ವೀಡಿಯೊ | ರೆಸ್ಟೋರೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಜನರು

ನವದೆಹಲಿ: ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಸೋಮವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ.
ರಾಜೌರಿ ಗಾರ್ಡನ್‌ನಲ್ಲಿರುವ ಜಂಗಲ್ ಜಾಂಬೋರಿ ರೆಸ್ಟೋರೆಂಟ್‌ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಭಯಭೀತರಾದ ಜನರು ಹತ್ತಿರದ ಕಟ್ಟಡದ ಛಾವಣಿಗೆ ಹಾರಿ ಬಚಾವ್‌ ಆಗಿದ್ದಾರೆ. ಗಾಯವಾದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು 10 ಅಗ್ನಿಶಾಮಕ ವಾಹನ ಕರೆಸಲಾಯಿತು.

“ರಜೌರಿ ಗಾರ್ಡನ್ ಮೆಟ್ರೋ ನಿಲ್ದಾಣದ ಬಳಿಯಿರುವ ಜಂಗಲ್ ಜಾಂಬೋರಿ ರೆಸ್ಟೋರೆಂಟ್‌ನಲ್ಲಿ ಮಧ್ಯಾಹ್ನ 2.01 ಕ್ಕೆ ನಮಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲು 10 ಅಗ್ನಿಶಾಮಕ ಟೆಂಡರ್‌ಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದೆ” ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗಾರ್ಗ ಹೇಳಿದ್ದಾರೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಬೆಂಕಿ ಅನಾಹುತಕ್ಕೆ ಕಾರಣ ಇದುವರೆಗೆ ದೃಢಪಟ್ಟಿಲ್ಲ. ದಟ್ಟ ಹೊಗೆ ಆವರಿಸಿದ್ದು, ಅಂಗಡಿಕಾರರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದರು.

“ಅದು ಮಧ್ಯಾಹ್ನ 2 ಗಂಟೆಯ ವೇಳೆಗೆ, ಜಂಗಲ್ ಜಾಂಬೋರಿ ರೆಸ್ಟೋರೆಂಟ್‌ನಿಂದ ಕಪ್ಪು ಹೊಗೆಯನ್ನು ಅನೇಕ ಅಂಗಡಿಕಾರರು ವೀಕ್ಷಿಸಿದರು. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇವೆ. 25 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹತ್ತಿರದ ಕಟ್ಟಡದ ಟೆರೇಸ್‌ಗೆ ಜಂಪ್‌ ಮಾಡಿದ್ದಾರೆ ”ಎಂದು ಅಂಗಡಿಯ ಮಾಲೀಕ ಘನಶ್ಯಾಮ ಅಗರ್ವಾಲ್ ಹೇಳಿದರು.

ಕಟ್ಟಡವು ನೆಲ ಮಹಡಿಯಲ್ಲಿ ಹಲವಾರು ಅಂಗಡಿಗಳನ್ನು ಹೊಂದಿದೆ, ಜಂಗಲ್ ಜಾಂಬೋರಿ (ಮುಚ್ಚಲಾಗಿದೆ) ಎಂಬ ಹೆಸರಿನ ರೆಸ್ಟೋರೆಂಟ್ ಮತ್ತು ಇನ್ನೊಂದು ಮಹಡಿಯಲ್ಲಿ ಮ್ಯಾಕ್‌ (MAAC) ರಜೌರಿ ಎಂಬ ಸಂಸ್ಥೆ ಇದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. “ನೆಲ ಅಂತಸ್ತಿನ ಸಂಸ್ಥೆಗಳಲ್ಲಿ ಹಾನಿ ಕಡಿಮೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಘಟನೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪಕ್ಕದ ಕಟ್ಟಡಕ್ಕೆ ಜಿಗಿದಿದ್ದಾರೆ. ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಆವರಣದಲ್ಲಿದ್ದ ಎಲ್ಲ ಜನರ ಮಾಹಿತಿಯನ್ನು ನೀಡುವಂತೆ ಸಂಸ್ಥೆಗಳ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement