ಮಹತ್ವದ ತೀರ್ಪಿನಲ್ಲಿ ಭೂಮಿ, ಪೊಲೀಸ್, ಕಾನೂನು-ಸುವ್ಯವಸ್ಥೆ ಹೊರತುಪಡಿ ಎಲ್ಲ ಸೇವೆಗಳ ಮೇಲೆ ದೆಹಲಿ ಸರ್ಕಾರದ ಅಧಿಕಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮಹತ್ವದ ತೀರ್ಪಿನಲ್ಲಿ, ಭೂಮಿ, ಪೊಲೀಸ್ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸೇವೆಗಳನ್ನು ಹೊರತುಪಡಿಸಿ, ಭಾರತೀಯ ಆಡಳಿತ ಸೇವೆ (ಐಎಎಸ್) ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿನ ಎಲ್ಲಾ ಸೇವೆಗಳ ಮೇಲೆ ದೆಹಲಿ ಸರ್ಕಾರವು ನಿಯಂತ್ರಣವನ್ನು ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಸರ್ವಾನುಮತದ ತೀರ್ಪಿನಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ. ಚಂದ್ರಚೂಡ ಮತ್ತು … Continued

ಅಮೃತಸರದ ಸ್ವರ್ಣ ಮಂದಿರದ ಬಳಿ ಸ್ಫೋಟ : ಐವರ ಬಂಧನ, ವಾರದಲ್ಲಿ ಇದು 3ನೇ ಸ್ಫೋಟ

ಅಮೃತಸರ : ಮೇ 11 ರ ಗುರುವಾರ ಮುಂಜಾನೆ ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಸ್ಫೋಟ ಸಂಭವಿಸಿದೆ. ಈ ನಂತರ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮೃತಸರದ ಗುರು ರಾಮದಾಸಜಿ ನಿವಾಸದ ಹಿಂದೆ ಗುರುವಾರ ಮಧ್ಯರಾತ್ರಿ 12:30 ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಒಂದು ವಾರದಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಮೂರನೇ ಸ್ಫೋಟ … Continued

ಬಿಜೆಪಿ ನಾಯಕ ಸಿ.ಟಿ ರವಿ ಆಸ್ಪತ್ರೆಗೆ ದಾಖಲು

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಅಭ್ಯರ್ಥಿ ಸಿ.ಟಿ ರವಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಸಿ.ಟಿ ರವಿ ಅವರಿಗೆ ನಿನ್ನೆ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿ.ಟಿ ರವಿ (CT Ravi) ತಡರಾತ್ರಿ ಕಿಡ್ನಿ ಸಮಸ್ಯೆಯಿಂದ ತೊಂದರೆ ಅನುಭವಿಸಿದ್ದು, ತಕ್ಷಣವೇ ಮನೆಯವರು ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ … Continued

ಕರ್ನಾಟಕ ವಿಧಾನಸಭೆ ಚುನಾವಣೆ: ರಾಜ್ಯಾದ್ಯಂತ ದಾಖಲೆ ಪ್ರಮಾಣದ ಮತದಾನ, ಬೆಂಗಳೂರು ನೀರಸ – ಜಿಲ್ಲಾವಾರು ಮಾಹಿತಿ ಇಲ್ಲಿದೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಾಖಲೆಯ ಮತದಾನವಾಗಿದ್ದು, ಕಳೆದ ಬಾರಿಗಿಂತಲೂ ಶೇಕಡಾವಾರು ಪ್ರಮಾಣ ಈ ಬಾರಿ ಹೆಚ್ಚಾಗಿದೆ. ಈ ಬಾರಿ 72.67%ರಷ್ಟು ಮತದಾನವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ 72.44%ರಷ್ಟು ಮತದಾನವಾಗಿತ್ತು ಹಾಗೂ 2013ರ ಚುನಾವಣೆಯಲ್ಲಿ 71.83ರಷ್ಟು ಮತದಾನವಾಗಿತ್ತು. ಇದಕ್ಕೆ ಮೋಸ್ಟಲ್‌ ಮತದಾನ ಹಾಗೂ ಮನೆಯಿಂದಲೇ ಮತದಾನ ಮಾಡಿದ 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರ ಮತದಾನದ … Continued

ಯುಕೆಯಲ್ಲಿ ಮೊದಲ ಬಾರಿಗೆ ಮೂವರು ಪೋಷಕರ ಡಿಎನ್‌ಎಯಿಂದ ಶಿಶುವಿನ ಜನನ…!

ಯುನೈಟೆಡ್‌ ಕಿಂಗ್ಡಂನಲ್ಲಿ ಮೊದಲ ಬಾರಿಗೆ ಮೂರು ಜನರ ಡಿಎನ್‌ಎ ಬಳಸಿದ ಮಗು ಜನಿಸಿದೆ ಎಂದು ಫರ್ಟಿಲಿಟಿ ರೆಗ್ಯುಲೇಟರ್‌ (fertility regulator) ದೃಢಪಡಿಸಿದೆ. ಹೆಚ್ಚಿನ ಡಿಎನ್‌ಎ (DNA) ಮಗುವಿನ ತಂದೆ-ತಾಯಿ ಮತ್ತು ಸುಮಾರು 0.1% ಡಿಎನ್‌ಎ ಮೂರನೇ ವ್ಯಕ್ತಿ ದಾನಿ ಮಹಿಳೆಯಿಂದ ಬಂದಿದೆ ಎಂದು ಹೇಳಲಾಗಿದೆ. ಪ್ರವರ್ತಕ ತಂತ್ರವು ವಿನಾಶಕಾರಿ ಮೈಟೊಕಾಂಡ್ರಿಯದ ಕಾಯಿಲೆಗಳೊಂದಿಗೆ ಮಕ್ಕಳು ಜನಿಸುವುದನ್ನು ತಡೆಯುವ … Continued

ಶೀಘ್ರದಲ್ಲೇ ಟ್ವಿಟರಿನಲ್ಲಿ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು…!

ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ ಶೀಘ್ರದಲ್ಲೇ ಹೊಸ ಫೀಚರ್‌ಗಳನ್ನು ಪರಿಚಯಿಸಲಿದೆ. ಟ್ವಿಟರ್ ಶೀಘ್ರದಲ್ಲೇ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂದೇಶವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಟರ್‌ ಅನುಮತಿಸುತ್ತದೆ ಎಂದು ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ. ಕೆಲವೇ ದಿನಗಳಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಕೊಡದೆಯೇ ವೀಡಿಯೊ ಕಾಲ್ ಹಾಗೂ ವಾಯ್ಸ್ ಕರೆಗಳನ್ನು ಮಾಡಬಹುದು ಎಂದು … Continued