ದೆಹಲಿ ಪ್ರವಾಸ ರದ್ದುಗೊಳಿಸಿದ ಡಿ.ಕೆ.ಶಿವಕುಮಾರ: ಹೊಟ್ಟೆ ನೋವಿನ ಕಾರಣ ನೀಡಿದ ಕೆಪಿಸಿಸಿ ಅಧ್ಯಕ್ಷ..

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ ಸೋಮವಾರ ಸಂಜೆ ಹೈಕಮಾಂಡ್ ಜೊತೆಗಿನ ಮಾತುಕತೆಗಾಗಿ ನವದೆಹಲಿಗೆ ಹೋಗುವುದನ್ನು ರದ್ದುಗೊಳಿಸಿದ್ದಾರೆ. ಹೊಟ್ಟೆನೋವು ಇರುವುದರಿಂದ ದೆಹಲಿಗೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ಇತರರ ಸಂಖ್ಯಾಬಲದ ಬಗ್ಗೆ ಮಾತನಾಡುವ ಶಕ್ತಿ ನನಗಿಲ್ಲ. ನನ್ನ ಬಲ 135 ಮತ್ತು ನಾನು ಪಕ್ಷದ ಅಧ್ಯಕ್ಷ. ನನ್ನ ಅಧ್ಯಕ್ಷತೆಯಲ್ಲಿ ಪಕ್ಷ 135 ಸ್ಥಾನಗಳನ್ನು ಗೆದ್ದಿದೆ ಎಂದು ಶಿವಕುಮಾರ ಸುದ್ದಿಗಾರರಿಗೆ ತಿಳಿಸಿದರು. “ನಾನು ಒಂಟಿ ವ್ಯಕ್ತಿ. ನನ್ನ ಬಳಿ ಸಂಖ್ಯೆ ಇಲ್ಲ. ವ್ಯಕ್ತಿಯನ್ನು ಪೂಜಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಪಕ್ಷವನ್ನು ಪೂಜಿಸುತ್ತೇನೆ” ಎಂದು ಶಿವಕುಮಾರ ಮಾರ್ಮಿಕವಾಗಿ ಹೇಳಿದ್ದಾರೆ.
ನವದೆಹಲಿಗೆ ಹೋಗುವುದಾಗಿ ಹೇಳಿದ ಶಿವಕುಮಾರ ನಂತರ ಹೊಟ್ಟೆನೋವು ಎಂದು ಹೇಳಿದ್ದಾರೆ. ” ಹೊಟ್ಟೆ ಉರಿಯುತ್ತಿದೆ. ಇನ್ಫೆಕ್ಷನ್ ಆಗಿದೆ. ಡಾಕ್ಟರ್ ಈಗ ಬರುತ್ತಿದ್ದಾರೆ. ದಯವಿಟ್ಟು ನನ್ನನ್ನು ಬಿಡಿ” ಎಂದು ಶಿವಕುಮಾರ ಹೇಳಿದರು.
ಸೋಮವಾರ ಶಿವಕುಮಾರ್ ತಮ್ಮ 61ನೇ ಜನ್ಮಿದಿನ ಆಚರಿಸಿಕೊಂಡರು. ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಇನ್ನೂ ಸಸ್ಪೆನ್ಸ್ ಮುಂದುವರಿದಿದೆ. ಇದಕ್ಕೂ ಮುನ್ನ ದೆಹಲಿಗೆ ಭೇಟಿ ನೀಡುವ ಬಗ್ಗೆ ಶಿವಕುಮಾರ್ ಅಸಡ್ಡೆ ತೋರಿದ್ದರು. “ಇಂದು ನನ್ನ ಜನ್ಮದಿನ. ನಾನು ಸ್ನೇಹಿತರನ್ನು ಭೇಟಿಯಾಗಬೇಕು, ಧಾರ್ಮಿಕ ಕ್ರಿಯೆಗಳನ್ನು ಮಾಡಬೇಕು” ಎಂದು ಅವರು ಹೇಳಿದರು.

ರಾಜ್ಯಾದ್ಯಂತದ ಮಠಾಧೀಶರ ಗುಂಪು ಡಿಕೆ ಸುರೇಶ (ಬೆಂಗಳೂರು ಗ್ರಾಮಾಂತರ ಸಂಸದ) ಅವರನ್ನು ಭೇಟಿ ಮಾಡಿತು. ಅವರ ಸಹೋದರ ಶಿವಕುಮಾರ ಅವರ ಮುಖ್ಯಮಂತ್ರಿ ಆಗುವುದಕ್ಕೆ ಬೆಂಬಲ ನೀಡಿತು.
ಈ ಮಧ್ಯೆ ಸಿದ್ದರಾಮಯ್ಯ ಅವರು ಪ್ರಸ್ತಾವನೆಯೊಂದನ್ನು ಮಂಡಿಸಿದ್ದಾರೆ ಎಂದು ಕೆಲಮಾಧ್ಯಮಗಳು ವರದಿ ಮಾಡಿದ್ದು, ತಾನು ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗುವುದು ಮತ್ತು ಉಳಿದ ಮೂರು ವರ್ಷಗಳ ಕಾಲ ಡಿಕೆ ಶಿವಕುಮಾರ ಅವರು ಸರ್ಕಾರವನ್ನು ನಡೆಸಬಹುದು ಎಂದು ಪ್ರಸ್ತಾವನೆ ಸಿದ್ದರಾಮಯ್ಯ ಮಂಡಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ತನಗೆ ವಯಸ್ಸಾಗಿರುವುದರಿಂದ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ವರೆಗೆ ಕಾಂಗ್ರೆಸ್ ಸರ್ಕಾರದ ಮೊದಲಾರ್ಧದಲ್ಲಿ ಮುಖ್ಯಮಂತ್ರಿಯಾಗಲು ಬಯಸುತ್ತೇನೆ ಎಂದು ಹೇಳಿದರು ಎನ್ನಲಾಗಿದೆ. ಆದರೆ, ಡಿಕೆ ಶಿವಕುಮಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದ್ದು, ಅವರು ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿನ ಕಾಂಗ್ರೆಸ್‌ ಸರ್ಕಾರವನ್ನು ಉಲ್ಲೇಖಿಸಿದ್ದಾರೆ ಎಂದು ನಂಬಲಾಗಿದೆ.
ಕರ್ನಾಟಕವನ್ನು ಗೆಲ್ಲಿಸುವ ಕುರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ ಎಂದು ಶಿವಕುಮಾರ ಹೇಳಿದ್ದಾರೆ. ದೆಹಲಿಗೆ ತೆರಳುವ ಮುನ್ನ ಸಿದ್ದರಾಮಯ್ಯ ತಮ್ಮ ನಿಷ್ಠಾವಂತ ಶಾಸಕರೊಂದಿಗೆ ಮಾತುಕತೆ ನಡೆಸಿದರು. ಅವರಲ್ಲಿ ಕೆಲವರು ಅವರೊಂದಿಗೆ ದೆಹಲಿಗೆ ಕೂಡ ಬಂದರು.
ಸಿದ್ದರಾಮಯ್ಯ ಒಲವು ಹೊಂದಿರುವ ಕೆಲವು ಶಾಸಕರು ತಮ್ಮ ನಿಲುವನ್ನು ಬಹಿರಂಗವಾಗಿಯೇ ಪ್ರಕಟಿಸಿದ್ದಾರೆ. ಬಸವರಾಜ ರಾಯರೆಡ್ಡಿ (ಯಲಬುರ್ಗಾ) ಮತ್ತು ಕೆ.ಎನ್.ರಾಜಣ್ಣ (ಮಧುಗಿರಿ) ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದನ್ನು ಬಯಸುವುದಾಗಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಇತರರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ, ನಾನು ಒಬ್ಬಂಟಿಯಾಗಿದ್ದೇನೆ, ನಾನು ಧೈರ್ಯದಿಂದ ಪಕ್ಷವನ್ನು ಮುನ್ನಡೆಸಿದ್ದೇನೆ, ನಾನು ಸಾಮರ್ಥ್ಯದಿಂದ ನನ್ನನ್ನು ಸಾಬೀತುಪಡಿಸಿದ್ದೇನೆ. ನಮ್ಮ ಶಾಸಕರು ನಮ್ಮನ್ನು ತೊರೆದಾಗ (2019 ರ ಪಕ್ಷಾಂತರದ ಸಮಯದಲ್ಲಿ) ನಾನು ಎದೆಗುಂದಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ನನಗೆ ಶಕ್ತಿ ನೀಡಿದ್ದಾರೆ, ಮುಖ್ಯಮಂತ್ರಿ ಆಯ್ಕೆಯನ್ನು ಈಗ ಅವರಿಗೇ ಬಿಡುತ್ತೇನೆ ಎಂದು ಶಿವಕುಮಾರ ಹೇಳಿದ್ದಾರೆ.
ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ನೀಡುವ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು. ಏತನ್ಮಧ್ಯೆ, ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲು ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಪಕ್ಷದ ವೀಕ್ಷಕರು ಇಂದು ರಾತ್ರಿಯೊಳಗೆ ಅದರ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಲಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 224 ಸ್ಥಾನಗಳಲ್ಲಿ 135 ಸ್ಥಾನಗಳನ್ನು ಗೆದ್ದು ಅಮೋಘ ಜಯ ಸಾಧಿಸಿದೆ. ಬಿಜೆಪಿ 66 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಜೆಡಿಎಸ್ 19 ಸ್ಥಾನಗಳನ್ನು ಗಳಿಸಿತು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement