‘ಪಾಕ್‌ ಆಕ್ರಮಿತ ಕಾಶ್ಮೀರ ತೆರವು ಮಾಡಿ ಎಂಬ ಜೈ ಶಂಕರ ಹೇಳಿಕೆ ನಂತರ ಪಾಕಿಸ್ತಾನದ ರಕ್ಷಣೆಗೆ ಧಾವಿಸಿದ ಚೀನಾ

ನವದೆಹಲಿ: ಗೋವಾದಲ್ಲಿ ನಡೆದ ಶಾಂಘೈ ಕಾರ್ಪೊರೇಷನ್ ಆರ್ಗನೈಸೇಶನ್ (ಎಸ್‌ಸಿಒ) ಸಭೆಯಲ್ಲಿ ಭಾಗವಹಿಸಿದ ಒಂದು ದಿನದ ನಂತರ, ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರು ಎರಡು ದಿನಗಳ ಭೇಟಿಗಾಗಿ ಶುಕ್ರವಾರ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಹಾಗೂ ವಿಶ್ವಸಂಸ್ಥೆಯ ಚಾರ್ಟರ್, ಸಂಬಂಧಿತ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ” ಅನುಗುಣವಾಗಿ ಕಾಶ್ಮೀರ ಸಮಸ್ಯೆಯನ್ನು ಸರಿಯಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಬೇಕು ಎಂದು ಚೀನಾ ಮತ್ತು ಪಾಕಿಸ್ತಾನ ಜಂಟಿ ಹೇಳಿಕೆ ನೀಡಿವೆ.
ಜಮ್ಮು ಮತ್ತು ಕಾಶ್ಮೀರದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಯಾವಾಗ ತೆರವು ಮಾಡುತ್ತಾರೆ’ ಎಂಬ ಬಗ್ಗೆ ನೆರೆಯ ದೇಶ ಉತ್ತರಿಸಬೇಕು ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ ಅವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಚೀನಾವು ಪಾಕಿಸ್ತಾನದ ನೆರವಿಗೆ ಧಾವಿಸಿದೆ. ಭಯೋತ್ಪಾದನೆ ಮತ್ತು ಮಾತುಕತೆಗಳು ಪರಸ್ಪರ ಒಟ್ಟಿಗೆ ನಡೆಯುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ವಿವಾದವು ಇತಿಹಾಸದಿಂದ ಉಳಿದಿದೆ ಮತ್ತು ಯಾವುದೇ ಏಕಪಕ್ಷೀಯ ಕ್ರಮವನ್ನು ತಪ್ಪಿಸುವ ಮೂಲಕ ವಿಶ್ವಸಂಸ್ಥೆಯ ನಿರ್ಣಯಗಳ ಪ್ರಕಾರ ಪರಿಹರಿಸಬೇಕು ಎಂದು ಚೀನಾ ಶನಿವಾರ ಹೇಳಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ‘ಪಾಕಿಸ್ತಾನ-ಚೀನಾ ಸ್ಟ್ರಾಟೆಜಿಕ್ ಡೈಲಾಗ್’ನ 4ನೇ ಸುತ್ತಿನ ಮುಕ್ತಾಯದಲ್ಲಿ ಚೀನಾ-ಪಾಕಿಸ್ತಾನ ಜಂಟಿ ಹೇಳಿಕೆ ನೀಡಿವೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

ಪಾಕಿಸ್ತಾನಕ್ಕೆ ಎರಡು ದಿನಗಳ ಭೇಟಿಯಲ್ಲಿರುವ ಕ್ವಿನ್ ಗ್ಯಾಂಗ್ ಶನಿವಾರ ಪಾಕಿಸ್ತಾನದ ಸಹವರ್ತಿ ಬಿಲ್ವಾಲ್ ಭುಟ್ಟೋ ಜರ್ದಾರಿ ಅವರೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದು ಅವರ ಮೊದಲ ಪಾಕಿಸ್ತಾನದ ಪ್ರವಾಸವಾಗಿದೆ.
ಈಗಾಗಲೇ ಅಸ್ಥಿರ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಯಾವುದೇ ಏಕಪಕ್ಷೀಯ ಕ್ರಮಗಳನ್ನು ಎರಡೂ ಕಡೆಯವರು ವಿರೋಧಿಸಿದರು ಎಂದು ಜಂಟಿ ಹೇಳಿಕೆ ತಿಳಿಸಿದೆ.
ರಾಜಕೀಯ, ಕಾರ್ಯತಂತ್ರ, ಆರ್ಥಿಕ, ರಕ್ಷಣಾ ಭದ್ರತೆ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಸಹಕಾರದ ಬಗ್ಗೆ ಪರಿಶೀಲಿಸಲಾಯಿತು ಮತ್ತು ಸಂವಾದದ ಸಮಯದಲ್ಲಿ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾಶ್ಮೀರದ ಕುರಿತು ಚೀನಾ-ಪಾಕಿಸ್ತಾನ ಜಂಟಿ ಹೇಳಿಕೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ (MEA) ಅಧಿಕೃತ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.
ಪಾಕಿಸ್ತಾನ ಪಿಒಕೆ ತೆರವು ಮಾಡಿದಾಗ’
ಮೇ 4 ಮತ್ತು 5 ರಂದು ಗೋವಾದಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ, ವಿದೇಶಾಂಗ ಸಚಿವ ಎಸ್.ಜೈಶಂಕರ ಅವರು ಭಯೋತ್ಪಾದನೆ ಮತ್ತು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಮೇಲೆ ತಮ್ಮ ತೀಕ್ಷ್ಣವಾದ ವಾಗ್ದಾಳಿ ನಡೆಸಿದರು. ಪಾಕಿಸ್ತಾನಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರನ್ನು ʼಭಯೋತ್ಪಾದಕ ಉದ್ಯಮ, ಸಮರ್ಥಕ ಮತ್ತು ವಕ್ತಾರ” ಎಂದು ಕರೆದರು. ಶ್ರೀನಗರದಲ್ಲಿ ಭಾರತವು ಜಿ-20 ಸಭೆಗಳನ್ನು ಆಯೋಜಿಸುವುದಕ್ಕೆ ಆಕ್ಷೇಪಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಜೈಶಂಕರ ಅವರು ಟೀಕಿಸಿದರು.
ಪಾಕಿಸ್ತಾನಕ್ಕೂ ಜಿ-20 ಗೂ ಯಾವುದೇ ಸಂಬಂಧವಿಲ್ಲ, ಶ್ರೀನಗರ ಮತ್ತು ಕಾಶ್ಮೀರಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರು ಜಮ್ಮು ಮತ್ತು ಕಾಶ್ಮೀರದ ಅಕ್ರಮವಾಗಿ ಆಕ್ರಮಿತ ಪ್ರದೇಶಗಳನ್ನು ಯಾವಾಗ ತೆರವು ಮಾಡುತ್ತಾರೆ ಎಂದು ಅವರು ಉತ್ತರಿಸಬೇಕು” ಎಂದು ಎಸ್‌ಸಿಒ ಸಭೆಯಲ್ಲಿ ಎಸ್‌ ಜೈಶಂಕರ ಹೇಳಿದರು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement