“ನೀವು ತಮಾಷೆ ಮಾಡುತ್ತಿದ್ದೀರಾ?” : ತನ್ನ ಲಂಡನ್ ವಿಳಾಸ ʼ10 ಡೌನಿಂಗ್ ಸ್ಟ್ರೀಟ್‌ʼ ಎಂಬುದನ್ನು ನಂಬಲು ವಲಸೆ ಅಧಿಕಾರಿ ನಿರಾಕರಿಸಿದ ಪ್ರಸಂಗ ನೆನಪಿಸಿಕೊಂಡ ಸುಧಾ ಮೂರ್ತಿ

ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡ ಲೇಖಕಿ ಮತ್ತು ಇನ್ಫೊಸಿಸ್‌ ಫೌಂಡೇಶನ್‌ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ’10 ಡೌನಿಂಗ್ ಸ್ಟ್ರೀಟ್’ ಎಂದು ಅಡ್ರೆಸ್‌ ಬರೆದಾಗ ವಲಸೆ ಅಧಿಕಾರಿಯೊಬ್ಬರು ಈ ವಿಳಾಸವನ್ನು ನಂಬಲು ನಿರಾಕರಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 10 ಡೌನಿಂಗ್ ಸ್ಟ್ರೀಟ್ ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿಯ ಅಧಿಕೃತ ನಿವಾಸ ಮತ್ತು ಕಚೇರಿಯಾಗಿದ್ದು, ಅಲ್ಲಿ ಅವರ … Continued

ವಿಶ್ವದ ಸೋಶಿಯಲ್‌ ಮೀಡಿಯಾ ರಾಜಧಾನಿಯಾಗಿ ಹೊರಹೊಮ್ಮಿದ ಯುಎಇ, ಫೇಸ್ಬುಕ್ ಬಳಕೆಯಲ್ಲಿ ನಂಬರ್ 1 : ಭಾರತದ ಸ್ಥಾನ ಎಷ್ಟು ಗೊತ್ತಾ..?

ನವದೆಹಲಿ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿಶ್ವದ ಸಾಮಾಜಿಕ ಜಾಲತಾಣದ ರಾಜಧಾನಿ ಎಂದು ಇತ್ತೀಚಿನ ಅಧ್ಯಯನವು ತೋರಿಸಿದೆ. ಬಹುತೇಕ ಎಲ್ಲಾ ನಿವಾಸಿಗಳು ಫೇಸ್‌ಬುಕ್‌ (Facebook) ಖಾತೆ ಹೊಂದಿರುವುದರಿಂದ ದೇಶವು ಪರಿಪೂರ್ಣ ಸ್ಕೋರ್ ಗಳಿಸಿದೆ. ಪ್ರಾಕ್ಸಿರಾಕ್ ಪ್ರಕಟಿಸಿದ ಅಧ್ಯಯನವು ದೇಶದಲ್ಲಿ ಬಳಸಲಾಗುವ ಸಾಮಾಜಿಕ ವೇದಿಕೆಗಳ ಸರಾಸರಿ ಸಂಖ್ಯೆ ಮತ್ತು ಫೇಸ್‌ಬುಕ್ ಬಳಸುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು … Continued

ಎಸ್ ಎಸ್ ಎಲ್‌ ಸಿ ಪೂರಕ ಪರೀಕ್ಷೆ ನೋಂದಣಿಗೆ ಕೊನೆಯ ದಿನಾಂಕ ವಿಸ್ತರಣೆ

posted in: ರಾಜ್ಯ | 0

ಬೆಂಗಳೂರು: ಜೂನ್‌ನಲ್ಲಿ ನಡೆಯಲಿರುವ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆಗೆ ನೋಂದಾಯಿಸಲು ಹಾಗೂ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಕೊನೆಯ ದಿನಾಂಕವನ್ನು ಮೇ 18ರ ವರೆಗೆ ವಿಸ್ತರಿಸಲಾಗಿದೆ. 2023ನೇ ಜೂನ್ ನಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲೆಗಳಿಂದ … Continued

‘ ಕಾಂಗ್ರೆಸ್‌ಗೆ ಬೆಂಬಲ ನೀಡಲು ತೃಣಮೂಲ ಸಿದ್ಧ, ಆದರೆ…’: ಕರ್ನಾಟಕ ಫಲಿತಾಂಶದ ನಂತರ ಮಮತಾ ಬ್ಯಾನರ್ಜಿ

ಕೋಲ್ಕತ್ತಾ : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷ ಬೆಂಬಲಿಸುವ ಸುಳಿವು ನೀಡಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ತನ್ನ ಬೆಂಬಲ ಬಯಸಿದರೆ ಅದು ಸಹ ಟಿಎಂಸಿಗೆ ಅದೇ ರೀತಿ ಬೆಂಬಲಿಸಬೇಕು … Continued

ದೆಹಲಿ ಪ್ರವಾಸ ರದ್ದುಗೊಳಿಸಿದ ಡಿ.ಕೆ.ಶಿವಕುಮಾರ: ಹೊಟ್ಟೆ ನೋವಿನ ಕಾರಣ ನೀಡಿದ ಕೆಪಿಸಿಸಿ ಅಧ್ಯಕ್ಷ..

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ ಸೋಮವಾರ ಸಂಜೆ ಹೈಕಮಾಂಡ್ ಜೊತೆಗಿನ ಮಾತುಕತೆಗಾಗಿ ನವದೆಹಲಿಗೆ ಹೋಗುವುದನ್ನು ರದ್ದುಗೊಳಿಸಿದ್ದಾರೆ. ಹೊಟ್ಟೆನೋವು ಇರುವುದರಿಂದ ದೆಹಲಿಗೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಇತರರ ಸಂಖ್ಯಾಬಲದ ಬಗ್ಗೆ ಮಾತನಾಡುವ ಶಕ್ತಿ ನನಗಿಲ್ಲ. ನನ್ನ ಬಲ 135 ಮತ್ತು ನಾನು ಪಕ್ಷದ ಅಧ್ಯಕ್ಷ. ನನ್ನ ಅಧ್ಯಕ್ಷತೆಯಲ್ಲಿ ಪಕ್ಷ 135 ಸ್ಥಾನಗಳನ್ನು ಗೆದ್ದಿದೆ … Continued

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ, ನಾವು ವಿದ್ಯುತ್‌ ಬಿಲ್‌ ಕಟ್ಟಲ್ರೀ… : ಬೆಸ್ಕಾಂ ಸಿಬ್ಬಂದಿ ಮುಂದೆ ಗ್ರಾಮಸ್ಥರ ಪಟ್ಟು | ವೀಕ್ಷಿಸಿ

posted in: ರಾಜ್ಯ | 0

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ಕೊಡುವುದಾಗಿ ಮಾಡಿದ್ದ ಘೋಷಣೆಯನ್ನು ಜನರು ಈಗಲೇ ಕಾರ್ಯರೂಪಕ್ಕೆ ತರಲು ಹೊರಟಿರುವ ವಿದ್ಯಾಮಾನವೊಂದು ನಡೆದ ವರದಿಯಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಬಂದ ಬೆನ್ನಲ್ಲೇ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಬೆಸ್ಕಾಂ ಮೀಟರ್‌ ರೀಡರ್‌ಗೆ ಗ್ರಾಮಸ್ಥರು ಹೇಳಿ ಬಿಲ್‌ ಕಟ್ಟಲು ನಿರಾಕರಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆಯಲ್ಲಿ ನಡೆದ … Continued

ಸಿಎಂ ಹುದ್ದೆಗೆ ಶಿವಕುಮಾರ ಬಿಗಿಪಟ್ಟು : ಆಯ್ಕೆಯೇ ಈಗ ಕಾಂಗ್ರೆಸ್ಸಿಗೆ ಕಗ್ಗಂಟು…!

posted in: ರಾಜ್ಯ | 0

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದರೂ ಕಾಂಗ್ರೆಸ್ಸಿಗೆ ಈಗ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ನಾಡುವುದೇ ಭಾರೀ ಸವಾಲಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಪಟ್ಟು ಹಿಡಿದಿದ್ದರಿಂದ ಹೈಕಮಾಂಡ್ ಅಡಕತ್ತರಿಯಲ್ಲಿ ಸಿಲುಕಿದೆ. ರೆ. ಮುಖ್ಯಮಂತ್ರಿ ಸ್ಥಾನ ತನಗೆ ನೀಡಲೇಬೇಕು ಎಂದು ಶಿವಕುಮಾರ ಪಟ್ಟು … Continued

ಉತ್ತರ ಪ್ರದೇಶ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್ಲ 17 ಮೇಯರ್ ಸ್ಥಾನಗಳನ್ನು ಗೆದ್ದ ಬಿಜೆಪಿ

ಲಕ್ನೋ: ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 1,420 ಪಾಲಿಕೆ ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಪಿ 813 ಸ್ಥಾನಗಳನ್ನು ಗೆದ್ದರೆ, ಪ್ರತಿಪಕ್ಷ ಸಮಾಜವಾದಿ ಪಕ್ಷ 191 ಮತ್ತು ಬಹುಜನ ಸಮಾಜ ಪಕ್ಷ 85 ಗೆದ್ದಿದೆ. ವಾರಾಣಸಿ, ಲಕ್ನೋ ಸೇರಿದಂತೆ ರಾಜ್ಯದಲ್ಲಿ ಅಯೋಧ್ಯೆ, ಝಾನ್ಸಿ, ಬರೇಲಿ, ಮಥುರಾ-ವೃಂದಾವನ, ಮೊರಾದಾಬಾದ್, ಸಹರಾನ್‌ಪುರ, ಪ್ರಯಾಗ್‌ರಾಜ್, ಅಲಿಗಢ, ಶಹಜಹಾನ್‌ಪುರ, ಗಾಜಿಯಾಬಾದ್, … Continued

ವೀಡಿಯೊ…: ಈಜುತ್ತಿರುವಾಗ ಹಿಪಪಾಟಮಸ್‌ ಬಾಯೊಳಗೆ ಹೋಗುತ್ತಿದ್ದ ಮೂವರು ಹುಡುಗರು, ಆದರೆ ಅದೃಷ್ಟ ರಕ್ಷಿಸಿದೆ

ಶಾರ್ಕುಗಳು, ಮೊಸಳೆ ಮತ್ತು ಇತರ ಕೆಲವು ಪ್ರಾಣಿಗಳು ಅಪಾಯಕಾರಿ ಎಂದು ಈಜಲು ಹೋಗುವವರಿಗೆ ತಿಳಿದಿರುತ್ತದೆ. ಅವರು ಪ್ರಧಾನವಾಗಿ ಈ ಪ್ರಾಣಿಗಳು ಕಂಡುಬರುವ ಪ್ರದೇಶಗಳಿಗೆ ಈಜಲು ಹೋಗುವುದಿಲ್ಲ. ಆದರೆ ಹಿಪಪಾಟಮಸ್‌ಗಳು ಉಂಟುಮಾಡುವ ಅಪಾಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅವುಗಳು ದೂರದಿಂದ ಮುದ್ದಾಗಿ ಮತ್ತು ಶಾಂತವಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಎದುರಾದ ಸಂದರ್ಭಗಳಲ್ಲಿ, ನಮ್ಮ ಜೀವಿತಾವಧಿಯನ್ನು ಸೆಕೆಂಡುಗಳಿಗೆ ಇಳಿಸಿಬಿಡುತ್ತವೆ.. ಟ್ವಿಟ್ಟರ್ … Continued

ಮಂಗಳೂರು : ಗೂಡ್ಸ್ ರೈಲಿನಡಿ ಸಿಲುಕಿ 17 ಎಮ್ಮೆಗಳು ಸಾವು

posted in: ರಾಜ್ಯ | 0

ಮಂಗಳೂರು : ಜೋಕಟ್ಟೆ ಅಂಗರಗುಂಡಿ ಬಳಿ ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ 12 ಗಂಟೆಯ ಸುಮಾರಿಗೆ ಸಂಭವಿಸಿದೆ. ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗೂಡ್ಸ್‌ ರೈಲು ಹೋಗುವ ಸಂದರ್ಭದಲ್ಲಿ ಹಾರ್ನ್‌ ಶಬ್ದ ಹಾಕಿದರೂ ಎಮ್ಮೆಗಳಿಗೆ ಕೇಳಿಸದ ಕಾರಣ ರೈಲು … Continued