ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರದೀಪ್ ಸಿಂಗ್ ವಘೇಲಾ ರಾಜೀನಾಮೆ

ಅಹಮದಾಬಾದ್‌: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಗುಜರಾತ್ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉನ್ನತ ನಾಯಕ ಪ್ರದೀಪ್‌ಸಿಂಗ್ ವಘೇಲಾ ಹೇಳಿದ್ದಾರೆ. ಅವರು 2016ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ದಕ್ಷಿಣ ಗುಜರಾತ್‌ನಲ್ಲಿ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ ವಿರುದ್ಧ ಬಂಡಾಯದ ವರದಿಗಳ ನಡುವೆ ಈ … Continued

ತೋಷಖಾನಾ ಪ್ರಕರಣ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ 3 ವರ್ಷ ಜೈಲು ಶಿಕ್ಷೆ

ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪಿಟಿಐ ಅಧ್ಯಕ್ಷರನ್ನು ಅವರ ಜಮಾನ್ ಪಾರ್ಕ್ ಮನೆಯಲ್ಲಿ ಬಂಧಿಸಲಾಗಿದೆ ಎಂದು ಅವರ ಪಕ್ಷವು ಟ್ವೀಟ್‌ನಲ್ಲಿ ತಿಳಿಸಿದೆ. ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಶನಿವಾರ ತೋಷಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು “ಭ್ರಷ್ಟ ಅಭ್ಯಾಸಗಳ” ತಪ್ಪಿತಸ್ಥ ಎಂದು … Continued

ಕುಮಟಾ: ಕುತೂಹಲಕ್ಕೆ ಕಾರಣವಾದ ಕಡಲತೀರದಲ್ಲಿ ಪತ್ತೆಯಾದ ಸಿಲಿಂಡರ್ ರೂಪದ ವಸ್ತು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಗ್ರಾಮದ ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತುವೊಂದು ಪತ್ತೆಯಾಗಿದೆ. ಇದು ಸ್ಥಳೀಯರಲ್ಲಿ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಭಾರೀ ಗಾತ್ರದ ಸಿಲಿಂಡರ್ ರೂಪದ ವಸ್ತು ತೇಲಿ ಬಂದು ಸಮುದ್ರ ತೀರಲ್ಲಿ ಬಿದ್ದಿತ್ತು. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕರಾವಳಿ ಕಾವಲು ಪಡೆಯ … Continued

ಶಿರಸಿ: ಗದ್ದೆಗೆ ಉರುಳಿದ ಬಸ್‌, ಹಲವರಿಗೆ ಗಾಯ

ಶಿರಸಿ : ಕುಮಟಾ-ಶಿರಸಿ ರಸ್ತೆಯ ಹನುಮಂತಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗದ್ದೆಗೆ ಪಲ್ಟಿಯಾದ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ ಎಂದು ವರದಿಯಾಗಿದೆ. ಬಸ್‌ ಮಂಗಳೂರಿನಿಂದ ಕುಷ್ಟಗಿಗೆ ಹೋಗುತ್ತಿತ್ತು. ಹನುಮಂತಿ ಬಳಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ … Continued

ಹೃದಯಸ್ಪರ್ಶಿ ಕ್ಷಣ….: ಗೋವು ಪ್ರೀತಿಯಿಂದ ನಾಗರಹಾವಿನ ಹೆಡೆ ನೆಕ್ಕುತ್ತಿರುವ ಅಪರೂಪದ ವೀಡಿಯೊ ವೈರಲ್ ; ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಗೋವು ಮತ್ತು ನಾಗರಹಾವಿನ ನಡುವೆ ನಿರ್ಮಲ ಪ್ರೀತಿಯ ಅಪರೂಪದ ದೃಶ್ಯದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದು ಅಸಂಭವ ಜೋಡಿಯಾದ ಹಸು ಮತ್ತು ನಾಗರ ನಡುವಿನ ಅನಿರೀಕ್ಷಿತ ಪ್ರೀತಿಯ ಅಸಾಧಾರಣ ಕ್ಷಣವನ್ನು ಸೆರೆಹಿಡಿದಿದೆ. ಸದಾ ಆಸಕ್ತಿಕರ ದೃಶ್ಯಗಳನ್ನು ಹಂಚಿಕೊಳ್ಳುವ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ … Continued

ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳ ಆಮದು ನಿರ್ಬಂಧ ಜಾರಿ ನಿರ್ಧಾರ ಮುಂದೂಡಿದ ಸರ್ಕಾರ

ನವದೆಹಲಿ: ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಆಮದುಗಳನ್ನು ನಿಷೇಧಿಸುವ ಯೋಜನೆಯನ್ನು ಸರ್ಕಾರ ಮೂರು ತಿಂಗಳ ಕಾಲ ಮುಂದೂಡಿದೆ. ಸಾಧನಗಳನ್ನು ಆಮದು ಮಾಡಿಕೊಳ್ಳಲು ಪರವಾನಗಿ ಪಡೆಯಲು ಕಂಪನಿಗಳಿಗೆ ಅಕ್ಟೋಬರ್ 31 ರವರೆಗೆ ಸಮಯವಿರುತ್ತದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಆಮದು ಸರಕುಗಳನ್ನು ಪರವಾನಗಿ ಇಲ್ಲದೆ ಅಕ್ಟೋಬರ್ 31 ರವರೆಗೆ ತೆರವುಗೊಳಿಸಬಹುದು ಮತ್ತು ನವೆಂಬರ್ 1 ರಿಂದ ಸರ್ಕಾರದ ಅನುಮತಿ … Continued

ಕಾಶ್ಮೀರ : ಕುಲ್ಗಾಮ್‌ನಲ್ಲಿ ಭಯೋತ್ಪಾದಕರ ಜತೆ ಎನ್‌ಕೌಂಟರ್‌ ವೇಳೆ 3 ಸೇನಾ ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಮೂವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹಾಲನ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾದ ಸೇನಾ ಸಿಬ್ಬಂದಿಯಿಂದ … Continued

ಐವರು ಪೊಲೀಸರು 2 ರೂ. ಲಂಚ ಪಡೆದ ಪ್ರಕರಣ: 37 ವರ್ಷಗಳ ನಂತರ ಬಂತು ಕೋರ್ಟ್‌ ತೀರ್ಪು…

ಪಾಟ್ನಾ : 2 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಐವರು ಪೊಲೀಸ್‌ ಸಿಬ್ಬಂದಿಯ ಮೇಲೆ ದಾಖಲಾಗಿದ್ದ ಪ್ರಕರಣದ ತೀರ್ಪು 37 ವರ್ಷಗಳ ಬಳಿಕ ಬಂದಿದೆ. ಬಿಹಾರದ ಭಾಗಲ್ಪುರದ ವಿಜಿಲೆನ್ಸ್ ನ್ಯಾಯಾಲಯವು 37 ವರ್ಷಗಳ ಕಾಲ ನಡೆದ ಪ್ರಕರಣದ ತೀರ್ಪನ್ನು ನೀಡಿದೆ. ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಎರಡು ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಧಿಕಾರಿ … Continued

ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್‌ ಪತ್ರ

ಚೆನ್ನೈ: ಕಾವೇರಿ ಜಲಾನಯನ ಪ್ರದೇಶದ ಕುರುವೈ ಬೆಳೆ ರೈತರು ಮಳೆ ಕೊರತೆ ಎದುರಿಸುತ್ತಿದ್ದು, ತಮಿಳುನಾಡಿಗೆ ನೀಡಬೇಕಾದ ಕಾವೇರಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತಮಿಳುನಾಡಿಗೆ ನಿಗದಿಪಡಿಸಿದ ನೀರಿನ ಪಾಲನ್ನು ಕರ್ನಾಟಕ … Continued

ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್ ಅವರನ್ನು ಹಿಂದಿಕ್ಕಿ ಭಾರತದ ನಂ.1 ಚೆಸ್‌ ಆಟಗಾರನಾದ 17 ವರ್ಷದ ಡಿ.ಗುಕೇಶ

ಬಾಕು (ಅಜರ್‌ಬೈಜಾನ್‌) : ಮಂಗಳವಾರ ಇಲ್ಲಿ ನಡೆದ ವಿಶ್ವಕಪ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ ಅವರು ಮಿಸ್ರದ್ದೀನ್ ಇಸ್ಕಂದರೋವ್ ವಿರುದ್ಧ ಗೆಲುವು ಸಾಧಿಸಿದ ನಂತರ ಲೈವ್ ವರ್ಲ್ಡ್ (FIDE) ಶ್ರೇಯಾಂಕದಲ್ಲಿ ತಮ್ಮ ನೆಚ್ಚಿನ ಆಟಗಾರರಾದ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ. 17ರ ಹರೆಯದ ಗುಕೇಶ ಅವರು ತಮ್ಮ ಎರಡನೇ ಸುತ್ತಿನ ಪಂದ್ಯದ … Continued