ವೀಡಿಯೊ…: ಈಜುತ್ತಿರುವಾಗ ಹಿಪಪಾಟಮಸ್‌ ಬಾಯೊಳಗೆ ಹೋಗುತ್ತಿದ್ದ ಮೂವರು ಹುಡುಗರು, ಆದರೆ ಅದೃಷ್ಟ ರಕ್ಷಿಸಿದೆ

ಶಾರ್ಕುಗಳು, ಮೊಸಳೆ ಮತ್ತು ಇತರ ಕೆಲವು ಪ್ರಾಣಿಗಳು ಅಪಾಯಕಾರಿ ಎಂದು ಈಜಲು ಹೋಗುವವರಿಗೆ ತಿಳಿದಿರುತ್ತದೆ. ಅವರು ಪ್ರಧಾನವಾಗಿ ಈ ಪ್ರಾಣಿಗಳು ಕಂಡುಬರುವ ಪ್ರದೇಶಗಳಿಗೆ ಈಜಲು ಹೋಗುವುದಿಲ್ಲ. ಆದರೆ ಹಿಪಪಾಟಮಸ್‌ಗಳು ಉಂಟುಮಾಡುವ ಅಪಾಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅವುಗಳು ದೂರದಿಂದ ಮುದ್ದಾಗಿ ಮತ್ತು ಶಾಂತವಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಎದುರಾದ ಸಂದರ್ಭಗಳಲ್ಲಿ, ನಮ್ಮ ಜೀವಿತಾವಧಿಯನ್ನು ಸೆಕೆಂಡುಗಳಿಗೆ ಇಳಿಸಿಬಿಡುತ್ತವೆ.. ಟ್ವಿಟ್ಟರ್ ನಲ್ಲಿ ಮರುಕಳಿಸುವ ಹಳೆಯ ವೀಡಿಯೊ ಈ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ.
ವೀಡಿಯೊ ಮೂರು ಹುಡುಗರು ಸಣ್ಣ ಕೊಳದಲ್ಲಿ ಮೋಜು ಮಾಡುತ್ತಿರುವುದನ್ನು ತೋರಿಸುತ್ತದೆ ಮತ್ತು ಇದ್ದಕ್ಕಿದ್ದಂತೆ ಹಿಪ್ಪೋ ಕಾಣಿಸಿಕೊಳ್ಳುತ್ತದೆ.
ಆಫ್ರಿಕಾದಲ್ಲಿ ಚಿತ್ರೀಕರಿಸಲಾದ ಈ ಕ್ಲಿಪ್, ಹುಡುಗರು ಈಜುತ್ತಿರುವ ಸ್ಥಳದಿಂದ ಕೆಲವೇ ಅಡಿಗಳಷ್ಟು ದೂರದಲ್ಲಿ ಬೃಹತ್ ಪ್ರಾಣಿಯು ನೀರಿನಿಂದ ಹೊರಬರುವುದನ್ನು ತೋರಿಸುತ್ತದೆ. ಹಿಪಪಾಟಮಸ್‌’ ಸಮೀಪ ಬಂದು ಶಬ್ದ ಮಾಡಿದ ನಂತರ, ಈಜುತ್ತಿದ್ದ ಮಕ್ಕಳು ಕಿರುಚುತ್ತಾ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಾರೆ.ಕೊನೆಗೆ ಜರ್ಕಿ ಫೂಟೇಜ್‌ನಲ್ಲಿ ನೋಡಿದಂತೆ ರೆಕಾರ್ಡಿಂಗ್ ಮಾಡುತ್ತಿದ್ದ ವ್ಯಕ್ತಿಯೂ ಓಡಿಹೋಗುತ್ತಾನೆ.

ಕ್ಲಿಪ್ ಮೂಲತಃ 2021ರದ್ದು, ಮತ್ತು ಸ್ಯಾನ್‌ವೈಲ್ಡ್ ಅಭಯಾರಣ್ಯದಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಜೊತೆಯಲ್ಲಿರುವ ವಿವರಣೆಯು “ಅದೃಷ್ಟವಶಾತ್ ಹಿಪ್ಪೋ ಮತ್ತು ಹುಡುಗರು ಹೆದರಿ ಪರಸ್ಪರ ವಿರುದ್ಧ ದಿಕ್ಕುಗಳಿಗೆ ಓಡಿಹೋದರು” ಎಂದು ಹೇಳುತ್ತದೆ.
ಹಿಪ್ಪೋಗಳು ಎಷ್ಟು ಶಕ್ತಿಯುತ ಮತ್ತು ಅನಿರೀಕ್ಷಿತವಾಗಿರಬಹುದು ಎಂಬುದಕ್ಕೆ ವೀಡಿಯೊ ಭಯಾನಕ ಜ್ಞಾಪನೆಯಾಗಿದೆ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

https://twitter.com/TerrifyingNatur/status/1657641639664398337?ref_src=twsrc%5Etfw%7Ctwcamp%5Etweetembed%7Ctwterm%5E1657641639664398337%7Ctwgr%5Ec0c07f721d33f6f239d90a627291397c92063b60%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fold-video-shows-3-boys-almost-getting-swallowed-by-a-hippo-while-swimming-4035253

ಅವುಗಳನ್ನು ಆಫ್ರಿಕಾದ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ದಿ ಟೆಲಿಗ್ರಾಫ್ ಪ್ರಕಾರ, ಉಗಾಂಡಾದಲ್ಲಿ ಅಂಬೆಗಾಲಿಡುವ ಮಗುವೊಂದನ್ನು ಹಿಪಪಾಟಮಸ್ ನುಂಗಿದ ನಂತರ ಬದುಕುಳಿದಿದೆ. ಯಾಕೆಂದರೆ ನಂತರ ಅದು ಮುಗುವನ್ನು ನಂತರ ಉಗುಳಿದೆ.
ಎರಡು ವರ್ಷದ ಮಗು ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಬೃಹತ್ ಪ್ರಾಣಿಯು ಇದ್ದಕ್ಕಿದ್ದಂತೆ ಮಗುವನ್ನು ತನ್ನ ದವಡೆಯಲ್ಲಿ ಹಿಡಿದು ನುಂಗುವ ಪ್ರಕ್ರಿಯೆಯಲ್ಲಿದ್ದಾಗ ಅದನ್ನು ಕಂಡ ವ್ಯಕ್ತಿಯೊಬ್ಬರು ಪ್ರಾಣಿಯ ಮೇಲೆ ಕಲ್ಲು ತೂರಾಟ ಆರಂಭಿಸಿದ ನಂತರ
ಹಿಪ್ಪೋ ಮಗುವನ್ನು ಉಗುಳಿತು ಮತ್ತು ಹತ್ತಿರದ ಸರೋವರದ ಕಡೆಗೆ ಓಡಿತು.
ಹಿಪ್ಪೋಗಳು 1,800 PSIಗಳಷ್ಟು ಕಚ್ಚುವ ಬಲವನ್ನು ಹೊಂದಿವೆ, ಅವುಗಳು ಕಚ್ಚುವುದು ಮಾನವ ದೇಹವನ್ನು ಅರ್ಧ ಭಾಗವನ್ನಾಗಿ ಮಾಡುವಷ್ಟು ಶಕ್ತಿಶಾಲಿಯಾಗಿರುತ್ತವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement