ಬೆಂಗಳೂರು: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ 16 ಮತ್ತು 17ರಂದು ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಇಂದು, ಶನಿವಾರ ಪ್ರಕಟಿಸಲಾಗಿದ್ದು, ಎಲ್ಲ ಐದೂ ವಿಭಾಗಗಳಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಮೊದಲ ರ್ಯಾಂಕ್ ಗಳಿಸಿದ್ದಾರೆ. ರ್ಯಾಂಕ್ಗಳಲ್ಲಿ ಸಿಬಿಎಸ್ಇ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಸಿಇಟಿ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರಕಟಿಸಿದರು. ಇಂಜಿನಿಯರಿಂಗ್ ವಿಭಾಗದಲ್ಲಿ ಯಲಹಂಕ ನ್ಯಾಷನಲ್ ಪಬ್ಲಿಕ್ ಶಾಲೆಯ ಅಪೂರ್ವ್ ಟಂಡನ್, ಪಶುವೈದ್ಯ ಹಾಗೂ ನ್ಯಾಚುರೋಪಥಿ, ಯೋಗ ವಿಜ್ಞಾನ ಕೋರ್ಸ್ಗಳಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಕಾಲೇಜಿನ ರಿಷಿಕೇಶ ನಾಗಭೂಷಣ, ಬಿಎಸ್ಸಿ (ಕೃಷಿ)ಯಲ್ಲಿ ಹಾಲ್ ಪಬ್ಲಿಕ್ ಸ್ಕೂಲ್ನ ಅರ್ಜುನ್ ರವಿಶಂಕರ್, ಬಿ- ಫಾರ್ಮಾದಲ್ಲಿ ನಾರಾಯಣ ಇ- ಟೆಕ್ನೋ ಸ್ಕೂಲ್ನ ಆರ್.ಕೆ.ಶಿಶಿರ್ ಪ್ರಥಮ
ರ್ಯಾಂಕ್ ಪಡೆದಿದ್ದಾರೆ.
ಐದೂ ವಿಭಾಗಗಳಲ್ಲಿ ಮೊದಲ 10 ರ್ಯಾಂಕ್ಗಳಲ್ಲಿ ಬೆಂಗಳೂರಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ವಿದ್ಯಾರ್ಥಿಗಳಿದ್ದಾರೆ. ತುಮಕೂರಿನ ವಿದ್ಯಾರ್ಥಿಯೊಬ್ಬರು ಒಂದು ಸ್ಥಾನ ಪಡೆದ್ದು ಬಿಟ್ಟರೆ ಇತರ ಜಿಲ್ಲೆಗಳ ವಿದ್ಯಾರ್ಥಿಗಳು 10ರೊಳಗೆ ಸ್ಥಾನ ಪಡೆದಿಲ್ಲ.
2,10,829 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮೆರಿಟ್ ಪಟ್ಟಿ ಸಿದ್ಧಪಡಿಸಿದ ನಂತರ ಎಂಜಿನಿಯರಿಂಗ್ ಕೋರ್ಸ್ಗೆ 1.71,656 ವಿದ್ಯಾರ್ಥಿಗಳು, ಕೃಷಿಗೆ 1.39,968, ಪಶುಸಂಗೋಪನೆಗೆ 1,42,820 ಯೋಗ ಮತ್ತು
ನ್ಯಾಚುರೋಪತಿಗೆ 1,42,750 ಹಾಗೂ ಬಿ.ಫಾರ್ಮಾಗೆ 1,74,568 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
’ಪ್ರಶ್ನೆ ಪತ್ರಿಕೆಯ ಮುದ್ರಣ, ತಾಂತ್ರಿಕ ಲೋಪದ ಕಾರಣ ಸಿಇಟಿಯಲ್ಲಿ ಈ ಬಾರಿ ಗಣಿತ ವಿಷಯದಲ್ಲಿ 5, ಭೌತವಿಜ್ಞಾನ, ರಸಾಯನಶಾಸ್ತ್ರ ವಿಷಯದಲ್ಲಿ ತಲಾ 1 ಅಂಕ ಕೃಪಾಂಕದಂತೆ ಒಟ್ಟು 7 ಅಂಕಗಳನ್ನು ಕೃಪಾಂಕ ನೀಡಲಾಗಿದೆ.
ಸಿಇಟಿ ಫಲಿತಾಂಶಕ್ಕೆ https://kea.kar.nic.in ಮತ್ತು https://karresults.nic.in. ಸಂಪರ್ಕಿಸಬಹುದು.
ಸಿಇಟಿ ಪಟ್ಟಿಯಲ್ಲಿ ವಿವಿಧ ಕೋರ್ಸ್ಗಳ ಪ್ರವೇಶಕ್ಕೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ದಾಖಲೆ ಪರಿಶೀಲನಾ ಕಾರ್ಯ ಆ.8ರಿಂದ ಆರಂಭವಾಗಲಿದೆ. ಪೂರ್ಣ ವಿವರಗಳನ್ನು ಪ್ರಾಧಿಕಾರ ಆ.1ರಂದು ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ