ವೀಡಿಯೊ | ಧೈರ್ಯ ಅಂದ್ರೆ ಇದಪ್ಪ..: ಪಿಸ್ತೂಲ್‌ ಹಿಡಿದು ಚಿನ್ನದ ಅಂಗಡಿ ಲೂಟಿಗೆ ನುಗ್ಗಿದ್ದ 4 ದರೋಡೆಕೋರರನ್ನು ಹೆದರಿಸಿದ ಒಬ್ಬನೇ ಒಬ್ಬ..!

ಮುಂಬೈ : ಬುಧವಾರ ಥಾಣೆ ನಗರದ ಆಭರಣ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿದ್ದ ನಾಲ್ವರು ಶಸ್ತ್ರ ಸಜ್ಜಿತ ದರೋಡೆಕೋರರನ್ನು ಕೆಚ್ಚೆದೆಯ ಅಂಗಡಿ ಮಾಲೀಕ ಎದುರಿಸಿ ದರೋಡೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಅಂಗಡಿಲ್ಲಿ ತಾವೊಬ್ಬರೇ ಇದ್ದರೂ ಹೆದರದೆ ಪಿಸ್ತೂಲು ಹಿಡಿದು ಬಂದಿದ್ದ ನಾಲ್ವರು ದರೋಡೆಕೋರರನ್ನು ಎದುರಿಸಿ ಅವರನ್ನು ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ. ದರೋಡೆಕೋರರು ಎರಡು ಮೋಟಾರ್ ಸೈಕಲ್‌ಗಳಲ್ಲಿ ಅಂಗಡಿಗೆ ಬಂದಿದ್ದರು. … Continued