ಬಿಜೆಪಿ ಹಿರಿಯ ನಾಯಕ- ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲಕುಮಾರ ಮೋದಿ ನಿಧನ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲಕುಮಾರ ಮೋದಿ ಅವರು ಸೋಮವಾರ ಸಂಜೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್‌)ಯಲ್ಲಿ ನಿಧನರಾದರು. 72 ವರ್ಷದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಏಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಒಂದು ಕಾಲದಲ್ಲಿ ಬಿಹಾರದಲ್ಲಿ ಬಿಜೆಪಿಯ ಚಿರಪರಿಚಿತ ಮುಖವಾಗಿದ್ದ ಧೀಮಂತ … Continued

ಮುಂಬೈ : ಧೂಳಿನ ಬಿರುಗಾಳಿಗೆ 100 ಅಡಿ ಎತ್ತರದ ಬೃಹತ್‌ ಹೋರ್ಡಿಂಗ್ ಬಿದ್ದು 8 ಮಂದಿ ಸಾವು, 64 ಜನರಿಗೆ ಗಾಯ

ಮುಂಬೈ : ಇಂದು, ಸೋಮವಾರ ಸಂಜೆ ಮುಂಬೈನ ಘಾಟ್‌ಕೋಪರ್‌ನಲ್ಲಿ ಬಲವಾದ ಧೂಳಿನ ಬಿರುಗಾಳಿಗೆ ಸಿಲುಕಿ ಪೆಟ್ರೋಲ್‌ ಬಂಕ್‌ ಮೇಲೆ ಕುಸಿದುಬಿದ್ದ ಬೃಹತ್ ಜಾಹೀರಾತು ಫಲಕದ ಅವಶೇಷಗಳ ಅಡಿಯಲ್ಲಿ ಹತ್ತಾರು ಜನರು ಸಿಲುಕಿರುವ ಆತಂಕವಿದೆ. ಈ ಘಟನೆಯಲ್ಲಿ 8 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ 04:30 ರ … Continued

ವಿಧಾನ ಪರಿಷತ್ ಚುನಾವಣೆ : ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ; ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್‌

ಉಡುಪಿ : ವಿಧಾನ ಪರಿಷತ್‌ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ತೀರ್ಮಾನಿಸಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಅವರು ಕರಂಬಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತೇನೆ. ಸೋತರೂ … Continued

ಮಹಿಳೆ ಅಪಹರಣ ಪ್ರಕರಣ : ಶಾಸಕ ಎಚ್‌.ಡಿ. ರೇವಣ್ಣಗೆ ಜಾಮೀನು ಮಂಜೂರು

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಜಹಾಗೂ ಜೆಡಿಎಸ್‌ ಶಾಸಕ ಎಚ್‌.ಡಿ ರೇವಣ್ಣ (HD Revanna) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇಂದು ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೆ ಕೋರ್ಟ್‌ ಸುಧೀರ್ಘ ವಿಚಾರಣೆ ನಡೆಸಿ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಜಾಮೀನು ಮಂಜೂರು ಮಾಡಿದೆ. ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ … Continued

ವೀಡಿಯೊ..| ಲೋಕಸಭಾ ಚುನಾವಣೆ : ಮತಗಟ್ಟೆಯಲ್ಲಿ ಮತದಾರನ ಕೆನ್ನೆಗೆ ಬಾರಿಸಿದ ಶಾಸಕ ; ತಿರುಗಿ ಬಾರಿಸಿದ ಮತದಾರ…ಮುಂದಾಗಿದ್ದೇನೆಂದರೆ….

ಹೈದರಾಬಾದ್: ವಿಐಪಿ ಸಂಸ್ಕೃತಿಯ ಅಣಕು  ಪ್ರದರ್ಶನದಲ್ಲಿ ಇಂದು, ಸೋಮವಾರ ಬೆಳಗ್ಗೆ ಗುಂಟೂರು ಜಿಲ್ಲೆಯ ಮತಗಟ್ಟೆಯಲ್ಲಿ ಶಾಸಕರು ಸರತಿ ಸಾಲಿನಲ್ಲಿ ನಿಲ್ಲದೆ ಅದನ್ನು ಬ್ರೇಕ್‌ ಮಾಡಿ ಮುಂದೆ ಹೋಗಿದ್ದನ್ನು ಪ್ರಶ್ನಿಸಿದ ಮತದಾರರೊಬ್ಬರಿಗೆ ಆಂಧ್ರಪ್ರದೇಶದ ಶಾಸಕರೊಬ್ಬರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತೆನಾಲಿಯ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಎ. ಶಿವಕುಮಾರ ಅವರು … Continued

ವೀಡಿಯೊಗಳು : ಪೇಟ ಧರಿಸಿ ಐತಿಹಾಸಿಕ ಪಾಟ್ನಾ ಗುರುದ್ವಾರದಲ್ಲಿ ಭಕ್ತರಿಗೆ ಊಟ ಬಡಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮೇ 13) ಪಾಟ್ನಾದ ಐತಿಹಾಸಿಕ ತಖತ್ ಶ್ರೀ ಹರಿಮಂದಿರ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದರು ಮತ್ತು ಸಾಮೂಹಿಕ ಭೋಜನದಲ್ಲಿ ಸಿಖ್ ಭಕ್ತರಿಗೆ ಊಟ ಬಡಿಸಿದ್ದಾರೆ. ಕೇಸರಿ ಪೇಟವನ್ನು ಧರಿಸಿ ಮತ್ತು ಖೀರ್ ಪಾತ್ರೆ ಹಿಡಿದು ಆಗಮಿಸಿದ ಪ್ರಧಾನಿ ಮೋದಿ ಶ್ರೀ ಗುರು ಗೋವಿಂದ ಸಿಂಗ್ ಅವರ … Continued

ದೆಹಲಿ ಸಿಎಂ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ; ಎಎಪಿ ನಾಯಕಿ ಸ್ವಾತಿ ಮಲಿವಾಲ್ ಎಂದು ಹೇಳಿಕೊಂಡ ಮಹಿಳೆಯಿಂದ ಪೊಲೀಸರಿಗೆ 2 ಕರೆಗಳು : ಮೂಲಗಳು

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು ಸೋಮವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕ (ಪಿಎ) ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪಿಸಿಆರ್ ಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ಬೆಳಗ್ಗೆ ದೆಹಲಿ ಪೊಲೀಸರಿಗೆ ಸತತ ಎರಡು ಕರೆಗಳು ಬಂದಿದ್ದು, ಇವೆರಡೂ ಸಿವಿಲ್ … Continued

ಭಾರತ ನೀಡಿದ ವಿಮಾನ ಹಾರಿಸಲು ನಮ್ಮ ಪೈಲಟ್‌ಗಳಿಗೆ ಬರುವುದಿಲ್ಲ ಎಂದು ಒಪ್ಪಿಕೊಂಡ ಮಾಲ್ಡೀವ್ಸ್ ರಕ್ಷಣಾ ಸಚಿವ…!

ಮಾಲೆ: ಭಾರತದ ಎಲ್ಲ ರಕ್ಷಣಾ ಸಿಬ್ಬಂದಿ ದ್ವೀಪ ರಾಷ್ಟ್ರ ತೊರೆದ ಕೆಲವು ದಿನಗಳ ನಂತರ ಮಾಲ್ಡೀವ್ಸ್‌ನ ರಕ್ಷಣಾ ಸಚಿವ ಘಾಸನ್ ಮೌಮೂನ್ ಅವರು ತಮ್ಮ ಸೇನೆಯಲ್ಲಿ ಭಾರತ ನೀಡಿದ ಮೂರು ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಪೈಲಟ್‌ಗಳ ಕೊರತೆಯಿದೆ ಎಂದು ಒಪ್ಪಿಕೊಂಡಿದ್ದಾರೆ. ಭಾನುವಾರ ಮಾಲೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ಘಾಸನ್ ಮೌಮೂನ್, “ವಿಮಾನವನ್ನು ಹಾರಿಸಲು … Continued

ಕುಮಟಾ : ‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮದಲ್ಲಿ ಪಂ.ಗಣಪತಿ ಭಟ್ಟ ಹಾಸಣಗಿಗೆ ʼಸೌರಭ ರಾಷ್ಟ್ರೀಯ ಸಮ್ಮಾನ್‌ʼ ಪ್ರದಾನ

ಕುಮಟಾ : ಸೌರಭ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮದಲ್ಲಿ ತಾನಸೇನ್ ಪ್ರಶಸ್ತಿ ಪುರಸ್ಕೃತ ಹಿಂದುಸ್ತಾನೀ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ ಅವರಿಗೆ ʼಸೌರಭ ರಾಷ್ಟ್ರೀಯ ಸಮ್ಮಾನʼ ಪುರಸ್ಕಾರ ನೀಡಿ ಗೌರವಿಸಲಾಯಿತು. ‘ರಜತ ಸಂಭ್ರಮ ಸೌರಭ’ ಕಾರ್ಯಕ್ರಮದ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾ ಭವನದಲ್ಲಿ ಭಾನುವಾರ ದಿನವಿಡೀ … Continued

ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್ : ಸಂತ್ರಸ್ತ ಮಹಿಳೆ ವೀಡಿಯೊ ವೈರಲ್‌

ಹಾಸನ: ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿರುವ ಮಹಿಳೆ ಕಿಡ್ನಾಪ್ ಪ್ರಕರಣಕ್ಕೆ (Kidnap Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪಹರಣಗೊಂಡ ಸಂತ್ರಸ್ತೆಯದ್ದು ಎನ್ನಲಾದ ವೀಡಿಯೊ ಈಗ ಹೊರಬಿದ್ದಿದೆ. ಸಂತ್ರಸ್ತೆಯದ್ದು ಎನ್ನಲಾದ ವೀಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮಹಿಳೆ “ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ” ಎಂದು ಹೇಳಿದ್ದಾಳೆ. ಆದರೆ ಈ ವೀಡಿಯೊ … Continued