ಕರ್ನಾಟಕ ಚುನಾವಣೆ 2023: ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿಯಿಂದ ಬಿಜೆಪಿ ಮೇಲೆ ಪರಿಣಾಮ ಏನಾಗಬಹುದು..? ; ಎನ್‌ಡಿಟಿವಿ ಜನಾಭಿಪ್ರಾಯ ಏನು ಹೇಳಿದೆ..?

ಬೆಂಗಳೂರು: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗಿದ್ದ ಮೀಸಲಾತಿ ತೆಗೆದು ಲಿಂಗಾಯತ ಮತ್ತು ಒಕ್ಕಲಿಗರಿಗೆ 4% ಮೀಸಲಾತಿಯನ್ನು ನೀಡುವ ರಾಜ್ಯದ ಬಿಜೆಪಿ ಸರ್ಕಾರದ ನಿರ್ಧಾರವು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ -2023 ರಲ್ಲಿ ಪಕ್ಷಕ್ಕೆ ಪ್ರಯೋಜನ ನೀಡಬಹುದು ಎಂದು ಎನ್‌ಡಿಟಿವಿ ಲೋಕನೀತಿ-ಕೇಂದ್ರದ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ (CSDS) ಸಹಯೋಗದೊಂದಿಗೆ ನಡೆಸಿದ ಸಾರ್ವಜನಿಕ ಅಭಿಪ್ರಾಯದಲ್ಲಿ ನಿರೀಕ್ಷಿಸಲಾಗಿದೆ. ಎನ್‌ಡಿಟಿವಿ ಸಮೀಕ್ಷೆಯು … Continued

ಪಾಕಿಸ್ತಾನದಲ್ಲಿ ಉಗ್ರರು ಬಳಸುವ 14 ಮೆಸೆಂಜರ್ ಆ್ಯಪ್ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಪಾಕಿಸ್ತಾನದಲ್ಲಿ ಉಗ್ರರು ಬಳಸುತ್ತಿದ್ದ 14 ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ಮಾಹಿತಿಯನ್ನು ರವಾನಿಸಲು ಈ ಅಪ್ಲಿಕೇಶನ್‌ಗಳನ್ನು ಭಯೋತ್ಪಾದಕರು ಸಂವಹನ ವೇದಿಕೆಗಳಾಗಿ ಬಳಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶದ ಭಯೋತ್ಪಾದಕರು ರಹಸ್ಯ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಬಳಸುತ್ತಿದ್ದ ಕಾರಣ 14 ಮೆಸೆಂಜರ್ ಆ್ಯಪ್ ಗಳನ್ನು … Continued

ವೀಡಿಯೊ…: ಆನೆಯೊಂದಿಗೆ ಚೆಲ್ಲಾಟವಾಡಲು ಹೋದ ಯುವತಿಯನ್ನು ಚೆಂಡಿನಂತೆ ಎತ್ತಿ ಬಿಸಾಡಿದ ಬೃಹತ್‌ ಆನೆ..

ಆನೆಗಳ ಬಳಿ ತೆರಳುವಾಗ, ಅವುಗಳೊಂದಿಗೆ ತಮಾಷೆ ಮಾಡುವಾಗ ಎಚ್ಚರಿಕೆ ಅಗತ್ಯ. ಏಕೆಂದರೆ ಅವುಗಳು ಯಾವಾಗ ಬೇಕಾದರೂ ಕೆರಳಿ ದಾಳಿ ನಡೆಸಬಹುದು. ಇಲ್ಲೊಬ್ಬಳು ಯುವತಿ ಈ ತರಹ ತಮಾಷೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ. ಯುವತಿ ಬಾಳೆಹಣ್ಣುಗಳನ್ನು ಕೊಡಲು ಆನೆ ಬಳಿ ತೆರಳಿದ್ದಾಳೆ. ಸುಮ್ಮನಿದ್ದ ಆನೆ ಏಕಾಏಕಿ ದಾಳಿ ಮಾಡಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ … Continued

ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಸೇರಿದ ಶಿವಾನಂದ ಹೆಗಡೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ನಡೆದ ಬೃಹತ್‌ ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಕಡತೋಕಾ ಅವರು ಸೋಮವಾರ ಸಹಸ್ರಾರು ಅಭಿಮಾನಿಗಳೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೇವಲ ಹಣವನ್ನು ನೋಡಿ, ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ಹೊಸಬರನ್ನು ತಂದು ಕುಮಟಾ-ಹೊನ್ನಾವರ … Continued

ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಲ್. ಎಸ್. ಶಾಸ್ತ್ರಿ ನೇಮಕ

ಬೆಳಗಾವಿ : ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಚುಸಾಪ ರಾಜ್ಯ ಸಂಚಾಲಕ ಡಾ. ಎಂ. ಜಿ. ಆರ್. ಅರಸ್ ಅವರು ಪ್ರಕಟಿಸಿದ್ದಾರೆ. ಕಳೆದ ನಾಲ್ಕು ವರ್ಷ ಚುಸಾಪ ಅಧ್ಯಕ್ಷರಾಗಿದ್ದ ಅಶೋಕ ಮಳಗಲಿ ಅವರ ಸ್ಥಾನದಲ್ಲಿ ಶಾಸ್ತ್ರಿಯವರು … Continued

ಹೊಸ ಮಾಲೀಕನಿಂದ ತಪ್ಪಿಸಿಕೊಂಡು 27 ದಿನಗಳ ನಂತರ 64 ಕಿಮೀ ದೂರದ ತನ್ನ ಹಿಂದಿನ ಮಾಲೀಕನ ಮನೆ ತಲುಪಿದ ಈ ನಾಯಿ…!

ಐರ್ಲೆಂಡ್‌ನ ನಾಯಿಯೊಂದು ತನ್ನ ಹೊಸ ಮಾಲೀಕನಿಂದ ತಪ್ಪಿಸಿಕೊಂಡು ತನ್ನ ಹಿಂದಿನ ಮಾಲೀಕನ ಮನೆಗೆ 64 ಕಿಮೀ ನಡೆದುಕೊಂಡು ಬಂದು ತಲುಪಿದ ನಂತರ ಸುದ್ದಿಯಲ್ಲಿದೆ…! ಕೂಪರ್ ಎಂಬ ಹೆಸರಿನ ಈ ಗೋಲ್ಡನ್‌ ರಿಟ್ರಿವರ್‌ ನಾಯಿಯನ್ನು ಉತ್ತರ ಐರ್ಲೆಂಡ್‌ನ ಕೌಂಟಿ ಟೈರೋನ್‌ನ ಡಂಗನ್ನನ್‌ನಲ್ಲಿರುವ ಕುಟುಂಬವು ದತ್ತು ತೆಗೆದುಕೊಂಡಿತ್ತು; ಆದಾಗ್ಯೂ, ಆ ಗಂಡು ನಾಯಿ ತನ್ನ ಹೊಸ ಮಾಲೀಕನ ಮನೆಯಲ್ಲಿ … Continued

ಈ ಮೊದಲಿನ ಎಲ್ಲ ದಾಖಲೆಗಳನ್ನೂ ಉಡೀಸ್‌ ಮಾಡಿದ ಏಪ್ರಿಲ್‌ ತಿಂಗಳಿನ ಜಿಎಸ್‌ಟಿ ಸಂಗ್ರಹ…!

ನವದೆಹಲಿ: ಏಪ್ರಿಲ್‌ನಲ್ಲಿ ಸರ್ಕಾರವು 1.87 ಲಕ್ಷ ಕೋಟಿ ರೂಪಾಯಿಗಳಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಮೇ 1 ರಂದು ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ.ಗಳಷ್ಟು ಜಿಎಸ್‌ಟಿ ಸಂಗ್ರಹವಾಗಿರುವುದು ಈವರೆಗಿನ ಸಾರ್ವಕಾಲಿಕ ಗರಿಷ್ಠ ಸಂಗ್ರಹವಾಗಿದೆ. ಏಪ್ರಿಲ್ 2022 ರಲ್ಲಿ ಸಂಗ್ರಹಿಸಲಾದ 1.68 … Continued

ಸಿರಿಯಾದಲ್ಲಿ ಐಸಿಸ್ ಮುಖ್ಯಸ್ಥ ಅಬು ಹುಸೇನ್ ಖುರಾಶಿಯನ್ನು ಕೊಂದು ಹಾಕಿದ ಟರ್ಕಿ

ಟರ್ಕಿಯ ಎಂಐಟಿ ಗುಪ್ತಚರ ಸಂಸ್ಥೆ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತ ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಮುಖ್ಯಸ್ಥನನ್ನು ಸಿರಿಯಾದಲ್ಲಿ ಕೊಲ್ಲಲಾಗಿದೆ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಭಾನುವಾರ ಹೇಳಿದ್ದಾರೆ. ಅಬು ಹುಸೇನ್ ಅಲ್-ಖುರಾಶಿ ಎಂಬ ದಾಯೆಶ್‌ನ ಶಂಕಿತ ನಾಯಕನನ್ನು ನಿನ್ನೆ (ಶನಿವಾರ) ಸಿರಿಯಾದಲ್ಲಿ ಎಂಐಟಿ (MIT) ನಡೆಸಿದ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ” … Continued

ಮಥುರಾ ಶ್ರೀ ಕೃಷ್ಣ ಜನ್ಮ ಭೂಮಿ -ಶಾಹಿ ಈದ್ಗಾ ವಿವಾದ: ಅಲಹಾಬಾದ್ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಮಥುರಾ ಕೃಷ್ಣ ಜನ್ಮ ಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಇಂದು, ಸೋಮವಾರ ಶಾಹಿ ಈದ್ಗಾ ಟ್ರಸ್ಟ್ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ ಹಾಗೂ ಸಿವಿಲ್ ನ್ಯಾಯಾಧೀಶರ ತೀರ್ಪಿನ ವಿರುದ್ಧ ಮತ್ತೊಮ್ಮೆ ವಿಚಾರಣೆ ನಡೆಸಿದ ನಂತರ ಆದೇಶ ನೀಡುವಂತೆ ಮಥುರಾದ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್ … Continued

ವಿವಾಹ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯಬೇಕಾಗಿಲ್ಲ: ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸುಪ್ರೀಂಕೋರ್ಟ್‌ ನ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಇಂದು, ಸೋಮವಾರ ಮಹತ್ವದ ತೀರ್ಪು ಪ್ರಕಟಿಸಿದೆ. ವಿಚ್ಛೇದನ ಪಡೆಯಲು ಬಯಸುವವರು ಪರಸ್ಪರ ಬಾಳಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಸಹಮತದ ವಿಚ್ಛೇದನ ನೀಡಲು ಸಂವಿಧಾನದ 142ನೇ ವಿಧಿ ಬಳಸಿ ಸುಪ್ರೀಂ ಕೋರ್ಟ್‌ ತನ್ನ ಪೂರ್ಣ ಅಧಿಕಾರ ಚಲಾಯಿಸಬಹುದು ಹಾಗೂ ಆರು ತಿಂಗಳು ಕಾಯದೆ … Continued