂಡೆದಿದೆ. ಎನ್​ಹೆಚ್​ಎಐ ಶೇ.22ರಷ್ಟು ಟೋಲ್ ದರ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ ಸಾರ್ವಜನಿಕರಿಂದ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಹಿಂಪಡೆದಿದೆ. ಟೋಲ್ ಸಂಗ್ರಹ … Continued

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎರಡು ದಿನ ಮಳೆ ಮುನ್ಸೂಚನೆ

ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಪ್ರಮುಖವಾಗಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗಬಹುದು ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ, ಅದೇ ರೀತಿ ದಕ್ಷಿಣ … Continued

ಹಿಂದೂಫೋಬಿಯಾ ಖಂಡಿಸುವ ನಿರ್ಣಯ ಅಂಗೀಕರಿಸಿದ ಅಮೆರಿಕದ ಮೊದಲ ರಾಜ್ಯವಾದ ಜಾರ್ಜಿಯಾ

ವಾಷಿಂಗ್ಟನ್‌: ಅಮೆರಿಕದ ಜಾರ್ಜಿಯಾ ಅಸೆಂಬ್ಲಿ ಹಿಂದೂಫೋಬಿಯಾವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ, ಇದು ಅಂತಹ ಶಾಸನಾತ್ಮಕ ಕ್ರಮವನ್ನು ತೆಗೆದುಕೊಂಡ ಮೊದಲ ಅಮೆರಿಕನ್ ರಾಜ್ಯವಾಗಿದೆ. ಹಿಂದೂಫೋಬಿಯಾ ಮತ್ತು ಹಿಂದೂ ವಿರೋಧಿ ಧರ್ಮಾಂಧತೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದೆ. ಜಾರ್ಜಿಯಾದಲ್ಲಿನ ಅತಿದೊಡ್ಡ ಹಿಂದೂ ಮತ್ತು ಭಾರತೀಯ-ಅಮೆರಿಕನ್ ಡಯಾಸ್ಪೊರಾ ಸಮುದಾಯಗಳಲ್ಲಿ ಒಂದಾದ ಅಟ್ಲಾಂಟಾದ ಉಪನಗರಗಳಲ್ಲಿರುವ ಫೋರ್ಸಿತ್ ಕೌಂಟಿಯ ಪ್ರತಿನಿಧಿಗಳಾದ ಲಾರೆನ್ ಮೆಕ್‌ಡೊನಾಲ್ಡ್ ಮತ್ತು … Continued

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ಇಂದು, ಶನಿವಾರ 2024 ರ ಆರ್ಥಿಕ ವರ್ಷದ ಮೊದಲ ದಿನ ಸರ್ಕಾರವು ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಂದು ಅಡುಗೆ ಅನಿಲದ ಬೆಲೆಯನ್ನು ಸುಮಾರು ₹ 92 ರಷ್ಟು ಕಡಿತಗೊಳಿಸಲಾಯಿತು. ಆದರೆ, ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರಿಗೆ ಮಾತ್ರ ದರ ಇಳಿಕೆಯಾಗಿದೆ. ದೇಶೀಯ ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಬೆಲೆ … Continued

ಕರ್ನಾಟಕ ವಿಧಾನಸಭಾ ಚುನಾವಣೆ 2023 : ಏಪ್ರಿಲ್ 6 ಅಥವಾ 7 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ-ಪ್ರಹ್ಲಾದ ಜೋಶಿ

ಬೆಳಗಾವಿ : ರಾಜ್ಯ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು ಏಪ್ರಿಲ್ 6 ಅಥವಾ 7 ರಂದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶುಕ್ರವಾರ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ‘ಟಿಕೆಟ್ ನೀಡುವ ಮೊದಲು ಪಕ್ಷವು ವಿಭಿನ್ನ ಜನರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿದೆ. ಬಹುತೇಕ ಏಪ್ರಿಲ್ 6 … Continued