ತುಂಗಭದ್ರಾ ನದಿಗೆ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನೀರುಪಾಲು

ರಾಯಚೂರು : ಆಂಧ್ರ ಪ್ರದೇಶದ ಕೊಸಗಿ ಮಂಡಲ ಕಂದಕೂರು ಬಳಿ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಕರ್ನಾಟಕ ಮೂಲದ ಒಂದೇ ಕುಟುಂಬದ ನಾಲ್ವರು ಮುಳುಗಿ ನೀರುಪಾಲಾದ ಘಟನೆ ಶುಕ್ರವಾರ(ಮಾ.28) ನಡೆದಿದೆ ಎಂದು ವರದಿಯಾಗಿದೆ.
ಕರ್ನೂಲು ಜಿಲ್ಲೆಯ ರಾಜೊಳ್ಳಿಬಂಡಾ ಅಣೆಕಟ್ಟಿನ ಹೊಂದಿಕೊಂಡಿರುವ ಕಂದಕೂರು ಬಳಿ ಈ ದುರ್ಘಟನೆ ನಡೆದಿದ್ದು, ಮೃತರನ್ನುರಾಯಚೂರು ​ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ ಮಹೇಶ (28), ಉಮಾವತಿ (35), ರತ್ನಾ (24) ಹಾಗೂ ಶಿವಾನಂದ (24) ಎಂದು ಗುರುತಿಸಲಾಗಿದೆ. ಈ ನಾಲ್ವರು ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಮಾನ್ವಿಯಿಂದ ಮದುವೆ ಕಾರ್ಯಕ್ರಮಕ್ಕೆಂದು ಇವರು ಕಂದುಕೂರು ಗ್ರಾಮಕ್ಕೆ ತೆರಳಿದ್ದರು ಎನ್ನಲಾಗಿದೆ. ಮದುವೆ ಕಾರ್ಯಕ್ರಮ ಮುಗಿದ ಬಳಿಕ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ರಾಜೋಲಿಬಂಡ ಅಣೆಕಟ್ಟಿನ ಬಳಿ ಸ್ನಾನಕ್ಕೆಂದು ಇಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ಈಜಲು ಬಾರದ ಇಬ್ಬರು ಮುಳುಗಿದ್ದು, ಅವರನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ಸೇರಿದಂತೆ ನಾಲ್ವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement