ವೀಡಿಯೊ ; ಪ್ರಧಾನಿ ಮೋದಿ ಪಾದಗಳನ್ನು ಮುಟ್ಟಿ ನಮಸ್ಕರಿಸಿದ ಪಪುವಾ ನ್ಯೂಗಿನಿಯಾದ ಪ್ರಧಾನಿ ಮರಾಪೆ

ನವದೆಹಲಿ : ಪೆಸಿಫಿಕ್ ನಾಯಕರೊಂದಿಗೆ ಮಾತುಕತೆಗಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಪುವಾ ನ್ಯೂಗಿನಿಯಾಗೆ ಆಗಮಿಸಿದರು, ಭಾರತವು ಬೆಳೆಯುತ್ತಿರುವ ಚೀನಾದ ಪ್ರಾದೇಶಿಕ ಪ್ರಭಾವವನ್ನು ಎದುರಿಸಲು ಪ್ರಯತ್ನಿಸುತ್ತಿರುವಾಗ ಪಪುವಾ ನ್ಯೂಗಿನಿಯಾ ದ್ವೀಪ ರಾಷ್ಟ್ರಕ್ಕೆ ಭಾರತದ ಪ್ರಧಾನ ಮಂತ್ರಿಯ ಮೊದಲ ಭೇಟಿಯಾಗಿದೆ. ರಾಜಧಾನಿ ಪೋರ್ಟ್ ಮೊರೆಸ್ಬಿಯಲ್ಲಿ ಸ್ಥಳೀಯ ಕಾಲಮಾನ ರಾತ್ರಿ 10 ಗಂಟೆಯ ನಂತರ ಅವರು ಬಂದಿಳಿದರು, ವಿಮಾನ … Continued

ಬೆಂಗಳೂರಿನಲ್ಲಿ ತಮಗೆ ಝೀರೋ ಟ್ರಾಫಿಕ್ ಬೇಡ ಎಂದ ಸಿಎಂ ಸಿದ್ದರಾಮಯ್ಯ

posted in: ರಾಜ್ಯ | 0

ಬೆಂಗಳೂರು : ಸಂಚಾರದ ವೇಳೆ ಸಾರ್ವಜನಿಕರಿಗೆ ತಮ್ಮಿಂದಾಗುವ ಕಿರಿಕಿರಿಗಳನ್ನು ತಪ್ಪಿಸಲು ಪ್ರಮುಖ ಹೆಜ್ಜೆ ಇರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸಂಚರಿಸುವ ವೇಳೆ‌ ಝೀರೋ ಟ್ರಾಫಿಕ್ (ಶೂನ್ಯ ಸಂಚಾರ) ವ್ಯವಸ್ಥೆ ಕಲ್ಪಿಸುವುದು ಬೇಡ ಎಂದು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ನನ್ನ ವಾಹನ … Continued

ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಇನ್ಫೋಸಿಸ್ ಉದ್ಯೋಗಿ ಸಾವು

posted in: ರಾಜ್ಯ | 0

ಬೆಂಗಳೂರು: ನಗರದಲ್ಲಿ ಇಂದು ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಇನ್ಫೋಸಿಸ್‌ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಸಾವಿಗೀಡಾಗಿದ್ದಾರೆ. ಕೆ.ಆರ್.ವೃತ್ತದ ಅಂಡರ್ ಪಾಸ್ ಬಳಿ ಮಳೆ ನೀರಿನಲ್ಲಿ ಮುಳುಗಿ 23 ವರ್ಷದ ಭಾನುರೇಖಾ ಎಂಬುವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ನೀರಿನಲ್ಲಿ ಕಾರು ಮುಳುಗಿದ್ದು, ಆಂಧ್ರಪ್ರದೇಶದ ವಿಜಯವಾಡದ ಒಂದೇ ಕುಟುಂಬದ ಆರು ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಕಾರಿನಲ್ಲಿ ನೀರು ತುಂಬಿ ಅಸ್ವಸ್ಥಗೊಂಡಿದ್ದ … Continued

ಕುಖ್ಯಾತ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ; ಕಾಡಿನಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆ

posted in: ರಾಜ್ಯ | 0

ಬೆಂಗಳೂರು: ನಟೋರಿಯಸ್​ ರೌಡಿಶೀಟರ್ ಸುರೇಶಬಾಬು ಅಲಿಯಾಸ್​ ಅಲ್ಯೂಮಿನಿಯಂ ಬಾಬುವಿನ ಬರ್ಬರ ಹತ್ಯೆಯಾಗಿದ್ದು, ಆತನ ಶವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ. ನಿನ್ನೆ ಶನಿವಾರ (ಮೇ 20) ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಅಲ್ಯೂಮಿನಿಯಂ ಬಾಬು ಜಯನಗರ ಪೊಲೀಸ್​ ಠಾಣೆಯ ರೌಡಿಶೀಟರ್ ಆಗಿದ್ದ. ಕೊಲೆ, ಸುಲಿಗೆ, … Continued

ಕರ್ನಾಟಕಕ್ಕೆ ಜೂನ್​ 2ನೇ ವಾರದಲ್ಲಿ ಮುಂಗಾರು ಮಳೆ ಪ್ರವೇಶ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಸಾಲಿನ ಮುಂಗಾರು (Monsoon) ಮಳೆ ಸ್ವಲ್ಪ ವಿಳಂಬವಾಗಿ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ​ವಾಡಿಕೆಯಂತೆ ಕೇರಳ ರಾಜ್ಯಕ್ಕೆ ಮೊದಲು ಮುಂಗಾರು (Kerala Monsoon) ಪ್ರವೇಶವಾಗುತ್ತದೆ. ಕೇರಳಕ್ಕೆ ನಾಲ್ಕು ದಿನ ತಡವಾಗಿ ಅಂದರೆ ಜೂನ್​ 4 ರಂದು ಮುಂಗಾರು ಪ್ರವೇಶಿಸಲಿದೆ. ಕರ್ನಾಟಕಕ್ಕೆ … Continued

ರಾಜ್ಯದ ನೂತನ ಅಡ್ವೊಕೇಟ್‌ ಜನರಲ್‌ ಆಗಿ ಶಶಿಕಿರಣ ಶೆಟ್ಟಿ ನೇಮಕ

posted in: ರಾಜ್ಯ | 0

ಬೆಂಗಳೂರು : ಕರ್ನಾಟಕದ ನೂತನ ಅಡ್ವೊಕೇಟ್ ಜನರಲ್ ಆಗಿ ಹೈಕೋರ್ಟ್‌ ಹಿರಿಯ ವಕೀಲರಾದ ಶಶಿಕಿರಣ ಶೆಟ್ಟಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಶಿಕಿರಣ ಶೆಟ್ಟಿ ಅವರು ನಿವೃತ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರ ಪುತ್ರರು. ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿ ಮುಗಿದ ನಂತರ ಅಡ್ವೊಕೇಟ್ ಜನರಲ್ ಆಗಿದ್ದ ಪ್ರಭುಲಿಂಗ ನಾವದಗಿ ರಾಜೀನಾಮೆ … Continued

ಧಾರವಾಡ : ಜೆ ಎಸ್ ಎಸ್ ನಲ್ಲಿ ಇಗ್ನೋ ಕೋರ್ಸುಗಳಿಗೆ ಪ್ರವೇಶ ಆರಂಭ

posted in: ರಾಜ್ಯ | 0

ಧಾರವಾಡ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸುಗಳಿಗೆ ಜುಲೈ 2023ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ. ಪ್ರವೇಶಕ್ಕಾಗಿ ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿರುವ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಿಂದ ಮಾಹಿತಿ ಪಡೆಯಬಹುದಾಗಿದೆ. ಇಗ್ನೋ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ, ಎಂಬಿಎ, ಎಂಸಿಎ, ಎಂ.ಕಾಂ, ಎಂ.ಎ.(ಇಂಗ್ಲಿಷ್‌) ಎಂ.ಎ.(ಇತಿಹಾಸ), ಎಂ.ಎ.(ಅರ್ಥಶಾಸ್ತ್ರ) ಮುಂತಾದ ಸ್ನಾತಕೋತ್ತರ ಕೋರ್ಸುಗಳು ಬಿಎ, ಬಿ.ಕಾಂ, … Continued