ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಶಿಖರವನ್ನು 27ನೇ ಬಾರಿಗೆ ಏರಿ ವಿಶ್ವ ದಾಖಲೆ ಸರಿಗಟ್ಟಿದ ಪಸಾಂಗ್ ದಾವಾ ಶೆರ್ಪಾ

ಕಠ್ಮಂಡು: ಪಸಾಂಗ್ ದಾವಾ ಶೆರ್ಪಾ ಸೋಮವಾರ 27ನೇ ಬಾರಿಗೆ ವಿಶ್ವದ ಅತ್ಯಂತ ಎತ್ತರವಾದ ಪರ್ವತ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ಕಾಮಿ ರೀಟಾ ಶೆರ್ಪಾ ಅವರು ಈ ಹಿಂದೆ ನಿರ್ಮಿಸಿದ ಅತ್ಯಧಿಕ ಸಂಖ್ಯೆಯಲ್ಲಿ ಮೌಂಟ್ ಎವರೆಸ್ಟ್ ಏರಿದ್ದ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.
46 ವರ್ಷದ ಪರ್ವತಾರೋಹಿ ಇಂದು, ಸೋಮವಾಋ ಬೆಳಗ್ಗೆ 8:25ಕ್ಕೆ 27ನೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರದಲ್ಲಿ ನಿಂತಿದ್ದಾರೆ ಎಂದು ಪರ್ವತಾರೋಹಣ ಆಯೋಜಿಸಿದ್ದ ಇಮ್ಯಾಜಿನ್ ನೇಪಾಳ ಟ್ರೆಕ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ದಾವಾ ಗ್ಯಾಲ್ಜೆನ್ ಶೆರ್ಪಾ ತಿಳಿಸಿದ್ದಾರೆ.
ಪಸಾಂಗ ಶೆರ್ಪಾ ಅವರು 8,848.86 ಮೀಟರ್ ಎತ್ತರದ ಶಿಖರವನ್ನು 27 ಬಾರಿ ಏರಿದ ವಿಶ್ವದ ಎರಡನೇ ವ್ಯಕ್ತಿಯಾಗಿದ್ದಾರೆ ಎಂದು ಅವರು ಹೇಳಿದರು.
ಪರ್ವತಾರೋಹಿ, ಎವರೆಸ್ಟ್ ಪ್ರದೇಶದ ಸಮೀಪವಿರುವ ಪಾಂಗ್‌ಬೋಚೆಯಲ್ಲಿ ಜನಿಸಿದರು, 1998 ರಲ್ಲಿ ಮೊದಲ ಬಾರಿಗೆ ಎವರೆಸ್ಟ್ ಶಿಖರವನ್ನು ಏರಿದರು. ಪಸಾಂಗ್ ದಾವಾ ಈ ವಸಂತ ಋತುವಿನಲ್ಲಿ ಎರಡು ಬಾರಿ ವಿಶ್ವದ ಅತಿ ಎತ್ತರದ ಶಿಖರದ ತುದಿಯನ್ನು ತಲುಪಿದ್ದಾರೆ. ಇದಕ್ಕೂ ಮೊದಲು ಅವರು ಮೇ 14 ರಂದು 26 ನೇ ಬಾರಿಗೆ ಎವರೆಸ್ಟ್ ಶಿಖರವನ್ನು ಏರಿದ್ದರು.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ಏತನ್ಮಧ್ಯೆ, ಈ ಹಿಂದೆ 27 ಬಾರಿ ಎವರೆಸ್ಟ್ ಏರಿ ವಿಶ್ವದಾಖಲೆ ನಿರ್ಮಿಸಿರುವ 53 ವರ್ಷದ ಕಾಮಿ ರೀಟಾ ಶೆರ್ಪಾ ಅವರು ಅವರು 28 ನೇ ಬಾರಿಗೆ ಎವರೆಸ್ಟ್ ಏರಲು ತಯಾರಿ ನಡೆಸುತ್ತಿದ್ದಾರೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ನ ಥಾನೇಶ್ವರ್ ಗುರಗೈನ್ ಹೇಳಿದ್ದಾರೆ.
ಕಾಮಿ ಶೆರ್ಪಾ ಈ ಋತುವಿನಲ್ಲಿ ಎರಡನೇ ಬಾರಿಗೆ ಎವರೆಸ್ಟ್ ಅನ್ನು ಏರಲು ಮತ್ತೊಂದು ವಿಶ್ವ ದಾಖಲೆಯನ್ನು ಸ್ಥಾಪಿಸಲು ಅನುಕೂಲಕರ ಸಮಯಕ್ಕಾಗಿ ಕಾಯುತ್ತಿದ್ದಾರೆ. ಇದಕ್ಕೂ ಮೊದಲು, ಕಾಮಿ ಶೆರ್ಪಾ ಅವರು ಮೇ 17 ರಂದು 27 ನೇ ಬಾರಿಗೆ ಎವರೆಸ್ಟ್‌ನಲ್ಲಿ ನಿಂತಿದ್ದರು.

ಇಬ್ಬರು ಅನುಭವಿ ಶೆರ್ಪಾ ಪರ್ವತಾರೋಹಿಗಳು ಶಿಖರವನ್ನು ಏರಲು ವಿಶ್ವ ದಾಖಲೆಯನ್ನು ಸ್ಥಾಪಿಸಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಈ ವಸಂತ ಋತುವಿನಲ್ಲಿ, 478 ಆರೋಹಿಗಳು ಎವರೆಸ್ಟ್ ಅನ್ನು ಏರಲು ಅನುಮತಿಯನ್ನು ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಐಪಿಎಲ್‌ (IPL)2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು..? ಈ ವೀಡಿಯೊಗಳನ್ನು ನೋಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement