ಅದಾನಿ ಕುರಿತ ಹಿಂಡೆನ್‌ಬರ್ಗ್‌ ವರದಿ: ಆಗಸ್ಟ್ 14ರೊಳಗೆ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಸೆಬಿಗೆ ಸುಪ್ರೀಂ ಕೋರ್ಟ್‌ ಸೂಚನೆ

ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಿಂಡೆನ್‌ ಬರ್ಗ್‌ ವರದಿಯ ಸುತ್ತಲಿನ ವಿವಾದ ಮತ್ತು ಆ ಸಂಸ್ಥೆಯ ವಿರುದ್ಧದ ಆರೋಪಗಳ ಕುರಿತು ನಡೆಸಿರುವ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ)ಗೆ ಸುಪ್ರೀಂ ಕೋರ್ಟ್‌ ಆಗಸ್ಟ್ 14ರ ವರೆಗೆ ಕಾಲಾವಕಾಶ ನೀಡಿದೆ.
ಅದಾನಿ ಸಮೂಹದ ವ್ಯವಹಾರಗಳ ತನಿಖೆ ಹೆಚ್ಚು ಸಂಕೀರ್ಣಮಯವಾಗಿದ್ದು ತನಿಖೆ ಮಾಡಲು ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಸೆಬಿ ಕೋರಿತ್ತು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಈ ಆದೇಶ ನೀಡಿತು.
ನಿಮಗೆ ಸೆಪ್ಟೆಂಬರ್‌ 30ರ ವರೆಗೆ ಸಮಯಾವಕಾಶ ನೀಡಬಹುದಿತ್ತು. ಆದರೆ ಆಗಸ್ಟ್ 14ರಂದು ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ನಮಗೆ ತಿಳಿಸಿ.. ತನಿಖೆಯ ಸ್ಥಿತಿಯ ಬಗ್ಗೆ ನಮಗೆ ಪರಿಷ್ಕೃತ ವರದಿ ನೀಡಿ” ಎಂದು ಸಿಜೆಐ ಹೇಳಿದರು.
ತಜ್ಞರ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿರುವುದನ್ನು ನ್ಯಾಯಾಲಯವು ದಾಖಲಿಸಿಕೊಂಡಿತು. ನ್ಯಾಯಾಲಯದ ವಿಶ್ಲೇಷಣೆಗೆ ಅನುವು ಮಾಡುವ ಸಲುವಾಗಿ ಪ್ರಕರಣವನ್ನು ಬೇಸಿಗೆ ರಜೆ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, 2016 ರಿಂದ ಅದಾನಿ ಗ್ರೂಪ್‌ನ ಯಾವುದೇ ಕಂಪನಿಗಳನ್ನು ತಾನು ಮೊದಲು ವಾದಿಸಿದಂತೆ ತನಿಖೆ ನಡೆಸುತ್ತಿಲ್ಲ ಎಂದು ಸೆಬಿ ಅಫಿಡವಿಟ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿತ್ತು.
ಇಂದಿನ ವಿಚಾರಣೆ ವೇಳೆ ವಕೀಲ ಪ್ರಶಾಂತ ಭೂಷಣ ಅವರು ವಾದ ಮಂಡಿಸಿ, ಇದು ಕಂಪನಿಯನ್ನು ರಕ್ಷಿಸುವ ಸ್ಪಷ್ಟ ಪ್ರಯತ್ನವಾಗಿದೆ ಎಂದರು. “2016 ರಿಂದ ನಡೆಸಲಾಗುತ್ತಿರುವ ತನಿಖೆಗೆ ಏನಾಯಿತು ಎಂದು ಅವರು ದಾಖಲೆಯಲ್ಲಿ ಹೇಳಬೇಕು. ಅದಾನಿ ಷೇರುಗಳು ಅಸಹಜವಾಗಿ 5,000% ರಷ್ಟು ಹೆಚ್ಚಾದರೆ ಎಚ್ಚರಿಕೆ ನೀಡಬೇಕಾಗಿತ್ತು. 2021 ರಲ್ಲಿ ಸಂಸತ್ತಿನಲ್ಲಿ ಹೇಳಿಕೆಗಳಿವೆ ಎಂದು ಅವರು ವಾದಿಸಿದರು.
ಈ ಆಪಾದನೆಗಳಿಗೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೆಬಿಗೆ ತನಿಖೆಗೆ ಅಗತ್ಯವಾದ ಸಂಪನ್ಮೂಲವಿದ್ದು ಸಮಸ್ಯೆಯನ್ನು ನಿಭಾಯಿಸಲಿದೆ ಎಂದರು.
ಮಾರ್ಚ್ 2 ರಂದು ನೀಡಿದ ಆದೇಶದಲ್ಲಿ, ಸುಪ್ರೀಂ ಕೋರ್ಟ್ ತನ್ನ ತನಿಖೆಯನ್ನು ಮುಂದುವರಿಸಲು ಸೆಬಿಗೆ ಅನುಮತಿ ನೀಡಿತ್ತು. ಮೇ 2ಕ್ಕೆ ತನಿಖೆ ಪೂರ್ಣಗೊಳ್ಳಬೇಕಿತ್ತು. ಈ ತನಿಖೆಯು ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಎಎಂ ಸಪ್ರೆ ನೇತೃತ್ವದ ತಜ್ಞರ ಸಮಿತಿಯಿಂದ ನಡೆಯುತ್ತಿರುವ ತನಿಖೆಗೆ ಹೆಚ್ಚುವರಿಯಾಗಿದೆ. ತಜ್ಞರ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದಾಗ ಸೆಬಿ ಸಮಯ ವಿಸ್ತರಣೆಯನ್ನು ಕೋರಿತು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

 

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement