ಕರ್ನಾಟಕ ವಿಧಾನಸಭೆ ಚುನಾವಣೆ: ಹೆಣ್ಣು ಸಿಗದ ಯುವಕರಿಗೆ ಪ್ರಣಾಳಿಕೆಯಲ್ಲಿ ಮದುವೆ ಭಾಗ್ಯ ಗ್ಯಾರಂಟಿ ಯೋಜನೆ ಘೋಷಿಸಿದ ಈ ಕ್ಷೇತ್ರಗಳ ಅಭ್ಯರ್ಥಿಗಳು…!

ಬೆಳಗಾವಿ : ಜಾರಕಿಹೊಳಿ ಸಹೋದರರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಕಣಕ್ಕಿಳಿದಿರುವ ಗೋಕಾಕ ಹಾಗೂ ಅರಬಾವಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸಹೋದರರಿಬ್ಬರು (ಕುಳ್ಳೂರ) ಕಣಕ್ಕಿಳಿದಿದ್ದಾರೆ. ಈಗ ಅವರ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆ ವಿಶೇಷವಾಗಿ ಎಲ್ಲೆಡೆ ಸುದ್ದಿಯಾಗುತ್ತಿದೆ. ಹೆಣ್ಣು ಸಿಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಅವರು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಗೋಕಾಕ ಹಾಗೂ ಅರಬಾವಿ ಮತಕ್ಷೇತ್ರದಲ್ಲಿ ವಿಧಾನಸಭಾ … Continued

ಜೆಇಇ ಮೇನ್ಸ್‌ ಪರೀಕ್ಷೆ : ಧಾರವಾಡ ಜೆ.ಎಸ್.ಎಸ್. ಎಸ್‌ಎಂಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ: ಧಾರವಾಡ ನಗರದ ವಿದ್ಯಾಗಿರಿಯ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ೨೦೨೨-೨೦೨೩ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಾಲ್ವರು ವಿದ್ಯಾರ್ಥಿಗಳು ಜೆ.ಇ.ಇ. ಬಿ.ಇ/ಬಿ.ಟೆಕ್ ವಿಭಾಗದ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು, ಅಡ್ವಾನ್ಸಡ್‌ ಪರೀಕ್ಷೆ ಬರೆಯುವ ಅರ್ಹತೆ ಪಡೆದಿದ್ದಾರೆ. ಎಚ್.ಎನ್.ಪ್ರಪುಲ್ ೯೫.೪೮%, ವಿಠ್ಠಲ ನವಲಗುಂದ ೯೪.೮೭%, ಈರಣ್ಣಾ ಪೋಲಿಸಪಾಟೀಲ್ ೯೩.೪೮% ಐಶ್ವರ್ಯಾ ಹಿರೇಮಠ … Continued

ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಿದ ಕೆಎಸ್​ಆರ್​​ಟಿಸಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದೆ. ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಬಿ. ಫಾರ್ಮ್ ಸೇರಿದಂತೆ ವಿವಿಧ ಕೋರ್ಸ್​ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಸ್​ ಪಾಸ್​ ಅವಧಿ ವಿಸ್ತರಣೆಗೆ ಕೆಎಸ್​ಆರ್​ಟಿಸಿ ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳ ತರಗತಿ ಅಥವಾ ಪರೀಕ್ಷೆ ನಡೆಯುತ್ತಿರುವುದನ್ನು ಖಚಿತಪಡಿಸಿಕೊಮಡು ಹೆಚ್ಚುವರಿ ಹಣ ಪಾವತಿಸಿಕೊಂಡು ಒಂದು ಅಥವಾ … Continued

ಬಜರಂಗದಳ ನಿಷೇಧದ ಉಲ್ಲೇಖ: ಕಾಂಗ್ರೆಸ್ ಪ್ರಣಾಳಿಕೆ ಪ್ರತಿ ಸುಟ್ಟು ಹಾಕಿದ ಈಶ್ವರಪ್ಪ

ಕಲಬುರಗಿ: ಬಜರಂಗದಳ ನಿಷೇಧವು ಸೇರಿದಂತೆ ಹಲವುಭರವಸೆಗಳಿರುವ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಗುರುವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ವೇಳೆ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಹೇಳಿದ ಕಾಂಗ್ರೆಸ್‌ ಪ್ರಣಾಳಿಕೆಯೇ ಆಕ್ರೋಶಗೊಂಡ ಈಶ್ವರಪ್ಪ, ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶಕ್ಕೆ … Continued

ಮಣಿಪುರ ಹಿಂಸಾಚಾರ: ಇಂಟರ್ನೆಟ್ ಸ್ಥಗಿತ, 8 ಜಿಲ್ಲೆಗಳಲ್ಲಿ ಕರ್ಫ್ಯೂ , ಸೇನೆ ನಿಯೋಜನೆ ; ಈಶಾನ್ಯ ರಾಜ್ಯ ಏಕೆ ಹೊತ್ತಿ ಉರಿಯುತ್ತಿದೆ..?

ಇಂಫಾಲ: ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳ ಪ್ರತಿಭಟನೆಯ ನಡುವೆ ಮಣಿಪುರದಲ್ಲಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಸೇನೆಯು ಇಂದು, ಗುರುವಾರ ಧ್ವಜ ಮೆರವಣಿಗೆ ನಡೆಸಿತು. ಇಂಫಾಲ್, ಚುರಾಚಂದ್‌ಪುರ ಮತ್ತು ಕಾಂಗ್‌ಪೋಕ್ಪಿಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನಿನ್ನೆ ರಾತ್ರಿ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಯಿತು. ಮಣಿಪುರ ಸರ್ಕಾರ ರಾಜ್ಯದಲ್ಲಿ ಮೊಬೈಲ್ … Continued

ಕಾಶ್ಮೀರದ ಬಾರಾಮುಲ್ಲಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ: 24 ಗಂಟೆಗಳಲ್ಲಿ ಇದು 2ನೇ ಎನ್‌ಕೌಂಟರ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂದು, ಗುರುವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಎಕೆ 47 ರೈಫಲ್ ಮತ್ತು ಒಂದು ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡನೇ … Continued

ಮೋಚಾ ಚಂಡಮಾರುತ ಮುಂದಿನ ವಾರ ಭಾರತದ ಪೂರ್ವ ಕರಾವಳಿ ಅಪ್ಪಳಿಸುವ ಸಾಧ್ಯತೆ

ನವದೆಹಲಿ: ವರ್ಷದ ಮೊದಲ ಚಂಡಮಾರುತ, ಮೋಚಾ ಚಂಡಮಾರುತವು ಈ ವಾರ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಈ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ಅಭಿವೃದ್ಧಿ ಹೊಂದುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮೇ 6 ರ ಸುಮಾರಿಗೆ ಚಂಡಮಾರುತದ ಪರಿಚಲನೆಯು ರೂಪುಗೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಸೈಕ್ಲೋನ್ ರಚನೆಯನ್ನು ಇನ್ನೂ ದೃಢೀಕರಿಸಲಾಗಿಲ್ಲ. “ಮೇ … Continued

ಜೆಇಇ ಮೇನ್‌ ಪರೀಕ್ಷೆಯಲ್ಲಿ ಧಾರವಾಡ ಅರ್ಜುನ ಕಾಲೇಜ್‌ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಧಾರವಾಡ : ಧಾರವಾಡದ ಅರ್ಜುನ(ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಪ್ರೀಲ್ ೨೦೨೩ ರಲ್ಲಿ ಐಐಟಿ, ಎನ್‌ಐಟಿ ಮತ್ತು ಐಐಐಟಿ ಕಾಲೇಜುಗಳು ಪ್ರವೇಶಾತಿಗಾಗಿ ನಡೆದ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಅರ್ಜುನ(ಶಾಂತಿನಿಕೇತನ) ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ರಾಜನ್ ಶೆಟ್ಟಿ ೯೮.೩೯ ಪರ್ಸೆಂಟೈಲ್‌, ಸಾತ್ವಿಕ್ ಹೆಗಡೆ ೯೭.೬೬ ಪರ್ಸೆಂಟೈಲ್‌, ರವಿಕುಮಾರ ೯೬.೨೧ ಪರ್ಸೆಂಟೈಲ್‌, ವಿಶ್ವಜೀತ ೯೫.೯೫ … Continued

“2019ರಲ್ಲಿ ಪ್ರಧಾನಿ ಮೋದಿಗೆ ಅದನ್ನು ಸ್ಪಷ್ಟಪಡಿಸಿದೆ…”: ಆತ್ಮಚರಿತ್ರೆ ಪುಸ್ತಕದಲ್ಲಿ ಶರದ್ ಪವಾರ್

ಮುಂಬೈ: ಭಾರತೀಯ ಜನತಾ ಪಕ್ಷವು 2019 ರಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ)ಯೊಂದಿಗೆ ಚುನಾವಣೋತ್ತರ ಮೈತ್ರಿಗೆ ಉತ್ಸುಕವಾಗಿತ್ತು, ಆದರೆ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ಪಕ್ಷವು ಮೈತ್ರಿ ಬಗ್ಗೆ ಒಲವು ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಸ್ಪಷ್ಟ”ವಾಗಿ ಹೇಳಿದ್ದರು…. ಬುಧವಾರ ಬಿಡುಗಡೆಯಾದ 2015ರ ನಂತರದ ಘಟನೆಗಳ ಮೇಲೆ ಕೇಂದ್ರೀಕರಿಸುವ ತಮ್ಮ ಪರಿಷ್ಕೃತ ಆತ್ಮಚರಿತ್ರೆ … Continued

ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಹಲ್ಲೆ : ಕುಸ್ತಿಪಟುಗಳ ಆರೋಪ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಬುಧವಾರ ಸಂಜೆ ಹೊರಗಿನವರೊಂದಿಗೆ ಜಗಳ ನಡೆದಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದ ಅವರಲ್ಲಿ ಕೆಲವರು ದೆಹಲಿ ಪೊಲೀಸ್ ಸಿಬ್ಬಂದಿ ಎಂದು ಆರೋಪಿಸಿದ್ದಾರೆ. ಆದರೆ ದಾಳಿಕೋರರ ಗುರುತಿನ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ರಾಷ್ಟ್ರ ರಾಜಧಾನಿಯ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನಲ್ಲಿ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವುದು … Continued