ಕ್ಯಾನ್ಸರ್‌ ಗುಣಪಡಿಸಬಲ್ಲ ಮಾತ್ರೆ : ಅಮೆರಿಕ ಸಂಶೋಧಕರಿಗೆ ಸಿಕ್ತು ಅತಿದೊಡ್ಡ ಯಶಸ್ಸು

ಅಮೆರಿಕದಲ್ಲಿನ ಸಂಶೋಧಕರ ತಂಡವು “ಕ್ಯಾನ್ಸರ್-ಕೊಲ್ಲುವ ಮಾತ್ರೆ”ಯೊಂದನ್ನು ಅಭಿವೃದ್ಧಿಪಡಿಸಿದೆ. ಇದು ಕ್ಯಾನ್ಸರ್‌ ರೋಗದ ಚಿಕಿತ್ಸೆಯಲ್ಲಿ ಒಂದು ಪ್ರಗತಿ ಎಂದು ನಂಬಲಾಗಿದೆ. ಅಮೆರಿಕದ ಅತಿದೊಡ್ಡ ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸಾ ಸಂಸ್ಥೆಗಳಲ್ಲಿ ಒಂದಾದ ಸಿಟಿ ಆಫ್ ಹೋಪ್‌ನ ಸಂಶೋಧಕರು ಅಭಿವೃದ್ಧಿಪಡಿಸಿದ ಮಾತ್ರೆ ಇದಾಗಿದ್ದು, ಉದ್ದೇಶಿತ ಕೀಮೋಥೆರಪಿ ಮೂಲಕ ಘನ ಗೆಡ್ಡೆಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಾಗಿದೆ. AOH1996 … Continued

166 ವರ್ಷಗಳ ನಂತರ ಭಾರತಕ್ಕೆ ಬಂದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಆಲಂ ಬೇಗ್​ ತಲೆಬುರುಡೆ…!

ಕಾನ್ಪುರ: ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ತಲೆಬುರುಡೆಯನ್ನು 166 ವರ್ಷಗಳ ನಂತರ ಭಾರತಕ್ಕೆ ತರಲಾಗಿದೆ ಎಂದು ವರದಿಯಾಗಿದೆ. ಈ ಸೈನಿಕ 1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಕುತೂಹಲಕಾರಿಯಾಗಿ, ಅವರ ತಲೆಬುರುಡೆಯನ್ನು ಬ್ರಿಟನ್‌ನಲ್ಲಿ ಅನೇಕ ವರ್ಷಗಳ ಕಾಲ ಯುದ್ಧದ ಚಿಹ್ನೆಯಾಗಿ ಇರಿಸಲಾಗಿತ್ತು. 1963 ರಲ್ಲಿ ಲಂಡನ್‌ನ ಪಬ್‌ನಲ್ಲಿ ತಲೆಬುರುಡೆ ಪತ್ತೆ: 166 ವರ್ಷಗಳ ನಂತರ … Continued

ಅಮೆರಿಕದ ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿದ್ದ ಹೈದರಾಬಾದ್ ಮಹಿಳೆಗೆ ಭಾರತಕ್ಕೆ ಮರಳಲು ನೆರವಿಗೆ ಮುಂದಾದ ಭಾರತೀಯ ದೂತಾವಾಸ

ಚಿಕಾಗೋ: ಕಳೆದ ವಾರ ಚಿಕಾಗೋ ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿದ್ದ ಹೈದರಾಬಾದ್ ಮಹಿಳೆಗೆ ಅಮೆರಿಕದ ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಶನಿವಾರ ವೈದ್ಯಕೀಯ ಮತ್ತು ಪ್ರಯಾಣದ ನೆರವಿನ ಆಫರ್‌ ನೀಡಿದೆ ಮತ್ತು ಮಹಿಳೆ ಪ್ರಯಾಣಿಸಲು”ಫಿಟ್” ಆಗಿದ್ದಾರೆ ಎಂದು ಹೇಳಿದೆ. “ನಾವು ಸೈಯದಾ ಜೈದಿ ಅವರನ್ನು ಸಂಪರ್ಕಿಸಿದ್ದೇವೆ ಮತ್ತು ವೈದ್ಯಕೀಯ ನೆರವು ಮತ್ತು ಭಾರತಕ್ಕೆ ಪ್ರಯಾಣ ಸೇರಿದಂತೆ ಅವರಿಗೆ … Continued

1984 ಸಿಖ್ ವಿರೋಧಿ ಗಲಭೆ ಪ್ರಕರಣ : ಸಿಖ್ಖರನ್ನು ಕೊಲ್ಲಲು, ಅಂಗಡಿಗಳನ್ನು ಲೂಟಿ ಮಾಡಲು ಗುಂಪಿಗೆ ಸೂಚಿಸಿದ್ದ ಜಗದೀಶ್ ಟೈಟ್ಲರ್ – ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಪ್ರತ್ಯಕ್ಷಸಾಕ್ಷಿಯ ಉಲ್ಲೇಖ

ನವದೆಹಲಿ: ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ದೆಹಲಿಯ ಗುರುದ್ವಾರ ಪುಲ್ ಬಂಗಾಶ್ ಬಳಿ ಸಿಖ್ಖರನ್ನು ಕೊಲ್ಲಲು ಗುಂಪನ್ನು ಪ್ರಚೋದಿಸಿದ್ದಾರೆ ಎಂದು ಅವರ ವಿರುದ್ಧ ಮೇ 20ರಂದು ಸಲ್ಲಿಸಿದ ಕೇಂದ್ರೀಯ ತನಿಖಾ ದಳದ ಚಾರ್ಜ್‌ಶೀಟ್ ಹೇಳಿದೆ. 39 ವರ್ಷಗಳಷ್ಟು ಹಳೆಯದಾದ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜಗದೀಶ ಟೈಟ್ಲರ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. “ಜಗದೀಶ ಟೈಟ್ಲರ್ … Continued

ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಚಂದ್ರಯಾನ-3 ಬಾಹ್ಯಾಕಾಶ ನೌಕೆ : ಇತಿಹಾಸ ನಿರ್ಮಿಸಲು ಇನ್ನಷ್ಟು ಹತ್ತಿರ

ನವದೆಹಲಿ: ಭಾರತದ ಚಂದ್ರಯಾನ-3, ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ, ಮುಂಬರುವ ದಿನಗಳಲ್ಲಿ ಭಾರತವು ಚಂದ್ರನ ಲ್ಯಾಂಡಿಂಗ್ ಗುರಿಯನ್ನು ಹೊಂದಿದ್ದು ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಕಾತರದಿಂದ ಕಾಯುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಕಕ್ಷೆಯಲ್ಲಿಡುವುದನ್ನು ಭಾರತೀಯ ಕಾಲಮಾನ ಸಂಜೆ 7 pm ನಡೆಸಲಾಯಿತು. ಬಾಹ್ಯಾಕಾಶ ನೌಕೆಯನ್ನು ಸ್ಥಿರ ಚಂದ್ರನ ಕಕ್ಷೆಗೆ ಇರಿಸಲಾಯಿತು. ಜುಲೈ 14ರಂದು … Continued

24470 ಕೋಟಿ ರೂ.ವೆಚ್ಚದಲ್ಲಿ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಗೆ ನಾಳೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ದೇಶದ 24,470 ಕೋಟಿ ಹೂಡಿಕೆಯೊಂದಿಗೆ ದೇಶದ 27 ರಾಜ್ಯಗಳ 508 ರೈಲು ನಿಲ್ದಾಣಗಳ ಮರು ಅಭಿವೃದ್ಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 6 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ರೈಲ್ವೆಯು ದೇಶಾದ್ಯಂತ ಜನರ ಆದ್ಯತೆಯ ಸಾರಿಗೆಯಾಗಿದೆ ಎಂದು ಗಮನಿಸಿದ ಪ್ರಧಾನಿ, ರೈಲ್ವೆ ನಿಲ್ದಾಣಗಳಲ್ಲಿ ವಿಶ್ವ ದರ್ಜೆಯ ಸೌಕರ್ಯಗಳನ್ನು ಒದಗಿಸುವ … Continued

ಇನ್ನೊಮ್ಮೆ ಕಳಪೆ ಊಟ ಕೊಟ್ಟರೆ ವಾರ್ಡನ್ನಿಗೆ ತಿನ್ನಿಸಿ, ಚೆನ್ನಾಗಿ ಬಾರಿಸಿ: ಶಾಸಕರ ಹೇಳಿಕೆಯ ವೀಡಿಯೊ ವೈರಲ್

ಚಿತ್ರದುರ್ಗ: ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಭೇಟಿ ನೀಡಿದ್ದ ಶಾಸಕರೊಬ್ಬರು ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದ ಊಟ-ತಿಂಡಿ ನೀಡಿದರೆ ಹಾಸ್ಟೆಲ್ ವಾರ್ಡನ್‍ನನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಚೆನ್ನಾಗಿ ಬಾರಿಸಿ’ ಎಂದು ಹೇಳಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಪ್ರಚೋದನೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, … Continued

ಬ್ರಿಟನ್ನಿನಲ್ಲಿ ಮತ್ತೊಂದು ಕೊರೊನಾ ಅಲೆಯ ಭಯಕ್ಕೆ ಕಾರಣವಾದ ಕೋವಿಡ್ ಹೊಸ ರೂಪಾಂತರಿ ‘ಎರಿಸ್’

ಎರಿಸ್ ಎಂಬ ಸಂಕೇತನಾಮದ ಮತ್ತೊಂದು ಕೋವಿಡ್ ರೂಪಾಂತರವು ಬ್ರಿಟನ್‌ನಲ್ಲಿ ಹರಡಲು ಪ್ರಾರಂಭಿಸಿದೆ, ಇದು ತಾಜಾ ಕೊರೊನಾ ವೈರಸ್ ಅಲೆಯ ಭಯಕ್ಕೆ ಕಾರಣವಾಗಿದೆ. ಬ್ರಿಟನ್‌ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ (ಯುಕೆಎಚ್‌ಎಸ್‌ಎ) ಹಿರಿಯ ಅಧಿಕಾರಿಗಳು ಎರಿಸ್ ಕೋವಿಡ್‌ ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, ಇದು ಮೇ ಅಂತ್ಯದ ವೇಳೆಗೆ ಬ್ರಿಟನ್‌ ತಲುಪಿದ ನಂತರ ಪ್ರತಿ ಏಳು ಹೊಸ ಪ್ರಕರಣಗಳಲ್ಲಿ … Continued

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆ ʼಗೃಹಜ್ಯೋತಿʼ ಚಾಲನಾ ಕಾರ್ಯಕ್ರಮಕ್ಕೆ ಶಾಸಕ ಅಜಯ ಸಿಂಗ್ ಗೈರು: ತೀವ್ರ ಚರ್ಚೆಗೆ ಗ್ರಾಸ

ಕಲಬುರಗಿ: ಶನಿವಾರ ನಗರದಲ್ಲಿ ನಡೆದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ʼಗೃಹ ಜ್ಯೋತಿʼ ಯೋಜನೆ ಚಾಲನಾ ಕಾರ್ಯಕ್ರಮಕ್ಕೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ ಸಿಂಗ್‌ ಗೈರಾಗುವ ಮೂಲಕ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಲಬುರಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ಗೃಹ ಜ್ಯೋತಿ … Continued

ಹಿಂಸಾಚಾರ ಪೀಡಿತ ನುಹ್ ನಲ್ಲಿ 3ನೇ ದಿನವೂ ಬುಲ್ಡೋಜರ್ ಕಾರ್ಯಾಚರಣೆ : 2 ಡಜನ್ ಔಷಧ ಅಂಗಡಿಗಳು ನೆಲಸಮ

ನವದೆಹಲಿ: “ಅಕ್ರಮ” ನಿರ್ಮಾಣದ ವಿರುದ್ಧ ಹರಿಯಾಣದ ನುಹ್ ಜಿಲ್ಲಾಡಳಿತದ ಕ್ರಮ ಮೂರನೇ ದಿನವೂ ಮುಂದುವರೆದಿದ್ದು, ಶನಿವಾರ ಬೆಳಿಗ್ಗೆ ಸುಮಾರು ಎರಡು ಡಜನ್ ಮೆಡಿಕಲ್ ಸ್ಟೋರ್‌ಗಳು ಮತ್ತು ಇತರ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. ಹಿಂಸಾಚಾರ ಪೀಡಿತ ನುಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಟೌರುನಲ್ಲಿ ವಾಸಿಸುತ್ತಿದ್ದ ವಲಸಿಗರ ಗುಡಿಸಲುಗಳನ್ನು ಅವರು ಗುರುವಾರ ಸಂಜೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಕ್ಕಾಗಿ ನೆಲಸಮಗೊಳಿಸಲಾಗಿತ್ತು. … Continued