ಅಸಂಬದ್ಧ ಸಂದರ್ಶನ, ನನ್ನ ಪತ್ನಿಗೆ ಕಳಂಕ ಹಚ್ಚಬೇಡಿ: ತಂದೆ ವಿರುದ್ಧ ಸಿಡಿದ ಕ್ರಿಕೆಟಿಗ ರವೀಂದ್ರ ಜಡೇಜಾ

ನವದೆಹಲಿ: ಭಾರತದ ತಂಡದ ಕ್ರಿಕೆಟ್‌ ಆಟಗಾರ ರವೀಂದ್ರ ಜಡೇಜಾ ಅವರು ತಮ್ಮ ಹಾಗೂ ತಂದೆಯ ನಡುವಿನ ಹಳಸಿದ ಸಂಬಂಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಸಂದರ್ಶನದಲ್ಲಿ ತಮ್ಮ ಪತ್ನಿ, ಗುಜರಾತ್‌ನ ಜಾಮ್‌ನಗರದ ಬಿಜೆಪಿ ಶಾಸಕಿ ರಿವಾಬಾ ವಿರುದ್ಧ ತಂದೆ ಅನಿರುದ್ಧ ಸಿನ್ಹಾ ಜಡೇಜಾ ಮಾಡಿರುವ ಆರೋಪಗಳ ಬಗ್ಗೆ ಭಾರತ ಕ್ರಿಕೆಟ್ ತಂಡದ ಆಟಗಾರ ರವೀಂದ್ರ ಜಡೇಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ. … Continued

ಪ್ರಚೋದನಕಾರಿ ಹೇಳಿಕೆ: ಕೆ.ಎಸ್. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು

ದಾವಣಗೆರೆ: ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಹೇಳಿಕೆ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ದಾವಣಗೆರೆಯ ಬಡಾವಣೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ‘ಕೆ.ಎಸ್. ಈಶ್ವರಪ್ಪ ಅವರು ಗುರುವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಜನರ ಮಧ್ಯೆ ಗಲಭೆಗಳಾಗಿ … Continued

ನಡ್ಡಾ, ಬಿ.ಎಲ್‌. ಸಂತೋಷ ಭೇಟಿ ನಂತರ ಪ್ರಧಾನಿ ಮೋದಿ ಭೇಟಿ ಮಾಡಿದ ಸುಮಲತಾ ಅಂಬರೀಷ : ಮಂಡ್ಯ ಟಿಕೆಟ್‌ ಬಗ್ಗೆ ಚರ್ಚೆ..?

ನವದೆಹಲಿ : ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಅವರನ್ನು ಭೇಟಿಯಾಗಿದ್ದ ಸುಮಲತಾ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಂಡ್ಯ ಟಿಕೆಟ್‌ ಬಗ್ಗೆ ಮೋದಿ ಅವರ ಜೊತೆ ಸುಮಲತಾ ಚರ್ಚೆ ನಡೆಸಿದ್ದು, ಪ್ರಧಾನಿ ಟಿಕೆಟ್‌ ಭರವಸೆ … Continued

“ನಾನು ನಿಮ್ಮನ್ನು ಶಿಕ್ಷಿಸಲಿದ್ದೇನೆ….”: ಸಂಸತ್ತಿನ ಕ್ಯಾಂಟೀನ್‌ನಲ್ಲಿ ಸಂಸದರೊಂದಿಗೆ ಪ್ರಧಾನಿ ಮೋದಿ ಊಟ-ತಮಾಷೆ-ಮಾತುಕತೆ

ನವದೆಹಲಿ: ಕನಿಷ್ಠ ಎಂಟು ಸಂಸದರಿಗೆ ಶುಕ್ರವಾರ ಮಧ್ಯಾಹ್ನ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ಸಂಸತ್ತಿನಲ್ಲಿ ಭೇಟಿಯಾಗಲು ಬಯಸಿದ್ದಾರೆ ಎಂದು ಹೇಳಿದ್ದು ಅವರಿಗೆ ಅಚ್ಚರಿ ಮೂಡಿಸಿದೆ. ಸಂಸದರಲ್ಲಿ ಕೇಂದ್ರ ಸಚಿವ ಎಲ್ ಮುರುಗನ್, ಬಿಜೆಡಿ ರಾಜ್ಯಸಭಾ ಸಂಸದ ಸಸ್ಮಿತ್ ಬಾತ್ರಾ, ಲೋಕಸಭೆಯ ಹಿರಿಯ ಸಂಸದ ಎನ್‌.ಕೆ. ಪ್ರೇಮ ಚಂದ್ರನ್, ಟಿಡಿಪಿ ಸಂಸದ … Continued

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಜನರಿಗೆ ಕೋಟ್ಯಂತರ ರೂ. ವಂಚನೆ ಆರೋಪ : ದೂರು ದಾಖಲು

ಬೆಂಗಳೂರು : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್‌ಬಿಐ ಹೆಸರು ಹೇಳಿಕೊಂಡು ಬ್ಯಾಂಕ್​ಗಳಿಂದ ಸಬ್ಸಿಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರು ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಸಂಗ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬ್ಲೂ ವಿಂಗ್ಸ್ ಎಂಬ ಹೆಸರಿನ ನಕಲಿ ಟ್ರಸ್ಟ್ ಅಡಿ ಪವಿತ್ರಾ ಮತ್ತು ಆಕೆಯ ಗ್ಯಾಂಗ್ ಹಲವರಿಗೆ … Continued

ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್, ಚರಣ ಸಿಂಗ್, ವಿಜ್ಞಾನಿ ಸ್ವಾಮಿನಾಥನ್ ಗೆ ಭಾರತದ ಅತ್ಯುನ್ನತ ಪುರಸ್ಕಾರ ʼಭಾರತ ರತ್ನʼ ಘೋಷಣೆ

ನವದೆಹಲಿ : ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್ ಹಾಗೂ ಚೌಧರಿ ಚರಣ್ ಸಿಂಗ್ ಮತ್ತು ಭಾರತದ ‘ಹಸಿರು ಕ್ರಾಂತಿ’ಯ ಪಿತಾಮಹ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಸರ್ಕಾರ ಶುಕ್ರವಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ಈ ಹಿಂದೆ, ಬಿಜೆಪಿಯ ಹಿರಿಯ ರಾಜಕಾರಣಿ ಎಲ್‌.ಕೆ. ಅಡ್ವಾಣಿ ಮತ್ತು ಸಮಾಜವಾದಿ ಐಕಾನ್ ಮತ್ತು … Continued

ನಿವೃತ್ತಿಗೂ ಎರಡು ತಿಂಗಳು ಮೊದಲೇ ಐಪಿಎಸ್‌ ಅಧಿಕಾರಿ ಪ್ರತಾಪ ರೆಡ್ಡಿ ದಿಢೀರ್‌ ರಾಜೀನಾಮೆ

ಬೆಂಗಳೂರು : ಕರ್ನಾಟಕದ ಹಿರಿಯ ಐಪಿಎಸ್‌ ಅಧಿಕಾರಿ ಪ್ರತಾಪ ರೆಡ್ಡಿ ಅವರು ನಿವೃತ್ತಿಗೂ ಎರಡು ತಿಂಗಳು ಮೊದಲೇ ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರತಾಪ ರೆಡ್ಡಿ ಅವರು ಪ್ರಸ್ತುತ ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ವರ್ಷ ಮೇ ತಿಂಗಳಲ್ಲಿ ಅವರು ನಿವೃತ್ತರಾಗುತ್ತಿದ್ದರು. ಆದರೆ, ವೈಯಕ್ತಿಕ ಕಾರಣ ನೀಡಿ … Continued

ರಷ್ಯಾ-ಉಕ್ರೇನ್ ಯುದ್ಧದಿಂದ ಮನನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ರಷ್ಯಾದ ಮಹಿಳೆ: ಹೆಸರೂ ಬದಲಾಯ್ತು…!

ಎರಡು ವರ್ಷಗಳಿಂದ ತೀವ್ರವಾಗಿ ಸಾಗುತ್ತಿರುವ ಯುದ್ದದಿಂದ ಬೇಸತ್ತು ಮಾನಸಿಕ ನೆಮ್ಮದಿಯನ್ನು ಅರಸಿ ರಷ್ಯಾದ ಮಹಿಳೆಯೋರ್ವರು ಉತ್ತರ ಪ್ರದೇಶದ ವಾರಣಾಸಿಗೆ ಬಂದು ತಾಂತ್ರಿಕ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ರಷ್ಯಾ – ಉಕ್ರೇನ್ ಯುದ್ಧದಿಂದ ತುಂಬಾ ನೊಂದು ಮನಃಶಾಂತಿಯನ್ನು ಅರಸಿಕೊಂಡು ಭಾರತಕ್ಕೆ ಬಂದಿದ್ದ ನನಗೆ ದೀಕ್ಷೆ ಪಡೆದ ನಂತರ ನನ್ನ ಮನಸ್ಸು ಹಗುರವಾಗಿದೆ ಎಂದು ಇಂಗಾನಂದಮಯಿ ಹೇಳಿದ್ದಾರೆ. ರಷ್ಯಾದ ಮಾಸ್ಕೋ … Continued

ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಆಘಾತ : ಬಿಜೆಪಿ-ಆರ್‌ಎಲ್‌ಡಿ ಮೈತ್ರಿ ಅಂತಿಮ; ಉತ್ತರ ಪ್ರದೇಶದ ೨ ಲೋಕಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಡಿ ಸ್ಪರ್ಧೆ-ಮೂಲಗಳು

ಲಕ್ನೋ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ರಾಷ್ಟ್ರೀಯ ಲೋಕದಳ (RLD) ಹೆಜ್ಜೆ ಹಾಕಲಿದೆ ಎಂದು ವರದಿಗಳು ತಿಳಿಸಿವೆ. ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಲಿದ್ದು, ಭಾರತೀಯ ಜನತಾ ಪಕ್ಷವು (ಬಿಜೆಪಿ) ಆರ್‌ಎಲ್‌ಡಿಯೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. 2+1 ಸೂತ್ರವನ್ನು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ವರದಿಗಳು ತಿಳಿಸಿವೆ. 2+1 ಸೂತ್ರ   ಉಭಯ ಪಕ್ಷಗಳು … Continued

ಉತ್ತರಾಖಂಡ : ಅಕ್ರಮ ಮದರಸಾ ತೆರವು ವೇಳೆ ಹಿಂಸಾಚಾರದಲ್ಲಿ 4 ಸಾವು, 250 ಮಂದಿಗೆ ಗಾಯ ; ಕರ್ಫ್ಯೂ ಜಾರಿ, ಶಾಲೆಗಳು ಬಂದ್

ಡೆಹ್ರಾಡೂನ್‌ : ಗುರುವಾರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ. ಹಾಗೂ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲ್ದ್ವಾನಿಯ ಬನ್‌ಭೂಲ್‌ಪುರದಲ್ಲಿ “ಕಾನೂನುಬಾಹಿರವಾಗಿ ನಿರ್ಮಿಸಲಾದ” ಮದರಸಾ ಮತ್ತು ಪಕ್ಕದ ಮಸೀದಿಯನ್ನು ಕೆಡವಿದ ನಂತರ ನಿವಾಸಿಗಳು ವಾಹನಗಳು ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ ನಂತರ ಅಧಿಕಾರಿಗಳು ಕರ್ಫ್ಯೂ ವಿಧಿಸಿದರು. ಆಸ್ಪತ್ರೆಗೆ … Continued