ಎನ್‌ಡಿಟಿವಿ ಸಮೀಕ್ಷೆ : ಹೆಚ್ಚಿದ ರಾಹುಲ್ ಗಾಂಧಿ ಜನಪ್ರಿಯತೆ…ಆದರೆ ಕಡಿಮೆಯಾಗದ ಪ್ರಧಾನಿ ಮೋದಿ ಜನಪ್ರಿಯತೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಭಾರತದ ಅತ್ಯಂತ ಜನಪ್ರಿಯ ನಾಯಕರಾಗಿ ಉಳಿದಿದ್ದಾರೆ ಮತ್ತು ದೇಶದ ಉನ್ನತ ಹುದ್ದೆಗೆ ಪ್ರಮುಖ ಆಯ್ಕೆಯಾಗಿದ್ದಾರೆ ಎಂದು ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಭಾಗಿತ್ವದಲ್ಲಿ ಎನ್‌ಡಿಟಿವಿ ನಡೆಸಿದ ವಿಶೇಷ ಸಮೀಕ್ಷೆ “ಪಬ್ಲಿಕ್ ಒಪಿನಿಯನ್” ಬಹಿರಂಗಪಡಿಸಿದೆ.
ಪ್ರಧಾನಿ ಮೋದಿಯವರು ಈ ತಿಂಗಳು ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸುತ್ತಿರುವಾಗ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ಸೇರಿದಂತೆ ಸರಣಿ ಚುನಾವಣೆಗಳಿಗೆ ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಮನಸ್ಥಿತಿ ತಿಳಿಯಲು ಈ ಸಮೀಕ್ಷೆಯು ಪ್ರಯತ್ನಿಸಿದೆ. ಕರ್ನಾಟಕ ಚುನಾವಣೆಯ ನಂತರ ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್‌ಗೆ ಸೋತ ನಂತರ ಮೇ 10 ಮತ್ತು 19 ರ ನಡುವೆ 19 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಯಿತು.
ಕರ್ನಾಟಕದಲ್ಲಿ ಬಿಜೆಪಿ ಸೋತಿದ್ದರೂ ಪ್ರಧಾನಿ ಮೋದಿಯವರ ಜನಪ್ರಿಯತೆ ಬಲವಾಗಿ ಉಳಿದಿದೆ ಮತ್ತು ಪಕ್ಷದ ಮತ ಹಂಚಿಕೆ ಸ್ಥಿರವಾಗಿದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು 43% ಜನರು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೂರನೇ ಬಾರಿಗೆ ಗೆಲ್ಲಬೇಕು ಎಂದು ಬಯಸುತ್ತಾರೆ, ಆದರೆ 38% ಜನರು ಒಪ್ಪುವುದಿಲ್ಲ. ಇಂದು ಚುನಾವಣೆ ನಡೆದರೆ ಬಿಜೆಪಿಗೆ ಮತ ಹಾಕುವುದಾಗಿ ಶೇ.40ರಷ್ಟು ಮಂದಿ ಹೇಳಿದ್ದಾರೆ. ಕಾಂಗ್ರೆಸ್ 29%ರಷ್ಟು ಮಂದಿ ಕಾಂಗ್ರೆಸ್‌ ಪರ ಒಲವು ವ್ಯಕ್ತಪಡಿಸಿದ್ದಾರೆ.

ಬಿಜೆಪಿ-ಕಾಂಗ್ರೆಸ್‌ : ಮತಗಳಿಕೆ ಹೆಚ್ಚಾಗಬಹುದು…
ಸಮೀಕ್ಷೆಯಲ್ಲಿ ಬಿಜೆಪಿಯ ಮತಗಳಿಕೆಯು 2019 (37%)ಇದ್ದಿದ್ದು 2023ರಲ್ಲಿ 39%ಕ್ಕೆ ಹೆಚ್ಚಾಗಬಹುದು ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಹಾಗೆಯೇ ಕಾಂಗ್ರೆಸ್‌ 2019 ರಲ್ಲಿ ಪಡೆದಿದ್ದ 19%ರಷ್ಟು ಮತಗಳು 2023 ರಲ್ಲಿ 29%ಕ್ಕೆ ಹೆಚ್ಚಾಗಬಹುದು ಎಂದು ಸಮೀಕ್ಷೆ ಹೇಳಿದೆ.
ಶೇಕಡಾ 43 ರಷ್ಟು ಜನರು ಇಂದು ಚುನಾವಣೆ ನಡೆದರೆ, ನರೇಂದ್ರ ಮೋದಿ ಅವರೇ ಪ್ರಧಾನಿ ಹುದ್ದೆಗೆ ತಮ್ಮ ಪ್ರಮುಖ ಆಯ್ಕೆ ಎಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 27% ಜನರು ಅವರ ಹತ್ತಿರದ ಪ್ರತಿಸ್ಪರ್ಧಿ ರಾಹುಲ್ ಗಾಂಧಿ ಬಗ್ಗೆ ಒಲವು ತೋರಿದ್ದಾರೆ. ಇತರರು ತುಂಬಾ ಹಿಂದುಳಿದಿದ್ದಾರೆ – ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಮೂರನೇ ಸ್ಥಾನದಲ್ಲಿದ್ದಾರೆ (ತಲಾ 4%), ನಂತರ ಅಖಿಲೇಶ ಯಾದವ (3%), ನಿತೀಶಕುಮಾರ (1%), ಮತ್ತು ಇತರರಿಗೆ ಒಟ್ಟಾಗಿ ಶೇ. 18% ಜನರ ಒಲವು ವ್ಯಕ್ತವಾಗಿದೆ.
2019 ಮತ್ತು 2023ರ ಡೇಟಾವು ಪ್ರಧಾನಿ ಮೋದಿ ಜನಪ್ರಿಯತೆ (44 ರಿಂದ 43%) ಅಲ್ಪಕುಸಿತ ತೋರಿಸಿದೆ. ಮತ್ತು ರಾಹುಲ್ ಗಾಂಧಿ ಜನಪ್ರಿಯತೆ (24 ರಿಂದ 27%) ಗೆ ಸ್ವಲ್ಪಮಟ್ಟಿನ ಏರಿಕೆ ತೋರಿಸುತ್ತದೆ. ಆದರೆ ಪ್ರಧಾನಿ ಮೋದಿ ಅವರು ಉತ್ತಮ ಆಳ್ವಿಕೆ ಬಗ್ಗೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 40 ರಷ್ಟು ಜನರು ಅವರನ್ನು ಇಷ್ಟಪಡುವುದಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ವಾಕ್ಚಾತುರ್ಯಕ್ಕಾಗಿ 25%ರಷ್ಟು ಜನ ಹೆಚ್ಚು ಇಷ್ಟಪಡುತ್ತಾರೆ. ಪ್ರತಿಕ್ರಿಯಿಸಿದವರಲ್ಲಿ 20% ರಷ್ಟು ಜನರು ಅಭಿವೃದ್ಧಿ ಕೇಂದ್ರಿತ ಪ್ರಧಾನಿಯಾಗಿ ಅವರನ್ನು ಇಷ್ಟಪಡುವುದಾಗಿ ಹೇಳಿದ್ದಾರೆ, 13% ಜನರು ಪ್ರಧಾನಿಯನ್ನು ಇಷ್ಟಪಡುತ್ತಾರೆ ಏಕೆಂದರೆ ಅವರು ಅವಿರತವಾಗಿ ಕೆಲಸ ಮಾಡುತ್ತಾರೆ ಮತ್ತು ಅಷ್ಟೇ ಸಂಖ್ಯೆಯ ಜನರು ಅವರ ವರ್ಚಸ್ಸಿನಿಂದ ಪ್ರಭಾವಿತರಾಗಿದ್ದಾರೆ. ಸುಮಾರು 11% ಜನರು ಅವರ ನೀತಿಗಳನ್ನು ಮೆಚ್ಚಿದ್ದಾರೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

ಪ್ರಧಾನಿ ಮೋದಿಗೆ ಯಾರು ಸವಾಲು ಹಾಕಬಹುದು…?
2024 ರಲ್ಲಿ ಪ್ರಧಾನಿ ಮೋದಿಗೆ ಯಾರು ಸವಾಲು ಹಾಕಬಹುದು ಎಂದು ನೀವು ನಂಬುತ್ತೀರಿ ಎಂದು ಪ್ರಶ್ನೆಗೆ 34% ಜನರು ರಾಹುಲ್ ಗಾಂಧಿ ಎಂದು ಹೇಳಿದ್ದಾರೆ, ಆದರೆ 11% ಜನರು ಅರವಿಂದ ಕೇಜ್ರಿವಾಲ್ ಎಂದು ಹೇಳಿದ್ದಾರೆ. ಅಖಿಲೇಶ ಯಾದವ (5%) ಮತ್ತು ಮಮತಾ ಬ್ಯಾನರ್ಜಿ (4%) ಅವರನ್ನು ಆಯ್ಕೆ ಮಾಡಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡ 9 ರಷ್ಟು ಜನರು ಮೋದಿಗೆ ಸವಾಲು ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಸಂಬಂಧಿಸಿದಂತೆ, 26% ಜನರು “ಯಾವಾಗಲೂ ಅವರನ್ನು ಇಷ್ಟಪಡುತ್ತಾರೆ” ಎಂದು ಹೇಳಿದ್ದಾರೆ ಮತ್ತು 15% ಅವರು ಭಾರತ್ ಜೋಡೋ ಯಾತ್ರೆಯ ನಂತರ ಅವರು ಇಷ್ಟವಾಗಿದ್ದಾರೆ ಎಂದು ಹೇಳಿದ್ದಾರೆ. 16% ಜನರು ಅವರು “ಇಷ್ಟವಿಲ್ಲ” ಎಂದು ಹೇಳಿದ್ದಾರೆ ಮತ್ತು 27% ಅವರ ಬಗ್ಗೆ ಅಸಡ್ಡೆ ಹೊಂದಿದ್ದಾರೆ.
55 ರಷ್ಟು ಜನರು ವಿವಿಧ ರಂಗಗಳಲ್ಲಿ ಸರ್ಕಾರದ ಕೆಲಸದಿಂದ ತೃಪ್ತರಾಗಿರುವುದಾಗಿ ಹೇಳಿದ್ದಾರೆ. ಸುಮಾರು 38% ಜನರು ಕೇಂದ್ರ ಸರ್ಕಾರದ ಕೆಲಸದಿಂದ “ಸ್ವಲ್ಪ ತೃಪ್ತರಾಗಿದ್ದಾರೆ” ಎಂದು ಹೇಳುತ್ತಾರೆ. 17% ಅವರು ಸಂಪೂರ್ಣ ತೃಪ್ತಿ ಹೊಂದಿದ್ದಾರೆಂದು ಹೇಳಿದ್ದಾರೆ. 21%ರಷ್ಟು ಜನರು “ಸಂಪೂರ್ಣವಾಗಿ ಅತೃಪ್ತರು” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಪ್ರತಿಸ್ಪರ್ಧಿಗಳನ್ನು ಹಣಿಯಲು ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ವಿರೋಧದ ಆರೋಪಗಳ ಬಗ್ಗೆ ಜನರು ಭಿನ್ನ ಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಪಾತ್ರದ ಬಗ್ಗೆ ಹೆಚ್ಚಾಗಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. 37%ರಷ್ಟು ಜನರು ಏಜೆನ್ಸಿಗಳು ಕಾನೂನುಬದ್ಧವಾಗಿವೆ ಎಂದು ಹೇಳಿದರೆ 32%ರಷ್ಟು ಜನರು ಅದು ರಾಜಕೀಯ ಸೇಡಿನ ಸಾಧನವಾಗಿದೆ ಎಂದು ನಂಬುತ್ತಾರೆ.
ಲೋಕನೀತಿ-ಸಿಎಸ್‌ಡಿಎಸ್ 71 ಕ್ಷೇತ್ರಗಳಲ್ಲಿ 7,202 ಜನರ ಸಮೀಕ್ಷೆ ನಡೆಸಿರುವುದಾಗಿ ಹೇಳಿದೆ.

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement