ಮೈಸೂರು : ಸಕಲ ಸರ್ಕಾರಿ ಗೌರವದೊಂದಿಗೆ ಆನೆ ಬಲರಾಮನ ಅಂತ್ಯಕ್ರಿಯೆ

ನವದೆಹಲಿ: 14 ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊತ್ತ ಗೌರವಕ್ಕೆ ಪಾತ್ರವಾಗಿದ್ದ ಬಲರಾಮ ಆನೆ ಭಾನುವಾರ ಮೃತಪಟ್ಟಿದ್ದು, ಆನೆಯ ಅಂತ್ಯಕ್ರಿಯೆಯನ್ನು ಸೋಮವಾರ ಅರಣ್ಯ ಇಲಾಖೆಯು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಿತು.
67 ವರ್ಷ ವಯಸ್ಸಿನ ಬಲರಾಮ ಆನೆ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಬಲರಾಮ ಆನೆ ಮೃತಪಟ್ಟಿತ್ತು. ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿತ್ತು. ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆ ನಡೆಸಲಾಗಿದೆ.
ಸೋಮವಾರ ಬಲರಾಮನ ಅಂತ್ಯಕ್ರಿಯನ್ನು ಅರಣ್ಯ ಇಲಾಖೆ ಸಕಲ ಸರ್ಕಾರಿ ಗೌರವಗಳಿಂದಿಗೆ ನೆರವೇರಿಸಿದೆ. ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಪಾಲ್ಗೊಂಡು ಗೌರವ ಸಲ್ಲಿಸಿದರು.
ಪ್ರಧಾನಿ ಕಂಬನಿ…
ಪ್ರಧಾನಿ ನರೇಂದ್ರ ಮೋದಿ ಅವರು ಆನೆ ಬಲರಾಮ ನಿಧನಕ್ಕೆ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದು, “ಹಲವು ವರ್ಷಗಳಿಂದ, ಗಜರಾಜ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದ. ಆತ ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿಪಾತ್ರನಾಗಿದ್ದನು. ಅವನ ಅಗಲಿಕೆಯಿಂದ ದುಃಖವಾಗಿದೆ. ಓಂ ಶಾಂತಿ” ಎಂದು ಬಲರಾಮನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಬಲರಾಮನ ಸಾವಿಗೆ ಅನಾರೋಗ್ಯಕ್ಕೆ ಕರುಳು ಬೇನೆಯೂ ಕಾರಣ ಎಂದು ಹೇಳಲಾಗಿದೆ. ಕಳೆದ ತಿಂಗಳು ಕುಡಿದ ನೀರನ್ನೆಲ್ಲಾ ವಾಂತಿ ಮಾಡಿಕೊಂಡಿದ್ದ ಬಲರಾಮನಿಗೆ ಪರೀಕ್ಷೆ ಮಾಡಿದಾಗ ಗಂಟಲಿನಲ್ಲಿ ಯಾವುದೋ ವಸ್ತು ಸಿಕ್ಕಿ ಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಈ ವೇಳೆ ಗಂಜಿ ಮಾದರಿಯ ಆಹಾರವನ್ನು ನೀಡಿ ಉಪಚರಿಸಲಾಗಿತ್ತು. ಬಳಿಕ ಗಂಟಲಿನಲ್ಲಿ ಸಿಲುಕಿದ್ದ ಮರದ ತುಂಡು ಹೊಟ್ಟೆ ಸೇರಿತ್ತು. ಆ ನಂತರ ಹಿಂಭಾಗದಿಂದ(ಗುದದ್ವಾರ) ಕೈ ಹಾಕಿ ಹೊಟ್ಟೆಯಲ್ಲಿದ್ದ ಮರದ ತುಂಡನ್ನು ಹೊರಗೆ ತೆಗೆಯಲಾಗಿತ್ತು ಎಂದು ಹೇಳಲಾಗಿದೆ.
ಏಳು ತಿಂಗಳ ಹಿಂದೆ ಗುಂಡೇಟು…

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಬಲರಾಮನನ್ನು ಭೀಮನಕಟ್ಟೆ ಕ್ಯಾಂಪ್‍ನಲ್ಲಿಡಲಾಗಿತ್ತು. 2022ರ ಡಿಸೆಂಬರ್‌ 14ರಂದು ರಾತ್ರಿ ಕ್ಯಾಂಪ್ ಸಮೀಪ ಇರುವ ಹೊಲದ ಮಾಲೀಕ ಕಾಡಾನೆಯೆಂದು ಭಾವಿಸಿ ಬಲರಾಮನ ಮೇಲೆ ಗುಂಡು ಹಾರಿಸಿದ್ದ. ಆದರೆ ಬಲರಾಮನ ಮೈಗೆ 45 ಕಡೆ ಚೆರ್ರಿ ತೂರಿ ಗಾಯವಾಗಿತ್ತು. ಸುಸ್ತಾಗಿ ಬಿದ್ದಿದ್ದ ಬಲರಾಮನನ್ನು ಕ್ಯಾಂಪ್‍ಗೆ ಕರೆತಂದು ದೇಹಹೊಕ್ಕಿದ್ದ ಗುಂಡಿನ ಚೆರ್ರಿಯನ್ನು ಹೊರತೆಗೆಯಲಾಗಿತ್ತು. ಬಳಿಕ ಸಪ್ಟಿಕ್ ಆಗದಂತೆ ಚಿಕಿತ್ಸೆ ನೀಡಿ ಬಲರಾಮನನ್ನು ಗುಣಪಡಿಸಲಾಗಿತ್ತು.

ಏಳು ತಿಂಗಳ ಹಿಂದೆ ಗುಂಡೇಟು…
ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಬಲರಾಮನನ್ನು ಭೀಮನಕಟ್ಟೆ ಕ್ಯಾಂಪ್‍ನಲ್ಲಿಡಲಾಗಿತ್ತು. 2022ರ ಡಿಸೆಂಬರ್‌ 14ರಂದು ರಾತ್ರಿ ಕ್ಯಾಂಪ್ ಸಮೀಪ ಇರುವ ಹೊಲದ ಮಾಲೀಕ ಕಾಡಾನೆಯೆಂದು ಭಾವಿಸಿ ಬಲರಾಮನ ಮೇಲೆ ಗುಂಡು ಹಾರಿಸಿದ್ದ. ಆದರೆ ಬಲರಾಮನ ಮೈಗೆ 45 ಕಡೆ ಚೆರ್ರಿ ತೂರಿ ಗಾಯವಾಗಿತ್ತು. ಸುಸ್ತಾಗಿ ಬಿದ್ದಿದ್ದ ಬಲರಾಮನನ್ನು ಕ್ಯಾಂಪ್‍ಗೆ ಕರೆತಂದು ದೇಹಹೊಕ್ಕಿದ್ದ ಗುಂಡಿನ ಚೆರ್ರಿಯನ್ನು ಹೊರತೆಗೆಯಲಾಗಿತ್ತು. ಬಳಿಕ ಸಪ್ಟಿಕ್ ಆಗದಂತೆ ಚಿಕಿತ್ಸೆ ನೀಡಿ ಬಲರಾಮನನ್ನು ಗುಣಪಡಿಸಲಾಗಿತ್ತು.
ದಸರಾ ಆನೆಗಳಲ್ಲಿಯೇ ಸೌಮ್ಯ ಸ್ವಭಾವವುಳ್ಳವನಾಗಿರುವ ಬಲರಾಮ ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ದಾಖಲೆ ಹೊಂದಿದೆ. ದ್ರೋಣ ಆನೆಯ ಅಕಾಲಿಕ ಸಾವಿನ ಬಳಿಕ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ವಹಿಸಿಕೊಂಡಿತ್ತು.
ಕೊಡಗು ಜಿಲ್ಲೆ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ 1978ರಲ್ಲಿ ಸೆರೆ ಹಿಡಿಯಲಾದ ಬಲರಾಮನನ್ನು ಮತ್ತಿಗೋಡು ಆನೆ ಶಿಬಿರದಲ್ಲಿ ಪೋಷಿಸಲಾಗುತಿತ್ತು. ಕಳೆದ ಐದಾರು ವರ್ಷದಿಂದ ಮತ್ತಿಗೂಡು ಆನೆ ಕ್ಯಾಂಪ್ ಸಮೀಪವಿರುವ ಹುಣಸೂರು ತಾಲೂಕಿಗೆ ಒಳಪಡುವ ಭೀಮನಕಟ್ಟೆ ಆನೆ ಕ್ಯಾಂಪ್‍ನಲ್ಲಿ ಪಾಲನೆ ಮಾಡಲಾಗುತ್ತಿತ್ತು.
ಬಲರಾಮ ಆನೆಯನ್ನು ಸೆರೆ ಹಿಡಿಯುವ ಮುನ್ನವೇ ಕಾಡಾನೆಯೊಂದಿಗೆ ಕಾಳಗಕ್ಕಿಳಿದು ಎಡಭಾಗದ ಕಣ್ಣನ್ನು ಕಳೆದುಕೊಂಡಿತ್ತು. ಬಲಭಾಗ ಒಂದೇ ಕಣ್ಣಿನಲ್ಲೇ 14 ಬಾರಿ ಚಿನ್ನದ ಅಂಬಾರಿ ಹೊತ್ತು ಲಕ್ಷಾಂತರ ಜನರ ಹರ್ಷೋದ್ಗಾರದ ನಡುವೆ ಯಶಸ್ವಿಯಾಗಿ ಸಾಗಿತ್ತು. ಬಲರಾಮ ತನ್ನ ಕ್ಯಾಂಪ್‍ ನಲ್ಲಿದ್ದ ಚಿಕ್ಕ ಆನೆಗಳಿಗೂ ತರಬೇತಿದಾರನಾಗಿದ್ದ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement