ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ವಧು…!

ಬರೇಲಿ: ‘ಮದುವೆಯಿಂದ ತಪ್ಪಿಸಿಕೊಳ್ಳಲು ಓಡಿಹೋದ ವರ’ನನ್ನು ವಧು ಅಟ್ಟಿಸಿಕೊಂಡು ಹೋಗಿ ಹಿಡಿದು ಮದುವೆ ಮಂಟಪಕ್ಕೆ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಮದುಮಗಳ ಉಡುಪಿನಲ್ಲಿದ್ದ ಯುವತಿ ಮದುವೆಯಿಂದ ಓಡಿ ಹೋಗುತ್ತಿದ್ದ ತನ್ನ ವರನನ್ನು 20 ಕಿಲೋಮೀಟರ್ ದೂರದವರೆಗೆ ಹಿಂಬಾಲಿಸಿ ಆತನನ್ನು ಹಿಡಿದು ಮದುವೆ ಮಂಟಪಕ್ಕೆ ಎಳೆದು ತಂದಿದ್ದಾಳೆ. ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬರದರಿ ಪ್ರದೇಶದಲ್ಲಿ ನಡೆದಿದೆ.
ಅದೊಂದು ಪ್ರೇಮವಿವಾಹ, ಆದರೆ ಕೊನೆ ಕ್ಷಣದಲ್ಲಿ ವರನು ಹುಡುಗಿಗೆ ಕೈಕೊಡಲು ಮುಂದಾಗಿದ್ದ. ಯುವತಿಯು ಬದೌನ್ ಜಿಲ್ಲೆಯ ಈ ವ್ಯಕ್ತಿಯನ್ನು ಎರಡು ವರ್ಷಗಳಿಂದ ಪ್ರೇಮಿಸುತ್ತಿದ್ದಳು. ಇವರಿಬ್ಬರ ಸಂಬಂಧಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ಭಾನುವಾರ ಸ್ಥಳೀಯ ಭೂತೇಶ್ವರನಾಥ ದೇವಸ್ಥಾನದಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು.

ಆದರೆ ಮದುವೆಯ ದಿನದಂದು ಮದುಮಗ ಬಹಳ ಸಮಯ ಕಳೆದರೂ ಮದುವೆ ಸ್ಥಳಕ್ಕೆ ಬಂದಿರಲಿಲ್ಲ. ಇತ್ತ ವಧು ಕಡೆಯವರು ಹಾಗೂ ಅತಿಥಿಗಳು ಎಲ್ಲರೂ ಮಂಟಪಕ್ಕೆ ಹಾಜರಾಗಿದ್ದಾರೆ. ವಧು ಕೂಡ ರೆಡಿಯಾಗಿ ಕುಳಿತಿದ್ದಳು. ಆದರೆ ವರ ಮಾತ್ರ ಮಂಟಪಕ್ಕೆ ಬಾರದೇ ಇರುವುದರಿಂದ ಕೆಲವೊಂದು ಅನುಮಾನಗಳು ಹುಟ್ಟಿಕೊಂಡವು. ಬಂದವರೆಲ್ಲ ಗುಸುಗುಸು ಮಾತನಾಡಲು ಆರಂಭಿಸಿದರು.ವಧುವಿನ ಮನೆಯವರು ಆತನಿಗೆ ಫೋನ್‌ ಕರೆ ಮಾಡಿದಾಗ ಆತ ತನ್ನ ತಾಯಿಯನ್ನು ಕರೆದುಕೊಂಡು ಬರಲು ಬುಡೌನ್‌ಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿದ್ದ.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

ಇದನ್ನು ಕೇಳಿದ ತಕ್ಷಣ ಮದುಮಗಳಿಗೆ ಅನುಮಾನ ಬಂದಿದ್ದು, ವರ ಮದುವೆಯಾಗದೇ ಓಡಿಹೋಗಲು ಮುಂದಾಗಿದ್ದಾನೆ ಎಂಬ ಅನುಮಾನ ಬಲವಾಯಿತು. ಒಂದು ಕ್ಷಣವೂ ವ್ಯರ್ಥ ಮಾಡದೆ, ಬರೇಲಿಯಿಂದ ಆತನನ್ನು ಹಿಂಬಾಲಿಸಿ ಸುಮಾರು 20 ಕಿಮೀ ದೂರದ ಭೀಮೋರಾ ಪೊಲೀಸ್ ಠಾಣೆ ಬಳಿ ಆತ ಬಸ್ ಹತ್ತುವಾಗ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದಳು.
ದಂಪತಿ ದೇವಸ್ಥಾನದ ಮದುವೆ ಮಂಟಪಕ್ಕೆ ಹಿಂತಿರುಗುವ ಮೊದಲು ರಸ್ತೆಯ ಮಧ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ ನಡೆಯಿತು.
ವರನಿಗೆ ತಪ್ಪಿಸಿಕೊಳ್ಳಲು ದಾರಿಯೇ ಇರಲಿಲ್ಲ. ರಸ್ತೆಯ ಮಧ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ ನಡೆಯಿತು, ಮತ್ತು ದಂಪತಿ ಮದುವೆಯಾಗಲು ದೇವಸ್ಥಾನಕ್ಕೆ ಮರಳಿದರು. ನಂತರ ಇವರಿಬ್ಬರ ಮದುವೆ ಭೀಮೋರ ದೇವಸ್ಥಾನದಲ್ಲಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ನೆರವೇರಿತು.

1.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement