ಭಾರತದ ಕಠಿಣ ಎಚ್ಚರಿಕೆಯ ನಂತರ 9 ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಿಂದ ‘ಗ್ರೀನ್ ಪಾಸ್’ಗೆ ಕೋವಿಶೀಲ್ಡ್ ಲಸಿಕೆ ಸ್ವೀಕಾರ..!

ನವದೆಹಲಿ: ಒಂಭತ್ತು ಯುರೋಪಿಯನ್ ರಾಷ್ಟ್ರಗಳು ತಮ್ಮ ದೇಶಗಳಿಗೆ ಪ್ರಯಾಣಿಸಲು ಕೋವಿಶೀಲ್ಡ್ ಅನ್ನು ಸ್ವೀಕರಿಸಲು ಒಪ್ಪಿಕೊಂಡಿವೆ. ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್ ಮತ್ತು ಸ್ಪೇನ್ ದೇಶಗಳು ಕೋವಿಶೀಲ್ಡ್ ಡೋಸುಗಳನ್ನು ತೆಗೆದುಕೊಂಡ ಜನರಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಸ್ವಿಟ್ಜರ್ಲೆಂಡ್ ಭಾರತೀಯರಿಗೆ ಟ್ರಾವೆಲ್ ಪಾಸಿನಲ್ಲಿ ಗ್ರೀನ್ ಪಾಸ್’ನಲ್ಲಿ ಔಷಧಿಯನ್ನು ಸೇರಿಸಿದೆ.
ಕೋವಿನ್ ಪೋರ್ಟಲ್ ಮೂಲಕ ನೀಡಲಾದ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸ್ವೀಕರಿಸುವಂತೆ ಭಾರತವು ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ವಿನಂತಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ತೆಗೆದುಕೊಂಡ ಮತ್ತು ಯುರೋಪಿಗೆ ಪ್ರಯಾಣಿಸಲು ಬಯಸುವ ಭಾರತೀಯರಿಗೆ ಅವಕಾಶ ನೀಡುವುದನ್ನು ಪ್ರತ್ಯೇಕವಾಗಿ ಪರಿಗಣಿಸಲು ಭಾರತ 27 ರಾಷ್ಟ್ರಗಳ ಗುಂಪಿನ ಸದಸ್ಯರನ್ನು ಕೇಳಿದೆ ಎಂದು ವರದಿಗಳು ತಿಳಿಸಿವೆ.
ಅಲ್ಲದೆ, ನವದೆಹಲಿ ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಪರಸ್ಪರ ನೀತಿಯನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿತು ಮತ್ತು ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಗುರುತಿಸುವ ವಿನಂತಿಯನ್ನು ಗಮನದಲ್ಲಿರಿಸಿಕೊಂಡು ‘ಗ್ರೀನ್ ಪಾಸ್’ ಹೊಂದಿರುವ ಯುರೋಪಿಯನ್ ಪ್ರಜೆಗಳಿಗೆ ಭಾರತವು ತನ್ನಲ್ಲಿ ಬರುವವರಿಗೆ ಕಡ್ಡಾಯ ಕ್ಯಾರೆಂಟೈನ್‌ನಿಂದ ವಿನಾಯಿತಿ ನೀಡುತ್ತದೆ ಎಂದು ತಿಳಿಸಿತು.
ಯುರೋಪಿಯನ್ ಒಕ್ಕೂಟದ ತನ್ನ ‘ಗ್ರೀನ್ ಪಾಸ್’ ಯೋಜನೆಯಡಿ ಪ್ರಯಾಣ ನಿರ್ಬಂಧವನ್ನು ಸಡಿಲಿಸುವುದಾಗಿ ಘೋಷಿಸಿದೆ. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಮುಕ್ತ ಚಲನೆಗೆ ಅನುಕೂಲವಾಗುವ ಉದ್ದೇಶದಿಂದ ಇಇಯ ಡಿಜಿಟಲ್ ಕೋವಿಡ್‌ ಪ್ರಮಾಣಪತ್ರ ಅಥವಾ “ಗ್ರೀನ್ ಪಾಸ್” ಅನ್ನು ಗುರುವಾರ ಹೊರತರಲಾಗುತ್ತದೆ. ಈ ಚೌಕಟ್ಟಿನಡಿಯಲ್ಲಿ, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ನಿಂದ ಅಧಿಕೃತ ಲಸಿಕೆಗಳನ್ನು ತೆಗೆದುಕೊಂಡ ವ್ಯಕ್ತಿಗಳಿಗೆ ಇಯು ಪ್ರದೇಶದ ಪ್ರಯಾಣ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

5 / 5. 2

ಶೇರ್ ಮಾಡಿ :

  1. Girish Shabadi

    ಸರ್, ಸುದ್ದಿ ಚೆನ್ಮಾಗಿದೆ… ಆದರೆ ಹೆಡಲೈನ್ಸನಲ್ಲಿ ಭಾರತ ಎಂಬ ಪದ ಎರಡು ಬಾರಿ ಬಳಕೆ ಆಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement