ವೀಡಿಯೊ : ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಬಡಿದಾಡಿಕೊಂಡ ರಷ್ಯಾದ ಪ್ರತಿನಿಧಿ-ಉಕ್ರೇನ್ ಸಂಸದ | ವೀಕ್ಷಿಸಿ

ಕಪ್ಪು ಸಮುದ್ರದ ಆರ್ಥಿಕ ಸಮುದಾಯದ 61 ನೇ ಅಧಿವೇಶನದಲ್ಲಿ ರಷ್ಯಾದ ಪ್ರತಿನಿಧಿಯೊಬ್ಬರು ಉಕ್ರೇನ್ ಧ್ವಜವನ್ನು ಆ ದೇಶದ ಸಂಸದರೊಬ್ಬರಿಂದ ಕಸಿದುಕೊಂಡ ನಂತರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಇವರಿಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದೆ. ಇದು ವೈರಲ್ ವೀಡಿಯೊದಲ್ಲಿ ಕಂಡುಬಂದಿದೆ.
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ 14 ತಿಂಗಳ ನಂತರ ಗುರುವಾರ ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಕಪ್ಪು ಸಮುದ್ರದ ಆರ್ಥಿಕ ಸಮುದಾಯದ 61 ನೇ ಸಂಸತ್ತಿನ ಅಧಿವೇಶನದಲ್ಲಿ ಈ ನಾಟಕೀಯ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಉಕ್ರೇನಿನ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ಅವರು ತಮ್ಮ ದೇಶದ ಧ್ವಜವನ್ನು ಹಿಡಿದಿರುವುದನ್ನು ಕಂಡ ಅಪರಿಚಿತ ರಷ್ಯಾದ ಪ್ರತಿನಿಧಿ ಅವರ ಬಳಿಗೆ ಬಂದು ಆ ಧ್ವಜ ಕಿತ್ತುಕೊಂಡು ಹೊರನಡೆಯಲು ಪ್ರಾರಂಭಿಸಿದರು ಎಂಬುದನ್ನು ವೀಡಿಯೊ ತೋರಿಸಿದೆ.ಅವರನ್ನು ಬೆನ್ನತ್ತಿದ ಉಕ್ರೇನಿಯನ್‌ ಸಂಸದ ಪಂಚ್‌ಗಳ ಸುರಿಮಳೆಗೈದರು. ಅವರನ್ನು ಇತರ ಅಧಿಕಾರಿಗಳು ತಡೆದರು. ಆದರೆ ನಂತರ ಅವರು ಧ್ವಜವನ್ನು ಕಿತ್ತುಕೊಂಡರು.

ಘಟನೆಯ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅವರು ಉಕ್ರೇನಿಯನ್ ಭಾಷೆಯಲ್ಲಿ “ನಮ್ಮ ಧ್ವಜದಿಂದ ಪಂಜಗಳು ದೂರ” ಎಂದು ಬರೆದಿದ್ದಾರೆ.
ಸ್ಥಳದಲ್ಲಿದ್ದ ಇತರರು ಘಟನೆಯನ್ನು ಚಿತ್ರೀಕರಿಸುತ್ತಿರುವುದು ಕಂಡುಬಂದಿದೆ. ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಯೊಂದಿಗೆ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರನ್ನು ಹತ್ಯೆ ಮಾಡಲು ಉಕ್ರೇನ್ ಪ್ರಯತ್ನಿಸಿದೆ ಎಂದು ರಷ್ಯಾ ಹೇಳಿಕೊಂಡ ಒಂದು ದಿನದ ನಂತರ ಎರಡು ಕಾದಾಡುತ್ತಿರುವ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿದೆ. ಉಕ್ರೇನ್ ರಷ್ಯಾದ ಆರೋಪವನ್ನು ನಿರಾಕರಿಸಿದೆ.

ಕಪ್ಪು ಸಮುದ್ರದ ಆರ್ಥಿಕ ಸಮುದಾಯ ಎಂಬ ಸಂಘಟನೆಯನ್ನು 30 ವರ್ಷಗಳ ಹಿಂದೆ ಸ್ಥಾಪಿಸಲಾಯಿತು ಮತ್ತು ರಷ್ಯಾ ಮತ್ತು ಉಕ್ರೇನ್ ಎರಡೂ ಅದರ ಸದಸ್ಯರಾಗಿದ್ದಾರೆ. ಇದು “ಕಪ್ಪು ಸಮುದ್ರ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಕಡೆಗೆ ಕೆಲಸ ಮಾಡುವ” ಗುರಿಯನ್ನು ಹೊಂದಿದೆ.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement