ಭಯೋತ್ಪಾದಕರೊಂದಿಗೆ ನಂಟು: 6 ರಾಜ್ಯಗಳ 122 ಸ್ಥಳಗಳಲ್ಲಿ ಎನ್‌ಐಎ ದಾಳಿ

ನವದೆಹಲಿ: ಪಾಕಿಸ್ತಾನ ಮತ್ತು ಕೆನಡಾ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಗ್ಯಾಂಗ್‌ಸ್ಟರ್‌ಗಳು , ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕ ಗುಂಪುಗಳ ನಡುವಿನ ನಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯಗಳ 122ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶೋಧ ಕಾರ್ಯವನ್ನು ತೀವ್ರಗೊಳಿಸಿದೆ. ಈವರೆಗೆ ಲಭ್ಯವಿರುವ … Continued

ಲೇಡಿ ಸಿಂಘಂ ಖ್ಯಾತಿಯ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಸಾವು : ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬ

ಅಸ್ಸಾಂನಲ್ಲಿ ‘ಲೇಡಿ ಸಿಂಘಂ’ ಎಂದೇ ಹೆಸರು ಗಳಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಾಗೂನ್‌ ನಗರದ ಸಮೀಪ ರಾಜ್ಯ ಹೆದ್ದಾರಿಯಲ್ಲಿ 30 ವರ್ಷ ವಯಸ್ಸಿನ ಜುನ್ಮೋನಿ ರಾಭಾ ಅವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಜುನ್ಮೋನಿ ರಾಭಾ ಅವರು ಒಬ್ಬರೇ … Continued

ಕರ್ನಾಟಕದಲ್ಲಿ ನೂತನವಾಗಿ ಆಯ್ಕೆಯಾದ ಶೇ.55ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ : 97% ಕೋಟ್ಯಾಧಿಪತಿಗಳು

ಬೆಂಗಳೂರು : ಕರ್ನಾಟಕ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪ್ರಕಾರ, ಕರ್ನಾಟಕದ ಹೊಸದಾಗಿ ಚುನಾಯಿತರಾದ ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ವಿಶ್ಲೇಷಿಸಿದ 223ರಲ್ಲಿ 122 ಅಭ್ಯರ್ಥಿಗಳು ಅಂದರೆ 55%ರಷ್ಟು ಕ್ರಿಮಿನಲ್ ಮೊಕದ್ದಮೆ ಇರುವ ಅಭ್ಯರ್ಥಿಗಳು ಈಗ ಚುನಾಯಿತರಾಗಿದ್ದಾರೆ. ಸುಮಾರು 32% ವಿಜೇತ ಅಭ್ಯರ್ಥಿಗಳು … Continued

ಪೊಲೀಸರು ಬಂಧಿಸುವುದನ್ನು ತಪ್ಪಿಸಿಕೊಳ್ಳಲು ನ್ಯಾಯಾಲಯದೊಳಕ್ಕೆ ಓಡಿಹೋದ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ | ವೀಕ್ಷಿಸಿ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಮಾಹಿತಿ ಖಾತೆ ಸಚಿವ ಫವಾದ್ ಚೌಧರಿ ಅವರು ಮರು ಬಂಧನದಿಂದ ತಪ್ಪಿಸಿಕೊಳ್ಳಲು ಮಂಗಳವಾರ ಕಾರಿನಿಂದ ಇಳಿದು ಹೈಕೋರ್ಟ್ ಕಟ್ಟಡದೊಳಕ್ಕೆ ಅಕ್ಷರಶಃ ಓಡಿ ಹೋಗಿದ್ದಾರೆ. ಕಳೆದ ವಾರ ಇಮ್ರಾನ್ ಖಾನ್ ಅವರ ಬಂಧನದ ನಂತರ ಅವರ ಪಕ್ಷದ ಬೆಂಬಲಿಗರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್‌ ಪಕ್ಷದ ಫವಾದ್ ಚೌಧರಿ ಅವರನ್ನು … Continued

ಉತ್ತರ ಪ್ರದೇಶ ನ್ಯಾಯಾಲಯದಲ್ಲಿ ಗುಂಡಿನ ಚಕಮಕಿ: ಇಬ್ಬರು ಕೊಲೆ ಆರೋಪಿಗಳ ಮೇಲೆ ಗುಂಡು ಹಾರಿಸಿದ ಇಬ್ಬರು

ಜೌನ್ಪುರ : : ಮಂಗಳವಾರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದ ಇಬ್ಬರು ಕೊಲೆ ಆರೋಪಿಗಳ ಮೇಲೆ ಇಬ್ಬರು ವ್ಯಕ್ತಿಗಳು ಮನಬಂದಂತೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಜೌನ್‌ಪುರ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. 2022ರ  ಮೇ 6 ರಂದು ಧರ್ಮಪುರದಲ್ಲಿ ಕುಸ್ತಿಪಟು ಬಾದಲ್ ಯಾದವ್ ಅವರನ್ನು ಕೊಂದ ಇಬ್ಬರು ಆರೋಪಿಗಳಾದ ಸೂರ್ಯ ಪ್ರಕಾಶ್ ಮತ್ತು ಮಿಥಿಲೇಶ್ … Continued

ʼಚುನಾವಣಾ ರಾಜಕೀಯ’ಕ್ಕೆ ನಿವೃತ್ತಿ ಘೋಷಿಸಿದ ವೈಎಸ್‌ವಿ ದತ್ತ : ಕಡೂರಿನಲ್ಲಿ ಪಶ್ಚಾತ್ತಾಪದ ಪಾದಯಾತ್ರೆ

ಚಿಕ್ಕಮಗಳೂರು: ಕೆಲದಿನಗಳ ಹಿಂದೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತ ನಂತರ ಜೆಡಿಎಸ್​ನ ವೈಎಸ್​ವಿ ದತ್ತ (YSV Datta) ಅವರು ಈಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹಾಗೂ ಚನಾವಣೆ ಸಮಯದಲ್ಲಿ ನಡೆದ ಬೆಳವಣಿಗೆಯಿಂದ ಪಶ್ಚಾತ್ತಾಪ ಪಟ್ಟಿರುವ ಅವರು ಕ್ಷೇತ್ರದಲ್ಲಿ ಪಶ್ಚಾತ್ತಾಪ ಪಾದಯಾತ್ರೆ ಕೈಗೊಂಡು ಜನರಲ್ಲಿ ಕ್ಷಮೆ ಕೋರಲು ನಿರ್ಧರಿಸಿದ್ದಾರೆ. ವಿಧಾನಸಭಾ … Continued

ತನ್ನ ಒಂದು ವರ್ಷದ ಮಗುವನ್ನು ಸಿಎಂ ಇದ್ದ ವೇದಿಕೆಯ ಮೇಲೆ ಎಸೆದ ವ್ಯಕ್ತಿ..! ಕಾರಣ ತಿಳಿದರೆ ನಿಮ್ಮ ಕರುಳು ಕಿತ್ತು ಬರುತ್ತದೆ

ಸಾಗರ : ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ಸಾಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬರು ತನ್ನ ಒಂದು ವರ್ಷದ ಮಗುವನ್ನು ವೇದಿಕೆಯ ಮೇಲೆ ಎಸೆದಿರುವ ಘಟನೆ ನಡೆದಿದೆ. ಇದು ಮಗುವಿನ ಜೀವ ಉಳಿಸಲು ತಂದೆಯ ಹತಾಶ ಪ್ರಯತ್ನವಾಗಿತ್ತು. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಮುಖೇಶ ಪಟೇಲ್ ಎಂಬವರು ತಮ್ಮ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳು ಗಮನ … Continued