ಬಿಯರಿನಿಂದ ಓಡುವ ಮೋಟಾರ್‌ ಸೈಕಲ್ ತಯಾರಿಸಿದ ವ್ಯಕ್ತಿ…! ಗಂಟೆಗೆ 240 ಕಿಮೀ ವೇಗದ ವರೆಗೆ ಹೋಗಬಹುದಂತೆ | ವೀಕ್ಷಿಸಿ

ರಾಕೆಟ್-ಚಾಲಿತ ಶೌಚಾಲಯ ಮತ್ತು ಜೆಟ್-ಚಾಲಿತ ಕಾಫಿ ಪಾಟ್‌ನಂತಹ ಅಸಾಮಾನ್ಯ ಆವಿಷ್ಕಾರಗಳನ್ನು ಮಾಡಿ ಪ್ರಸಿದ್ಧವಾದ ಅಮೆರಿಕದ ಕೇಯ್‌ ಮೈಕೆಲ್ಸನ್, ಈಗ ಮತ್ತೊಂದು ಆವಿಷ್ಕಾರ ಮಾಡಿದ್ದಾರೆ. ಅವರು  ಬಿಯರ್-ಚಾಲಿತ ಮೋಟಾರ್‌ ಸೈಕಲ್ ಮಾಡಿ ಯಶಸ್ವಿಯಾಗಿರುವುದಾಗಿ ಹೇಳಿಕೊಂಡಿದ್ದು, ಇದು ಗಂಟೆಗೆ ಗರಿಷ್ಠ 240 ಕಿ.ಮೀ ವೇಗದಲ್ಲಿ ಓಡುತ್ತದೆ ಎಂದು ಹೇಳಿಕೊಂಡಿದ್ದಾರೆ.
Fox9 ನೊಂದಿಗೆ ಮಾತನಾಡಿದ ಮೈಕೆಲ್ಸನ್ ಅವರು, ಮೋಟಾರ್‌ಸೈಕಲ್ಲಿಗೆ ತಾನು ಅನಿಲ-ಚಾಲಿತ ಎಂಜಿನ್‌ನ ಬದಲು ಹೀಟಿಂಗ್‌ ಕಾಯ್ಲ್‌ ಬಳಸಿರುವುದಾಗಿ ಬಹಿರಂಗಪಡಿಸಿದ್ದಾರೆ. ಹೀಟಿಂಗ್‌ ಕಾಯ್ಲ್‌, ಬಿಯರ್ ಅನ್ನು 300 ಡಿಗ್ರಿಗಳವರೆಗೆ ಬಿಸಿಮಾಡುತ್ತದೆ, ಅದು ನಂತರ ನಳಿಕೆಗಳಲ್ಲಿ ಸೂಪರ್-ಹೀಟೆಡ್ ಸ್ಟೀಮ್ ಆಗಿ ಪರಿವರ್ತನೆಯಾಗಿ ಬೈಕು ಮುಂದಕ್ಕೆ ಚಲಿಸುವಂತೆ ಮಾಡುತ್ತದೆ. ಅವರು ಹೇಳಿಕೊಂಡಂತೆ, ಬಿಯರ್ ಚಾಲಿತ ಮೋಟಾರ್‌ಸೈಕಲ್ ಅನ್ನು ಬ್ಲೂಮಿಂಗ್ಟನ್‌ನಲ್ಲಿರುವ ಅವರ ಗ್ಯಾರೇಜ್‌ನಲ್ಲಿ ನಿರ್ಮಿಸಲಾಗಿದೆ.

“ಈ ಮೋಟಾರ್‌ಸೈಕಲ್‌ನ ಒಂದು ವಿಷಯವು ಖಂಡಿತವಾಗಿಯೂ ವಿಭಿನ್ನವಾಗಿದೆ, ಮತ್ತು ನಾನು ನಿಜವಾಗಿಯೂ ಸೃಜನಾತ್ಮಕವಾಗಿರಲು ಇಷ್ಟಪಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಅವರ ಅನ್ವೇಷಣೆಗೆ ಸಂಬಂಧಿಸಿದಂತೆ, ಬ್ಲೂಮಿಂಗ್‌ಟನ್‌ನಲ್ಲಿ ಗ್ಯಾಸ್ ಬೆಲೆಗಳು ಹೆಚ್ಚಾಗುತ್ತಿವೆ ಎಂದು ಅವರು ಪ್ರಸ್ತಾಪಿಸಿದ್ದಾರೆ, ಆದ್ದರಿಂದ ಅದನ್ನು ಇಂಧನಕ್ಕಾಗಿ ಬಳಸುವುದು ಉತ್ತಮವಲ್ಲ ಎಂದು ಅವರು ಭಾವಿಸಿರುವುದಾಗಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಗಂಟೆಗೆ ಗರಿಷ್ಠ 240 ಕಿ.ಮೀ ವೇಗ…
ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆ ಮಾಡಿದ ಮೊದಲ ನಾಗರಿಕ ಎಂಬ ಹೆಗ್ಗಳಿಕೆಗೆ ‘ರಾಕೆಟ್‌ಮ್ಯಾನ್’ ಎಂಬ ಅಡ್ಡಹೆಸರು ಹೊಂದಿರುವ ಮೈಕೆಲ್ಸನ್ ಅವರು, ಮೋಟಾರ್‌ಸೈಕಲ್ ಗಂಟೆಗೆ 150 ಮೈಲುಗಳಷ್ಟು (ಗಂಟೆಗೆ 240 ಕಿಮೀ) ವೇಗವನ್ನು ತಲುಪುತ್ತದೆ ಎಂದು ಹೇಳಿದ್ದಾರೆ. ಅದರ ಸಾಮರ್ಥ್ಯಗಳನ್ನು ಪರೀಕ್ಷಿಸಲು ಶೀಘ್ರದಲ್ಲೇ ಬೈಕ್ ಅನ್ನು ಡ್ರ್ಯಾಗ್ ಸ್ಟ್ರಿಪ್‌ಗೆ ಕೊಂಡೊಯ್ಯುವ ಭರವಸೆ ಇದೆ. ರೆಡ್ ಬುಲ್ ಮತ್ತು ಕ್ಯಾರಿಬೌ ಕಾಫಿ ಸೇರಿದಂತೆ ಯಾವುದೇ ದ್ರವವು ತನ್ನ ಬೈಕಿಗೆ ಇಂಧನವಾಗಬಹುದು ಎಂದು ಅವರು ಅಸಾಂಪ್ರದಾಯಿಕ ಆವಿಷ್ಕಾರದ ಬಗ್ಗೆ ಹೇಳಿದ್ದಾರೆ.
ಬೈಕ್‌ ಅನ್ನು ಮ್ಯೂಸಿಯಂನಲ್ಲಿ ಇಡಬಹುದು

ಸದ್ಯಕ್ಕೆ, ಮೈಕೆಲ್ಸನ್ ಅವರ ಈ ವಾಹನವು ಕೆಲವು ಸ್ಥಳೀಯ ಕಾರ್ ಶೋಗಳಿಗೆ ಬಂದಿದೆ, ಅಲ್ಲಿ ಅದು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅವರು 9 ತಿಂಗಳ ಹಿಂದೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು, ಅವರ ಮಗ ಮೋಟಾರ್‌ಸೈಕಲ್ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದರು.
ಬಹುಶಃ, ಈ ವಿಶಿಷ್ಟ ಬೈಕು ಅಂತಿಮವಾಗಿ ಅವರ ವಸ್ತುಸಂಗ್ರಹಾಲಯಕ್ಕೆ ಹೋಗುತ್ತದೆ. ಮೈಕೆಲ್ಸನ್, ಬಾಹ್ಯಾಕಾಶ ಮತ್ತು ಚಲನಚಿತ್ರ ಸಾಹಸ ಉತ್ಸಾಹಿ, ಕಳೆದ ಕೆಲವು ವರ್ಷಗಳಲ್ಲಿ ಇಂತಹ ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ ಮತ್ತು ಅವರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮ; ಆರ್‌ಜೆಡಿ 26, ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಸ್ಪರ್ಧೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement