ತನ್ನ ವಿರುದ್ಧದ ಸಿಬಿಐ ಎಫ್‌ಐಆರ್ ರದ್ದು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಸಮೀರ ವಾಂಖೆಡೆ

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗೂ 2021ರಲ್ಲಿ ಕಾರ್ಡೆಲಿಯಾ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೆ ಸಂಬಂಧಿಸಿದಂತೆ 25 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಿರುದ್ಧ … Continued

ಜನಸಂಖ್ಯೆಯ ಹೊರೆ ತಗ್ಗಿಸಲು ದೇಶದಲ್ಲಿ 8 ಹೊಸ ನಗರಗಳ ಸ್ಥಾಪನೆಗೆ ಕೇಂದ್ರದ ಚಿಂತನೆ

ನವದೆಹಲಿ: ದೇಶದಲ್ಲಿ ಅಸ್ತಿತ್ವದಲ್ಲಿರುವ ನಗರ ಕೇಂದ್ರಗಳ ಮೇಲಿನ ಜನಸಂಖ್ಯೆಯ ಹೊರೆ ತಗ್ಗಿಸಲು ಎಂಟು ಹೊಸ ನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆಯು ಪರಿಗಣನೆಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. 15ನೇ ಹಣಕಾಸು ಆಯೋಗವು ತನ್ನ ವರದಿಯೊಂದರಲ್ಲಿ ಹೊಸ ನಗರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಶಿಫಾರಸು ಮಾಡಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ … Continued

ಸುಪ್ರೀಂ ಕೋರ್ಟ್ ಇಬ್ಬರು ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ

ನವದೆಹಲಿ: ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪ್ರಶಾಂತಕುಮಾರ ಮಿಶ್ರಾ ಮತ್ತು ಹಿರಿಯ ವಕೀಲ ಕಲ್ಪತಿ ವೆಂಕಟರಾಮನ್ ವಿಶ್ವನಾಥನ್ ಅವರು ಇಂದು, ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಇಬ್ಬರು ಹೊಸ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಪ್ರಮಾಣ ವಚನ ಬೋಧಿಸಿದರು. ಮೂವರು ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್, ಜಸ್ಟಿಸ್ ಅಜಯ್ … Continued

ಮಾರ್ಚ್‌ ತ್ರೈಮಾಸಿಕದಲ್ಲಿ ಸ್ಟೇಟ್‌ ಬ್ಯಾಂಕ್‌ ಲಾಭದಲ್ಲಿ ಶೇ.83ರಷ್ಟು ಜಿಗಿತ : ₹16,694 ಕೋಟಿ ನಿವ್ವಳ ಲಾಭ

ನವದೆಹಲಿ: 2022-23ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇ 83ರಷ್ಟು ಜಿಗಿತ ಕಂಡು ₹16,694.51 ಕೋಟಿಗೆ ತಲುಪಿದೆ ಎಂದು ಎಸ್‌ಬಿಐ ಗುರುವಾರ ವರದಿ ಮಾಡಿದೆ. 2021-22 ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭವು ₹9,113.53 ಕೋಟಿಗಳಷ್ಟಿತ್ತು. 2022-23 ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ, ಬ್ಯಾಂಕ್‌ನ ಬಡ್ಡಿ … Continued

ಕ್ಷುಲ್ಲಕ ಕಾರಣಕ್ಕೆ ಮದುವೆ ವೇಳೆ ವಿಷ ಕುಡಿದ ಜೋಡಿ; ವರ ಸಾವು, ವಧು ಗಂಭೀರ

ಇಂದೋರ್‌: ಬಹಳ ವರ್ಷಗಳ ಕಾಯುವಿಕೆ ನಂತರ ವಿವಾಹ ಆಗುತ್ತಿರುವುದಕ್ಕೆ ನವ ಜೋಡಿಯೊಂದು ತಾಳಿ ಕಟ್ಟುವ ಮುನ್ನವೇ ಹಸೆಮಣೆ ಮೇಲೆ ವಿಷ ಸೇವಿಸಿರುವ ಘಟನೆ ಮಧ್ಯಪ್ರದೇಶ ಇಂದೋರ್‌ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ವಿಷ ಸೇವನೆಯಿಂದ 21 ವರ್ಷದ ವರ ಮೃತಪಟ್ಟಿದ್ದು, 20 ವರ್ಷದ ವಧುವಿನ ಸ್ಥಿತಿ ಗಂಭೀರವಾಗಿದೆ. ಘಟನೆ ಮೇ 16 ರಂದು ನಡೆದಿದೆ. ಮಧ್ಯಪ್ರದೇಶ ಇಂದೋರಿನಲ್ಲಿ … Continued

ಬಿಹಾರ ಜಾತಿಗಣತಿಗೆ ಹೈಕೋರ್ಟ್‌ ತಡೆಯಾಜ್ಞೆ ತೆರವಿಗೆ ಸುಪ್ರೀಂ ಕೋರ್ಟ್‌ ನಕಾರ

ನವದೆಹಲಿ : ಬಿಹಾರ ಸರ್ಕಾರ ಜಾತಿ ಗಣತಿ ನಡೆಸದಂತೆ ಪಾಟ್ನಾ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆ ತೆರವಿಗೆ ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಪಾಟ್ನಾ ಹೈಕೋರ್ಟ್ ಜುಲೈ 3 ರಂದು ಅಂತಿಮ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಬಿಹಾರ ಸರ್ಕಾರಕ್ಕೆ ರಿಲೀಫ್‌ ನೀಡಲು ನಿರಾಕರಿಸಿತು. … Continued

ಅಂಕಾರಾ : ಸೋಫಾವನ್ನು ಆಕಾಶದಲ್ಲಿ ತರಗೆಲೆಯಂತೆ ಹಾರಿಸಿಕೊಂಡು ಹೋದ ಭಾರೀ ಚಂಡಮಾರುತ | ವೀಕ್ಷಿಸಿ

ಟರ್ಕಿಯಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ದೇಶದ ರಾಜಧಾನಿ ಅಂಕಾರಾದಲ್ಲಿ ಭಾರೀ ಚಂಡಮಾರುತವು ಪೀಠೋಪಕರಣಗಳನ್ನು ಆಕಾಶದಲ್ಲಿ ಹಾರಿಸಿಕೊಂಡು ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ತುಣುಕೊಂದರಲ್ಲಿ, ಬಲವಾದ ಗಾಳಿಯು ಸೋಫಾವನ್ನು ಆಕಾಶದಲ್ಲಿ ತರಗೆಲೆಯಂತೆ ಎತ್ತಿಕೊಂಡು ಹೋಗಿರುವುದು ಕಂಡುಬರುತ್ತದೆ. ಅದು ನಂತರ ಮತ್ತೊಂದು ಕಟ್ಟಡಕ್ಕೆ ಹೋಗಿ ಬಡಿಯುವುದನ್ನು ತೋರಿಸುತ್ತದೆ. ಗುರು ಆಫ್ ನಥಿಂಗ್ ಎಂದು ಕರೆಯಲ್ಪಡುವ ಟ್ವಿಟ್ಟರ್ ಪುಟದಲ್ಲಿ … Continued