ಜಾರಿ ಬಿದ್ದ ಸಾಲುಮರದ ತಿಮ್ಮಕ್ಕ ; ಆಸ್ಪತ್ರೆಗೆ ದಾಖಲು

ಬೆಂಗಳೂರು: ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರು ಭಾನುವಾರ (ಆಗಸ್ಟ್ 6) ಸಂಜೆ ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದು ತಕ್ಷಣವೇ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾರಿ ಬಿದ್ದಿರುವ ತಿಮ್ಮಕ್ಕ ಅವರಿಗೆ ಬೆನ್ನು ಮೂಳೆಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸಾಲುಮರದ ತಿಮ್ಮಕ್ಕ ಅವರಿಗೆ 112 ವರ್ಷವಾಗಿದೆ. ಅವರ ಬೆನ್ನಿನ ಭಾಗಕ್ಕೆ … Continued

ಪಾಕಿಸ್ತಾನದಲ್ಲಿ ರೈಲಿನ ಬೋಗಿಗಳು ಹಳಿತಪ್ಪಿ 33 ಮಂದಿ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ

ರೈಲು ಹಳಿತಪ್ಪಿ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್‌ನ 10 ಬೋಗಿಗಳು ಪಲ್ಟಿಯಾದ ನಂತರ ಪಾಕಿಸ್ತಾನದಲ್ಲಿ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ ಮತ್ತು 80 ಮಂದಿ ಗಾಯಗೊಂಡಿದ್ದಾರೆ. ಶಹಜಾದ್‌ಪುರ ಮತ್ತು ನವಾಬ್‌ಶಾ ನಡುವಿನ ಸಹಾರಾ ರೈಲು ನಿಲ್ದಾಣದ ಬಳಿ ಭಾನುವಾರ ಅಪಘಾತ ಸಂಭವಿಸಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ. ಹಜಾರಾ ಎಕ್ಸ್‌ಪ್ರೆಸ್ ಕರಾಚಿಯಿಂದ ರಾವಲ್ಪಿಂಡಿಗೆ ಹೊರಟಿತ್ತು. … Continued

ಮಣಿಪುರದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಮಿತ್ರಪಕ್ಷ

ಗುವಾಹತಿ: ಮೂರು ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಮಣಿಪುರದ ಎನ್ ಬಿರೇನ್ ಸಿಂಗ್ ಸರ್ಕಾರವು ಭಾನುವಾರ ತನ್ನ ಮಿತ್ರ ಪಕ್ಷವೊಂದನ್ನು ಕಳೆದುಕೊಂಡಿದೆ. ಇಬ್ಬರು ಶಾಸಕರನ್ನು ಹೊಂದಿರುವ ಕುಕಿ ಪೀಪಲ್ಸ್ ಅಲಯನ್ಸ್ ಪಕ್ಷವು ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರಿಗೆ ಪತ್ರ ಬರೆದು ಬೆಂಬಲ ಹಿಂಪಡೆಯುವುದಾಗಿ ತಿಳಿಸಿದೆ. ಈ ಕ್ರಮವು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ … Continued

ಅಪ್ರಾಪ್ತ ಬಾಲಕರ ಗುದದ್ವಾರಕ್ಕೆ ಮೆಣಸಿನ ಕಾಯಿ ಹಾಕಿ ಚಿತ್ರಹಿಂಸೆ : 6 ಮಂದಿ ಬಂಧನ

ಲಕ್ನೋ : ಇಬ್ಬರುಅಪ್ರಾಪ್ತ ಬಾಲಕರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಸೆರೆಹಿಡಿದು ಚಿತ್ರಹಿಂಸೆ ನೀಡಿದ ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. 10-15 ವರ್ಷದ ಅಪ್ರಾಪ್ತ ಬಾಲಕರು ಕಳ್ಳತನ ಮಾಡಿದ್ದಾರೆ ಎಂದು ಸ್ಥಳೀಯ ಗೂಂಡಾಗಳು ಬಾಲಕರನ್ನು ಸೆರೆ ಹಿಡಿದಿದ್ದಾರೆ. ಬಳಿಕ ಗೂಂಡಾಗಳು ಹುಡುಗರನ್ನು ಕಟ್ಟಿ ಹಾಕಿ ಹಸಿ ಮೆಣಸಿನ ಕಾಯಿಯನ್ನು ಕಚ್ಚಿ ತಿನ್ನುವಂತೆ ಬಲವಂತ … Continued

ವೀಡಿಯೊ ಕಾನ್ಫರೆನ್ಸ್‌ ಮೂಲಕ ಪಾಕಿಸ್ತಾನದ ವಧು-ರಾಜಸ್ತಾನದ ವರನ ಮದುವೆ : ಆನ್ಲೈನ್‌ ನಲ್ಲೇ ನೆರವೇರಿತು ವಿಧಿವಿಧಾನಗಳು

ಪ್ರೀತಿಗೆ ಯಾವುದೇ ಗಡಿ ತಿಳಿದಿಲ್ಲ. ಈ ಹೇಳಿಕೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ತೋರುತ್ತದೆ. ಈ ಉಲ್ಲೇಖವನ್ನು ಸಮರ್ಥಿಸುವ ಮತ್ತೊಂದು ಘಟನೆಯಲ್ಲಿ, ಪಾಕಿಸ್ತಾನಿ ವಧು ಮತ್ತು ಭಾರತೀಯ ವರ ವರ್ಚುವಲ್‌ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದ ವರ ಪಾಕಿಸ್ತಾನದಲ್ಲಿರುವ ವಧುವಿನೊಂದಿಗೆ ಮದುವೆ(ನಿಕಾಹ್‌)ಯ ಎಲ್ಲಾ ವಿಧಿವಿಧಾನಗಳನ್ನು ವರ್ಚುವಲ್‌ನಲ್ಲಿಯೇ ನೆರವೇರಿಸಿದರು. ವರದಿ ಪ್ರಕಾರ, ಖಾಜಿ … Continued

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ತಯಾರಿಸಿದ ವೃದ್ಧ ದಂಪತಿ : ಅದರ ತೂಕ, ಗಾತ್ರ ನೋಡಿದ್ರೆ ಶಾಕ್ ಆಗ್ಬೇಕು

ಅಲಿಘರ್‌ನ ಹಿರಿಯ ಕುಶಲಕರ್ಮಿಯೊಬ್ಬರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ 400 ಕೆಜಿ ತೂಕದ ಬೀಗವನ್ನು ಸಿದ್ಧಪಡಿಸಿದ್ದಾರೆ, ಶ್ರೀರಾಮ ಮಂದಿರವು ಜನವರಿ 2024ರಲ್ಲಿ ಭಕ್ತರಿಗೆ ತೆರೆಯುವ ನಿರೀಕ್ಷೆಯಿದೆ. ಭಗವಾನ್ ರಾಮನ ಭಕ್ತ, ಕೈಯಿಂದ ಮಾಡಿದ ಬೀಗಗಳಿಗೆ ಹೆಸರುವಾಸಿಯಾದ ಸತ್ಯಪ್ರಕಾಶ ಶರ್ಮಾ ಅವರು “ವಿಶ್ವದ ಅತಿದೊಡ್ಡ ಕೈಯಿಂದ ಮಾಡಿದ ಲಾಕ್” ಅನ್ನು ತಯಾರಿಸಲು ತಿಂಗಳುಗಟ್ಟಲೆ ಶ್ರಮಿಸಿದರು. ಈ ದೈತ್ಯ ಬೀಗವು … Continued

ತೆಲಂಗಾಣ: ಕವಿ, ಹೋರಾಟಗಾರ ಗದ್ದರ್ ನಿಧನ

ಹೈದರಾಬಾದ್‌ : ಕವಿ ಮತ್ತು ಹೋರಾಟಗಾರ ಗದ್ದರ್ (ಗುಮ್ಮಡಿ ವಿಠ್ಠಲ ರಾವ್) ಅವರು ಆಗಸ್ಟ್ 6 ರಂದು ಭಾನುವಾರ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಗದ್ದರ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ಗುಮ್ಮಡಿ ವಿಠ್ಠಲ ರಾವ್ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಇಂದು, ಶನಿವಾರ ಗದ್ದರ್ ಇಂದು ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ. … Continued

ಕಾರವಾರ: ಜನರ ಜೊತೆ ಬೆರೆಯುತ್ತಿದ್ದ ಕಾಡು ಹಂದಿಗೆ ಆಹಾರದಲ್ಲಿ ಸ್ಫೋಟಕ ಇಟ್ಟು ಸಾಯಿಸಿದ ದುಷ್ಕರ್ಮಿಗಳು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ಜನರೊಂದಿಗೆ ಸ್ನೇಹದಿಂದ ಇದ್ದು ಅವರು ಕೊಟ್ಟ ಆಹಾರ ತಿಂದು ಬದುಕಿದ್ದ ಕಾಡುಹಂದಿಯನ್ನು ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ವರದಿ ಪ್ರಕಾರ, ಈ ಹಂದಿ ಊರಿನಲ್ಲಿ ಜನರು ನೀಡಿದ ಆಹಾರವನ್ನ ಸೇವಿಸುತ್ತ ಜನರ ಪ್ರೀತಿ ಗಳಿಸಿತ್ತು. ಕಾಂತಾರ ಸಿನೆಮಾ … Continued

ಟೊಮೆಟೊ ಬೆಲೆ ಕಡಿಮೆ ಮಾಡಲು ಪ್ರಾರ್ಥಿಸಿ ದೇವಿಗೆ 508 ಟೊಮೆಟೊದಿಂದ ಮಾಡಿದ ವಿಶೇಷ ಹಾರ ಸಮರ್ಪಣೆ…!

ಸುಮಾರು ಎರಡು ತಿಂಗಳಿನಿಂದ ಟೊಮೆಟೋ ಬೆಲೆ ಏರಿಕೆಯಾಗುತ್ತಿದೆ. ಟೊಮೆಟೊ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಬೆಲೆ ಗಗನಕ್ಕೇರಿರುವುದರಿಂದ ಸಾಮಾನ್ಯರ ಅಡುಗೆ ಮನೆಯಿಂದ ಟೊಮೆಟೊ ಮಾಯವಾಗಿದೆ. ಮಾರುಕಟ್ಟೆಯಲ್ಲಿ ಅವುಗಳನ್ನು ನೋಡಲು ಜನರಿಗೆ ಧೈರ್ಯ ಸಾಲುತ್ತಿಲ್ಲ. ಕಿಲೋಗಟ್ಟಲೆ ಖರೀದಿ ಮಾಡುವವರು ಗ್ರಾಂ ಲೆಕ್ಕದಲ್ಲಿ ಟೊಮೊಟೊ ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಟೊಮೆಟೊ ಬೆಲೆ ಏರಿಕೆಯಿಂದ ವಿಚಿತ್ರ ಘಟನೆಗಳು … Continued

ನನ್ನ ಕೆಲಸ ಕಸಿದುಕೊಂಡ ಎಐ : ಚಾಟ್‌ಜಿಪಿಟಿ ಬಂದ ನಂತರ ನನ್ನ ಆದಾಯ 90%ರಷ್ಟು ಕುಸಿತವಾಯ್ತು ಎಂದ 22 ವರ್ಷದ ವಿದ್ಯಾರ್ಥಿನಿ

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಕ್ರಾಂತಿ ಇಲ್ಲಿದೆ ಎಂಬುದು ರಹಸ್ಯವಲ್ಲ, ಮತ್ತು ಇದು ನಿಜವಾಗಿಯೂ ಮಾನವರಿಗೆ ವರವೋ ಅಥವಾ ಶಾಪವೋ ಎಂಬ ಚರ್ಚೆಗೆ ಕಾರಣವಾಗಿದೆ. ಎಐ (AI)ನಿಂದಾಗಿ ಪ್ರಪಂಚದಾದ್ಯಂತ ಅನೇಕ ಜನರು ಎದುರಿಸುತ್ತಿರುವ ಆದಾಯದ ನಷ್ಟದ ಇನ್ನೊಂದು ಉದಾಹರಣೆಯಲ್ಲಿ, ಕೋಲ್ಕತ್ತಾದ 22 ವರ್ಷದ ವಿದ್ಯಾರ್ಥಿನಿ ತನ್ನ ಕಷ್ಟವನ್ನು ಹಂಚಿಕೊಂಡಿದ್ದಾಳೆ. ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಚಾಟ್‌ಜಿಪಿಟಿ (artificial … Continued