ದೇವಸ್ಥಾನದಿಂದ ಕದ್ದ ಎಲ್ಲ ಆಭರಣಗಳನ್ನು 9 ವರ್ಷಗಳ ಬಳಿಕ ಹಿಂದಿರುಗಿಸಿದ ಕಳ್ಳ…ಕ್ಷಮೆಯಾಚನೆ ಪತ್ರದ ಜೊತೆಗೆ ಪ್ರಾಯಶ್ಚಿತಕ್ಕೆ ದಂಡದ ಹಣವನ್ನೂ ಇಟ್ಟುಹೋದ..!

ಭುವನೇಶ್ವರ : ದೇವಸ್ಥಾನದಿಂದ ಕಳ್ಳತನ ಮಾಡಿದ್ದ ಆಭರಣಗಳನ್ನು ಅನಾಮಧೇಯ ಕಳ್ಳನೊಬ್ಬ 9 ವರ್ಷಗಳ ಬಳಿಕ ಅದನ್ನು ಹಿಂತಿರುಗಿಸಿದ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ರಾಜಧಾನಿ ಭುವನೇಶ್ವರದ ಧೌಲಿ ಪ್ರದೇಶದಲ್ಲಿರುವ ಗೋಪಿನಾಥಪುರದ ಗೋಪಿನಾಥ ದೇವಸ್ಥಾನದಿಂದ 2014ರ ಮೇ ತಿಂಗಳಿನಲ್ಲಿ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಕಿವಿಯೋಲೆ, ಬಳೆಗಳು, ಕೊಳಲು ಮತ್ತು ತಲೆಯ ಕವಚ ಸೇರಿದಂತೆ ಒಟ್ಟು ₹4 … Continued

ಸಿಎಂ ಹುದ್ದೆಗೆ ಸಿದ್ದರಾಮಯ್ಯ- ಶಿವಕುಮಾರ ಪೈಪೋಟಿ ನಡುವೆ ತಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟ ವೀರಶೈವ ಮಹಾಸಭಾ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ‘ಡಿಕೆ ಶಿವಕುಮಾರ ಅಥವಾ ಸಿದ್ದರಾಮಯ್ಯ’ ಎಂಬ ಗೊಂದಲದಲ್ಲಿ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ಸಿನಲ್ಲಿ ಈಗ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಮತ್ತೊಂದು ಲಾಬಿ ಶುರುವಾಗಿದೆ. ಪ್ರಭಾವಿ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಅಖಿಲ ಭಾರತ ವೀರಶೈವ ಮಹಾಸಭಾ ಉನ್ನತ ಹುದ್ದೆಗೆ ಬಿಡ್ ಮಾಡಿದೆ, ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರಲ್ಲಿ 34 ಲಿಂಗಾಯತ ಶಾಸಕರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. … Continued

ಕಾಂಗ್ರೆಸ್ಸಿನಲ್ಲಿ ಮುಗಿಯದ ಸಿಎಂ ಆಯ್ಕೆ ಕಗ್ಗಂಟು : ನಾಳೆ ಬೆಳಿಗ್ಗೆ ಹೈಕಮಾಂಡ್ ಮತ್ತೊಂದು ಸಭೆ, ನಂತರ ಸಿಎಂ ಹೆಸರು ಘೋಷಣೆ ಸಾಧ್ಯತೆ

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಮುಂದಿನ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ದೆಹಲಿಯಲ್ಲಿ ನಿನ್ನೆಯಿಂದ ಸಾಲು ಸಾಲು ಸಭೆಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಇನ್ನೂ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ನಾಳೆ, ಬುಧವಾರ ದೆಹಲಿಯಲ್ಲಿ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಂತಿಮ ಸಭೆ ನಡೆಯಲಿದ್ದು, ಬಳಿಕ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಆಯ್ಕೆ … Continued

ಬೆಚ್ಚಿಬೀಳಿಸುವ ವೀಡಿಯೊ : ಮೀನುಗಾರನ ಮೇಲೆ ಹಠಾತ್‌ ದಾಳಿ, ದೋಣಿ ಕಚ್ಚಿ ತುಂಡರಿಸಿದ ದೈತ್ಯ ಟೈಗರ್‌ ಶಾರ್ಕ್‌ | ವೀಕ್ಷಿಸಿ

ಟೈಗರ್‌ ಶಾರ್ಕ್ ದಾಳಿಯು ವ್ಯಕ್ತಿಯ ಸಮುದ್ರದ ಕಯಾಕಿಂಗ್ ವಿಹಾರವನ್ನು ಭಯಾನಕವಾಗಿ ಪರಿವರ್ತಿಸಿತು. ನಾವಿಕ ತನ್ನ ಅನುಭವದ ಆಧಾರದ ಮೇಲೆ ತ್ವರಿತವಾಗಿ ಕಾರ್ಯನಿರ್ವಹಿಸಿದ ನಂತರ ಮತ್ತು ವಿವೇಕಯುತ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಕೂದಲೆಳೆಯ ಅಂತರದಲ್ಲಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾರೆ; ಇಲ್ಲದಿದ್ದರೆ, ಟೈಗರ್‌ ಶಾರ್ಕ್‌ ಮಾರಣಾಂತಿಕವಾಗಿ ಪರಿಣಮಿಸುತ್ತಿತ್ತು. ಈ ಭಯಾನಕ ಘಟನೆಯ ತುಣುಕನ್ನು ಅವರು ತಮ್ಮ ಯೂಟ್ಯೂಬ್ ಪುಟಕ್ಕೆ … Continued

ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ 7 ಮಂದಿ ಸಾವು

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಮಂಗಳವಾರ ಅನಧಿಕೃತ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ವ ಮಿಡ್ನಾಪುರದ ಎಗ್ರಾದಲ್ಲಿರುವ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ನಂತರ ಸ್ಥಳದಲ್ಲಿ ಬೂದು ಹೊಗೆ ಕಾಣಿಸಿಕೊಂಡಿದೆ. ಸ್ಫೋಟದಿಂದ ಗಾಯಗೊಂಡವರಿಗೆ ಸಹಾಯ ಮಾಡಲು ಸ್ಥಳೀಯರು ಧಾವಿಸಿದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ … Continued

ಈ ವರ್ಷ ಮಾನ್ಸೂನ್‌ ಮಳೆ ಸ್ವಲ್ಪ ವಿಳಂಬವಾಗುವ ಸಾಧ್ಯತೆ : ಐಎಂಡಿ

ನವದೆಹಲಿ: ನೈಋತ್ಯ ಮಾನ್ಸೂನ್ ತನ್ನ ಸಾಮಾನ್ಯ ಸಮಯಕ್ಕಿಂತ ಮೂರು ದಿನ ವಿಳಂಬವಾಗಿ ಜೂನ್ 4 ರಂದು ಕೇರಳಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ತಿಳಿಸಿದೆ. ಸಾಮಾನ್ಯವಾಗಿ ನೈಋತ್ವ ಮಾನ್ಸೂನ್‌ ಜೂನ್‌ 1ರಂದು ಕೇರಳಕ್ಕೆ ಆಗಮಿಸುತ್ತದೆ. 2022 ರಲ್ಲಿ, ಮುಂಗಾರು ನಿಗದಿತ ಸಮಯಕ್ಕಿಂತ ಮೂರು ದಿನಗಳ ಮುಂಚಿತವಾಗಿ ಕೇರಳಕ್ಕೆ ಆಗಮಿಸಿತು. ಪತ್ರಿಕಾ … Continued

ಭಾರತದ ಹೊಸ ಸಂಸತ್ ಭವನವನ್ನು ಪ್ರಧಾನಿ ಮೋದಿ ಈ ತಿಂಗಳೇ ಉದ್ಘಾಟಿಸುವ ಸಾಧ್ಯತೆ

ನವದೆಹಲಿ: ಭಾರತದ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಕೊನೆಯಲ್ಲಿ ಉದ್ಘಾಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಸಂಸತ್ತಿನ ಹೊಸ ಕಟ್ಟಡವು ಅಂತಿಮ ಹಂತದಲ್ಲಿದೆ, ಪ್ರಧಾನಿಯವರು ಮೇ ಕೊನೆಯ ವಾರದಲ್ಲಿ ತಮ್ಮ ಸರ್ಕಾರದ ಒಂಬತ್ತು ವರ್ಷಗಳ ಪೂರ್ಣಗೊಳ್ಳುವ ಸಂದರ್ಭದಲ್ಲಿ ಉದ್ಘಾಟಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು … Continued

7ನೇ ವೇತನ ಆಯೋಗದ ವರದಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ರಚಿಸಲಾಗಿದ್ದ 7ನೇ ವೇತನ ಆಯೋಗದ ವರದಿ ಸಲ್ಲಿಕೆ ಅವಧಿಯನ್ನು 6 ತಿಂಗಳ ಕಾಲ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ. ರಾಜ್ಯಸರ್ಕಾರ 2022ರ ನವೆಂಬರ್‌ 19 ರಂದು ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗವನ್ನು ರಚಿಸಿ, 6 ತಿಂಗಳೊಳಗೆ ವರದಿ ನೀಡುವಂತೆ … Continued

ವರಸೆ ಬದಲಿಸಿತೇ ಕಾಂಗ್ರೆಸ್‌…? : ಐದು ಚುನಾವಣಾ ಗ್ಯಾರಂಟಿಗಳ ಜಾರಿಗೆ ಷರತ್ತುಗಳು ಇರುತ್ತವೆ ಎಂದ ಡಾ.ಜಿ ಪರಮೇಶ್ವರ…!

ಬೆಂಗಳೂರು:ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣಗಳಾಗಿದ್ದ ಐದು ಗ್ಯಾರಂಟಿ ಘೋಷಣೆಗಳು ದೊಡ್ಡ ಸದ್ದು ಮಾಡಿತ್ತು. ಆದರೆ ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿಗಳ ಜಾರಿಗೆ ಕೆಲವೊಂದು ಷರತ್ತುಗಳು ಅನ್ವಯವಾಗಲಿದೆ ಎಂದು ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ  ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೊದಲ ಕ್ಯಾಬಿನೆಟ್ … Continued

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಕಾಂಗ್ರೆಸ್ ಹಿರಿಯ ನಾಯಕ ರಮಾನಾಥ ರೈ

ಮಂಗಳೂರು : ಚುನಾವಣಾ ರಾಜಕೀಯದಿಂದ ನಿವೃತ್ತಗೊಳ್ಳುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ ರಮಾನಾಥ ರೈ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಂಗಳೂರು ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಇಂದು, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದ್ದಾರೆ. … Continued