ಬ್ಯಾಂಕ್‌ ಉದ್ಯೋಗಿಗಳಿಗೆ ವಾರಕ್ಕೆ 5 ದಿನ ಕೆಲಸದ ಪ್ರಸ್ತಾಪ : ಶೀಘ್ರದಲ್ಲೇ ಕೇಂದ್ರದಿಂದ ಅಧಿಸೂಚನೆ ಸಾಧ್ಯತೆ-ವರದಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಕೆಲಸದ ಅವಧಿ ಸದ್ಯದಲ್ಲಿಯೇ ಬದಲಾಗಲಿದೆ. ವಾರಕ್ಕೆ 5 ದಿನ ಕೆಲಸ ಮತ್ತು 2 ದಿನ ರಜೆ ಪದ್ಧತಿಯನ್ನು ಜಾರಿಗೆ ತರಬೇಕು ಎನ್ನುವ ಬ್ಯಾಂಕ್‌ ನೌಕರರ ಬೇಡಿಕೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹೊಸ ಪದ್ಧತಿ ಜಾರಿಗೆ ಹಣಕಾಸು ಸಚಿವಾಲಯವು ಸದ್ಯದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಬ್ಯಾಂಕ್ ಉದ್ಯೋಗಿಗಳಿಗೆ ಬಹುನಿರೀಕ್ಷಿತ ಐದು ದಿನಗಳ ಕೆಲಸದ ವಾರ ಶೀಘ್ರದಲ್ಲೇ ಜಾರಿಗೆ ಬರಬಹುದು ಮತ್ತು ಹಣಕಾಸು ಸಚಿವಾಲಯವು ಸಹ ಇದಕ್ಕೆ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ CNBC ಆವಾಜ್ ವರದಿ ಮಾಡಿದೆ.
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಈ ಬೇಡಿಕೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ವೇತನ ಮಂಡಳಿ ಪರಿಷ್ಕರಣೆಯೊಂದಿಗೆ ಅಧಿಸೂಚನೆ ಹೊರಡಿಸಬಹುದು ಎಂದು ಮೂಲಗಳು ತಿಳಿಸಿವೆ. ಈಗ, ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕುಗಳು ತೆರೆದಿರುತ್ತವೆ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕಿಗೆ ರಜೆ ಇರುತ್ತದೆ.

ಕೊರೊನಾ ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ಬ್ಯಾಂಕಿಗೆ ವಾರದಲ್ಲಿ 5 ದಿನಗಳ ಕೆಲಸದ ಬೇಡಿಕೆ ಜೋರಾಯಿತು. ಐಬಿಎ ಐದು ದಿನಗಳ ಕೆಲಸದ ವಾರಕ್ಕೆ ಯೂನಿಯನ್‌ಗಳ ಪ್ರಸ್ತಾಪವನ್ನು ತಿರಸ್ಕರಿಸಿತು. ಆದರೆ ನೌಕರರಿಗೆ 19 ಪ್ರತಿಶತದಷ್ಟು ವೇತನ ಹೆಚ್ಚಳವನ್ನು ನೀಡಿತು. ಜನವರಿ 2023 ರಲ್ಲಿ, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU), ಬ್ಯಾಂಕಿಂಗ್ ವಲಯದ ಟ್ರೇಡ್ ಯೂನಿಯನ್‌ಗಳ ಛತ್ರಿ ಸಂಸ್ಥೆಯು ಐದು ದಿನಗಳ ಬ್ಯಾಂಕಿಂಗ್, ಪಿಂಚಣಿ ನವೀಕರಣ ಮತ್ತು ಎಲ್ಲಾ ಕೇಡರ್‌ಗಳಲ್ಲಿನ ನೇಮಕಾತಿಯಂತಹ ವಿಷಯಗಳ ಮೇಲೆ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿತ್ತು. ನಂತರ ಫೆಬ್ರವರಿ 2023 ರಲ್ಲಿ, ಬ್ಯಾಂಕ್ ಯೂನಿಯನ್‌ಗಳ ಐದು ದಿನಗಳ ಕೆಲಸದ ವಾರದ ಬೇಡಿಕೆಗಳನ್ನು ಪರಿಗಣಿಸುವುದಾಗಿ ಐಬಿಎ (IBA) ಹೇಳಿತ್ತು, ಆದರೆ, ಇದಕ್ಕೆ ಪ್ರತಿಯಾಗಿ ಕೆಲಸದ ಸಮಯವನ್ನು ಪ್ರತಿದಿನ 40 ನಿಮಿಷಗಳಷ್ಟು ಹೆಚ್ಚಿಸಬಹುದಾಗಿದೆ. TOI ವರದಿಯ ಪ್ರಕಾರ, ಉದ್ಯೋಗಿಗಳು ಪ್ರತಿದಿನ ಬೆಳಿಗ್ಗೆ 9:45 ರಿಂದ ಸಂಜೆ 5:30 ರವರೆಗೆ ಕೆಲಸ ಮಾಡಬೇಕಾಗುತ್ತದೆ. ಹೊಸ ನಿಯಮ ಜಾರಿಗೆ ಬಂದರೆ, ಬ್ಯಾಂಕಿಗೆ ಶನಿವಾರ ಮತ್ತು ಭಾನುವಾರ ಎರಡೂ ದಿನ ರಜೆ ಅನ್ವಯವಾಗಲಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement