ಚೀನಾ ಮೂಲದ ಬೆಂಗಳೂರಿನ ಆನ್‌ ಲೈನ್‌ ಶಿಕ್ಷಣ ಸಂಸ್ಥೆ ವಿರುದ್ಧ ಇಡಿ ದಾಳಿ: 8.26 ಕೋಟಿ ರೂ. ಜಪ್ತಿ

ಬೆಂಗಳೂರು: ಆನ್‌ಲೈನ್ ಶಿಕ್ಷಣ ಸಂಸ್ಥೆ ಪಿಜಿಯನ್‌ ಎಜುಕೇಷನ್ ಟೆಕ್ನಾಲಜಿ ಸಂಸ್ಥೆ ಮೇಲೆ ದಾಳಿ ಮಾಡಿದ ಜಾರಿ ನಿರ್ದೇಶನಾಲಯ ಸಂಸ್ಥೆಗೆ ಸೇರಿದ 8.26 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಏಪ್ರಿಲ್ 27ರಂದು ಇ.ಡಿ. ಅಧಿಕಾರಿಗಳು, ಪಿಜಿಯನ್‌ ಎಜುಕೇಷನ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ. ಕಂಪನಿಗೆ ಸೇರಿದ ಎರಡು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಚೀನಾ ಉದ್ಯಮಿಗಳು ಕಂಪನಿಯನ್ನು ಸಂಪೂರ್ಣ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು.
ಕೇಮನ್ ದ್ವೀಪದಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಕಂಪನಿಯ ವ್ಯವಹಾರಗಳನ್ನು ನಿರ್ದೇಶಕ ಲಿಯು ಕ್ಯಾನ್ ಮತ್ತು ವೇದಾಂತ ಹಮಿರ್ವಾಸಿಯಾ ಎಂಬಾತ ನಿರ್ವಹಿಸುತ್ತಿದ್ದರು. ಭಾರತೀಯ ನಿರ್ದೇಶಕರಿಗೆ ಕಂಪನಿಯ ಯಾವುದೇ ವ್ಯವಹಾರಗಳ ಅಧಿಕಾರ ನೀಡಿರಲಿಲ್ಲ. ಎಲ್ಲವೂ ಲಿಯು ಕ್ಯಾನ್, ಸೂಚನೆಯಂತೆ ನಡೆಯುತ್ತಿದ್ದವು ಎಂದು ಆರೋಪಿಸಲಾಗಿದೆ.
ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚದ ಹೆಸರಿನಲ್ಲಿ 82 ಕೋಟಿ ರೂ.ಗಳನ್ನು ಚೀನಾಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಜಾಹೀರಾತು ನೀಡಿರುವ ಬಗ್ಗೆ ಯಾವುದೇ ಪುರಾವೆಗಳನ್ನು ನೀಡಿಲ್ಲ. ಚೀನಾದ ನಿರ್ದೇಶಕ ಲಿಯು ಕಾನ್ ಸೂಚನೆ ಮೇರೆಗೆ ಹಣ ವರ್ಗಾವಣೆ ಆಗಿರುವುದು ದೃಢಪಟ್ಟಿತ್ತು. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement