ಉತ್ತರ ಪ್ರದೇಶ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್ಲ 17 ಮೇಯರ್ ಸ್ಥಾನಗಳನ್ನು ಗೆದ್ದ ಬಿಜೆಪಿ

ಲಕ್ನೋ: ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 1,420 ಪಾಲಿಕೆ ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಪಿ 813 ಸ್ಥಾನಗಳನ್ನು ಗೆದ್ದರೆ, ಪ್ರತಿಪಕ್ಷ ಸಮಾಜವಾದಿ ಪಕ್ಷ 191 ಮತ್ತು ಬಹುಜನ ಸಮಾಜ ಪಕ್ಷ 85 ಗೆದ್ದಿದೆ. ವಾರಾಣಸಿ, ಲಕ್ನೋ ಸೇರಿದಂತೆ ರಾಜ್ಯದಲ್ಲಿ ಅಯೋಧ್ಯೆ, ಝಾನ್ಸಿ, ಬರೇಲಿ, ಮಥುರಾ-ವೃಂದಾವನ, ಮೊರಾದಾಬಾದ್, ಸಹರಾನ್‌ಪುರ, ಪ್ರಯಾಗ್‌ರಾಜ್, ಅಲಿಗಢ, ಶಹಜಹಾನ್‌ಪುರ, ಗಾಜಿಯಾಬಾದ್, ಆಗ್ರಾ, ಕಾನ್ಪುರ್, ಗೋರಖ್‌ಪುರ, ಫಿರೋಜಾಬಾದ್ ಮತ್ತು ಮೀರತ್ ಸೇರಿದಂತೆ ಶನಿವಾರ ನಡೆದ ಎಲ್ಲ 17 ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ.
ರಾಜ್ಯ ಚುನಾವಣಾ ಆಯೋಗದ ಪ್ರಕಾರ, 191 ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿಗಳು ಕಾರ್ಪೊರೇಟರ್‌ಗಳಾಗಿ ಆಯ್ಕೆಯಾಗಿದ್ದಾರೆ, ನಂತರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 85, ಕಾಂಗ್ರೆಸ್ 77, ಎಐಎಂಐಎಂ 19, ರಾಷ್ಟ್ರೀಯ ಲೋಕದಳ 10, ಆಮ್ ಆದ್ಮಿ ಪಕ್ಷ ಎಂಟು, ಮತ್ತು ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) ಐವರು, ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಜನ ಅಧಿಕಾರ್ ಪಾರ್ಟಿ, ಪೀಸ್ ಪಾರ್ಟಿ, ಮತ್ತು ನಿಶಾದ್ ಪಕ್ಷ ತಲಾ ಒಂದರಲ್ಲಿ ಜಯಗಳಿಸಿವೆ.

199 ನಗರ ಪಾಲಿಕೆ ಪರಿಷತ್ ಅಧ್ಯಕ್ಷ ಸ್ಥಾನಗಳಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದರೆ, ಸ್ವತಂತ್ರ ಅಭ್ಯರ್ಥಿಗಳು 41 ಸ್ಥಾನಗಳನ್ನು ಗೆದ್ದಿದ್ದಾರೆ. ಸಮಾಜವಾದಿ ಪಕ್ಷ 35, ಬಿಎಸ್‌ಪಿ 16, ಆರ್‌ಎಲ್‌ಡಿ 7, ಕಾಂಗ್ರೆಸ್ 4 ಮತ್ತು ಎಎಪಿ ಮತ್ತು ಎಐಎಂಐಎಂ ತಲಾ ಮೂರು ಸ್ಥಾನಗಳನ್ನು ಗೆದ್ದಿವೆ. ಬಿಜೆಪಿ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೆಲಾಲ್) ಒಂದು ಸ್ಥಾನವನ್ನು ಗೆದ್ದಿದೆ.
ನಗರಪಾಲಿಕೆ ಪರಿಷತ್ ಸದಸ್ಯರ ಚುನಾವಣೆಯಲ್ಲಿ 5,327 ಸ್ಥಾನಗಳಲ್ಲಿ 3,130 (ಶೇ. 58.76) ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ 1,360 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ನಂತರದ ಸ್ಥಾನದಲ್ಲಿ ಎಸ್‌ಪಿ (425), ಬಿಎಸ್‌ಪಿ (191), ಕಾಂಗ್ರೆಸ್ (91), ಆರ್‌ಎಲ್‌ಡಿ (40), ಎಐಎಂಐಎಂ (33) ಮತ್ತು ಎಎಪಿ (30) ಸ್ಥಾನಗಳಲ್ಲಿ ಜಯಗಳಿಸಿದೆ. 544 ನಗರ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ ಬಿಜೆಪಿ 191 ಸ್ಥಾನಗಳನ್ನು ಗೆದ್ದುಕೊಂಡರೆ, ಸ್ವತಂತ್ರರು 195 ಸ್ಥಾನಗಳನ್ನು ಗೆದ್ದಿದ್ದಾರೆ. ಈ ಸ್ಥಾನಗಳಲ್ಲಿ ಎಸ್‌ಪಿ 78, ಬಿಎಸ್‌ಪಿ 37 ಮತ್ತು ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದಿದೆ.
ಸ್ವತಂತ್ರ ಅಭ್ಯರ್ಥಿಗಳು ನಗರ ಪಂಚಾಯತದ ಚುನಾವಣೆಯಲ್ಲಿ 7,177 ಸ್ಥಾನಗಳಲ್ಲಿ 4,824 ಸ್ವತಂತ್ರ ಅಭ್ಯರ್ಥಿಗಳು ಗೆದಿದ್ದಾರೆ. ಬಿಜೆಪಿ 1,403 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಎಸ್‌ಪಿ 485, ಬಿಎಸ್‌ಪಿ 215, ಕಾಂಗ್ರೆಸ್ 77 ಮತ್ತು ಆರ್‌ಎಲ್‌ಡಿ 38 ಸ್ಥಾನಗಳನ್ನು ಗಳಿಸಿವೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

ಶನಿವಾರದಂದು ಬಹುಪಾಲು ಫಲಿತಾಂಶಗಳನ್ನು ಪ್ರಕಟಿಸಿದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಜನರಿಗೆ ಧನ್ಯವಾದ ಅರ್ಪಿಸಿದರು ಮತ್ತು ರಾಜ್ಯದಲ್ಲಿ “ಟ್ರಿಪಲ್ ಇಂಜಿನ್ ಸರ್ಕಾರ” ರಚಿಸಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದರು.
ನಗರಪಾಲಿಕೆ ಪರಿಷತ್ತಿನ 198 ಅಧ್ಯಕ್ಷರು ಮತ್ತು 5,260 ಸದಸ್ಯರು, ನಗರ ಪಂಚಾಯತ್‌ಗಳ 542 ಅಧ್ಯಕ್ಷರು ಮತ್ತು ನಗರ ಪಂಚಾಯತ್‌ಗಳ 7,104 ಸದಸ್ಯರನ್ನು ಆಯ್ಕೆ ಮಾಡಲು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎರಡು ಹಂತದ ಮತದಾನ ನಡೆಯಿತು. ಒಟ್ಟು 14,522 ಸ್ಥಾನಗಳಿಗೆ 83,378 ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, 162 ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾದರು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೇ 11 ರಂದು ನಡೆದ ಎರಡನೇ ಹಂತದಲ್ಲಿ 38 ಜಿಲ್ಲೆಗಳಲ್ಲಿ ಶೇ 53 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, ಮೇ 4 ರಂದು 37 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಶೇ 52 ರಷ್ಟು ಮತದಾನವಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 4.32 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ವರದಿ ಮಾಡಿದೆ. 2017ರಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಶೇ.53ರಷ್ಟು ಜನ ಮತದಾನವಾಗಿತ್ತು.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement