ಶೀಘ್ರವೇ 15000 ಪೊಲೀಸ್ ಪೇದೆಗಳ ಹುದ್ದೆ ಭರ್ತಿ: ಗೃಹ ಸಚಿವ ಡಾ. ಜಿ.ಪರಮೇಶ್ವರ

ಬೆಂಗಳೂರು : ಶೀಘ್ರವೇ 15000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ಶೀಘ್ರವೇ 15,000 ಪೊಲೀಸ್ ಪೇದೆಗಳ ನೇಮಕಾತಿ ಮಾಡಲಾಗುತ್ತದೆ ಎಂದರು. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ 15, 000 ಪೊಲೀಸ್ ಪೇದೆಗಳ ನೇಮಕಾತಿ ಮಾಡಲಾಗುತ್ತದೆ. ಇದರಿಂದ … Continued

ಹಿರಿಯ ನಟಿ ಸುಲೋಚನಾ ಲಾಟ್ಕರ್ ಮುಂಬೈನಲ್ಲಿ ನಿಧನ

ಮುಂಬೈ: ಖ್ಯಾತ ನಟಿ ಸುಲೋಚನಾ ಲಾಟ್ಕರ್ ಅವರು ಇಲ್ಲಿನ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ ಎಂದು ಅವರ ಮೊಮ್ಮಗ ಪರಾಗ್ ಅಜಗಾಂವ್ಕರ ಖಚಿತಪಡಿಸಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಮರಾಠಿ ಮತ್ತು ಹಿಂದಿ ಚಿತ್ರರಂಗದ ಪ್ರಸಿದ್ಧ ನಟಿ ಸುಲೋಚನಾ ಲಾಟ್ಕರ್ ಅವರು 1940ರ ದಶಕದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 250 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವರು … Continued

ಕಲಘಟಗಿ: ನೇಣು ಬಿಗಿದುಕೊಂಡು ಸಹೋದರಿಯರ ಆತ್ಮಹತ್ಯೆ

ಧಾರವಾಡ: ತಾಯಿ ಮನೆಯಲ್ಲಿ ಇಲ್ಲದಿರುವಾಗ ಸಹೋದರಿಯರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು 19 ವರ್ಷದ ಭೂಮಿಕಾ ಹಡಪದ ಹಾಗೂ 17 ವರ್ಷದ ಕಾವೇರಿ ಹಡಪದ ಎಂದು ಗುರುತಿಸಲಾಗಿದೆ. ಕಲಘಟಗಿಯ ಬೆಂಡಿಗೇರಿ ಓಣಿಯ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿದ್ದು ಇಂದು, ಭಾನುವಾರ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ … Continued

ವೀಡಿಯೊ : ನೋಡನೋಡುತ್ತಲೇ ಕೆಲವೇ ಸೆಕೆಂಡುಗಳಲ್ಲಿ ಕುಸಿದುಬಿದ್ದ ಚತುಷ್ಪಥ ಸೇತುವೆ | ವೀಕ್ಷಿಸಿ

ಭಾಗಲ್ಪುರ: ಬಿಹಾರದ ಭಾಗಲ್ಪುರದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ಅವರು ಶಂಕುಸ್ಥಾಪನೆ ಮಾಡಿದ 3160 ಮೀಟರ್ ಉದ್ದದ ಸೇತುವೆಯ ಅಡಿಪಾಯ ಭಾನುವಾರ ಸಂಜೆ ಎರಡನೇ ಬಾರಿಗೆ ಕುಸಿದಿದೆ. ಸ್ಥಳೀಯರು ಸೇತುವೆ ಕುಸಿಯುತ್ತಿರುವ ವೀಡಿಯೊಗಳನ್ನು ಸೆರೆಹಿಡಿದಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಆಗುವಾನ್-ಸುಲ್ತಂಗಂಜ್ ಸೇತುವೆಯು ಕೆಲವೇ ಸೆಕೆಂಡುಗಳಲ್ಲಿ ಬಿದ್ದುಹೋಯಿತು. ನಿತೀಶಕುಮಾರ ಅವರ ಕನಸಿನ ಯೋಜನೆಯಾಗಿದ್ದ 1,710 ಕೋಟಿ ರೂಪಾಯಿ ವೆಚ್ಚದ ಸೇತುವೆಯ ಸುಮಾರು … Continued

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ನಾಳೆ, ನಾಡಿದ್ದು ಪ್ರತಿಭಟನೆ

ಬೆಂಗಳೂರು : ರಾಜ್ಯ ಸರ್ಕಾರದ ಮೂರು ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಸೋಮವಾರ ಮತ್ತು ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು, ಭಾನುವಾರ (ಜೂನ್ 4) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಮೂರು ಗೊಂದಲದ ನಿರ್ಧಾರಗಳನ್ನು ವಾಪಸ್ ಪಡೆಯಲು … Continued

ಒಡಿಶಾ ರೈಲು ಅಪಘಾತ : ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು

ನವದೆಹಲಿ: 275 ಜನರ ಸಾವು ಮತ್ತು 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಒಡಿಶಾ ರೈಲ್ವೆ ಅಪಘಾತದ ತನಿಖೆಯನ್ನು ರೈಲ್ವೆ ಮಂಡಳಿಯು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಶಿಫಾರಸು ಮಾಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಇಂದು, ಭಾನುವಾರ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ, ಟ್ರ್ಯಾಕ್‌ಗೆ … Continued

ಅಂಕೋಲಾ: ಸಂಶಯಕ್ಕೆ ಕಾರಣವಾದ ಗೋಡೆಗೆ ಅಂಟಿಸಿದ ಚಿತ್ರ-ವಿಚಿತ್ರ ಬರಹದ ಪೋಸ್ಟರುಗಳು…!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಬಜಾರದ ನಾಲ್ಕು ರಸ್ತೆ ಕೂಡಿದ ಚಿಕನ್ ಅಂಗಡಿಯ ಪಕ್ಕದ ಸ್ಪೋರ್ಟ್ಸ್ ಅಂಗಡಿಯ ಗೋಡೆಗೆ ಮೂರು ಪೋಸ್ಟರಗಳನ್ನು ಅಂಟಿಸಲಾಗಿದೆ. ಬೆಳಿಗ್ಗೆ ಹಲವರು ಇದನ್ನು ಗಮನಿಸಿದ್ದಾರೆ ಬಿಳಿ ಗಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್ ನಿಂದ ಈ ಬರಹಗಳನ್ನು ಬರೆಯಲಾಗಿದೆ. ಈ ಬರಹಗಳನ್ನು ಯಾರು ಬರೆದು ಅಂಟಿಸಿದ್ದಾರೆಂಬುದು ಗೊತ್ತಾಗಿಲ್ಲ. ಇಂಗ್ಲಿಷ್ ನಲ್ಲಿ … Continued

ಅಬುಧಾಬಿಯ ‘ಬಿಗ್ ಟಿಕೆಟ್’ ಲಾಟರಿಯಲ್ಲಿ 45 ಕೋಟಿ ರೂ. ಗೆದ್ದ ಕೇರಳದ ನರ್ಸ್ ..!

ತಿರುವನಂತಪುರಂ: ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಒಬ್ಬರು ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ಯುಎಇ ದಿರ್ಹಮ್ (ಸುಮಾರು 45 ಕೋಟಿ ರೂ.) ಗೆದ್ದಿದ್ದಾರೆ. ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಲವ್‌ ಮೋಲ್ ಅಚ್ಚಮ್ಮಾ ಈ ಬಹುಮಾನ ಗೆದ್ದಿದ್ದಾರೆ. ತನ್ನ ಕುಟುಂಬದೊಂದಿಗೆ ಅವರು ಕಳೆದ 21 ವರ್ಷಗಳಿಂದ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರ … Continued

ಕಿರುಕುಳ ಆರೋಪದ ಮೇಲೆ ಜ್ಞಾನವಾಪಿ ಪ್ರಕರಣಗಳಿಂದ ಹಿಂದೆ ಸರಿಯಲು ನಿರ್ಧರಿಸಿದ ಹಿಂದೂ ಅರ್ಜಿದಾರರು

ವಾರಾಣಸಿ: ‘ಕಿರುಕುಳ’ ಆರೋಪದ ಕಾರಣದಿಂದ ತಾನು ಮತ್ತು ತನ್ನ ಕುಟುಂಬ ಗ್ಯಾನವಾಪಿ ಮಸೀದಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಂದ ಹಿಂದೆ ಸರಿಯುತ್ತಿರುವುದಾಗಿ ಹಿಂದೂ ಪಕ್ಷದ ಪ್ರಮುಖ ದಾವೆದಾರರಲ್ಲಿ ಒಬ್ಬರಾದ ಜಿತೇಂದ್ರ ಸಿಂಗ್ ವಿಸೇನ್ ಪ್ರಕಟಿಸಿದ್ದಾರೆ. ಅವರ ವಕೀಲ ಶಿವಂ ಗೌರ್ ಕೂಡ ಪ್ರಕರಣಗಳಿಂದ ಹಿಂದೆ ಸರಿದಿದ್ದರು. “ನಾನು ಮತ್ತು ನನ್ನ ಕುಟುಂಬ (ಪತ್ನಿ ಕಿರಣ್ ಸಿಂಗ್ ಮತ್ತು … Continued

ನಿಧಿ ಆಸೆಗಾಗಿ ಶಿವಲಿಂಗವನ್ನೇ ಕಿತ್ತ ದುಷ್ಕರ್ಮಿಗಳು

ಕಲಬುರುಗಿ : ನಿಧಿ ಆಸೆಗಾಗಿ ದುಷ್ಕರ್ಮಿಗಳು ದೇಗುಲದಲ್ಲಿ ಶಿವಲಿಂಗವನ್ನೇ ಕಿತ್ತು ಹಾಕಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವಲಯದ ನಡೆದ ವರದಿಯಾಗಿದೆ. ಕಳೆದ ರಾತ್ರಿ ಎನ್. ಸೂಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಮಲ್ಲಿಕಾರ್ಜುನ ದೇವಸ್ಥಾನದಲ್ಲಿರುವ ಶಿವಲಿಂಗದ ಅಡಿಭಾಗದಲ್ಲಿ ನಿಧಿ ಇರಬಹುದು ಎಂಬ ದುರಾಸೆಯಲ್ಲಿ ದುಷ್ಕರ್ಮಿಗಳು ಶಿವಲಿಂಗವನ್ನು ಕಿತ್ತು … Continued